Saturday, 12 December 2020

ಹಸಿದ ಹೊಟ್ಟೆಗೆ ನೀನೆ ಅಮೃತ

ನಿನ್ನ‌ ಸಲುಗೆಯ ಒಲವಿನೂಟವ
ಹೆಚ್ಚು ಹೆಚ್ಚು ನೀ ಬಡಿಸಿದೆ
ಬೇಡವೆಂದರು ತುತ್ತು‌ಮಾಡಿ
ನಿನ್ನ ಕೈಯಾರೆ ತಿನಿಸಿದೆ


ಹಸಿದ ಹೊಟ್ಟೆಗೆ ನೀನೆ ಅಮೃತ
ಕುಸಿದ ಜೀವಕೆ ನೀನೆ ಪ್ರೇರಿತ
ನಿನ್ನ ಸನಿಹವೆ ಮನಸಿಗೆ ಹಿತ
ಪ್ರೀತಿಯೊಂದೆ ಜಗದಿ ಶಾಶ್ವತ


ನಾನು ನನ್ನದು ಎಂಬ ಮೋಹಕೆ
ಬಿದ್ದ ಮಾನವ ಉಳಿವನೆ?
ನನ್ನದೆಲ್ಲವು ನಿನ್ನದೆನ್ನುತ
ಹಂಚಿ ತಿನ್ನವ ಕಳೆವನೆ?
 
ಕಲಿಸಿ ಪ್ರೀತಿಯ ನೀನು ನನಗೆ
ಬದಲಿಸಿದೆ ಜಗ ನೋಡುವ ದೃಷ್ಟಿ
ಒಬ್ಬರೊಬ್ಬರ ಅಪ್ಪಿಕೊಂಡರೆ
ಮತ್ತಷ್ಟು ಸುಂದರ ಈ ಸೃಷ್ಟಿ.


-SoNi

No comments:

Post a Comment