Saturday, 12 December 2020

ಹಸಿದ ಹೊಟ್ಟೆಗೆ ನೀನೆ ಅಮೃತ

ನಿನ್ನ‌ ಸಲುಗೆಯ ಒಲವಿನೂಟವ
ಹೆಚ್ಚು ಹೆಚ್ಚು ನೀ ಬಡಿಸಿದೆ
ಬೇಡವೆಂದರು ತುತ್ತು‌ಮಾಡಿ
ನಿನ್ನ ಕೈಯಾರೆ ತಿನಿಸಿದೆ


ಹಸಿದ ಹೊಟ್ಟೆಗೆ ನೀನೆ ಅಮೃತ
ಕುಸಿದ ಜೀವಕೆ ನೀನೆ ಪ್ರೇರಿತ
ನಿನ್ನ ಸನಿಹವೆ ಮನಸಿಗೆ ಹಿತ
ಪ್ರೀತಿಯೊಂದೆ ಜಗದಿ ಶಾಶ್ವತ


ನಾನು ನನ್ನದು ಎಂಬ ಮೋಹಕೆ
ಬಿದ್ದ ಮಾನವ ಉಳಿವನೆ?
ನನ್ನದೆಲ್ಲವು ನಿನ್ನದೆನ್ನುತ
ಹಂಚಿ ತಿನ್ನವ ಕಳೆವನೆ?
 
ಕಲಿಸಿ ಪ್ರೀತಿಯ ನೀನು ನನಗೆ
ಬದಲಿಸಿದೆ ಜಗ ನೋಡುವ ದೃಷ್ಟಿ
ಒಬ್ಬರೊಬ್ಬರ ಅಪ್ಪಿಕೊಂಡರೆ
ಮತ್ತಷ್ಟು ಸುಂದರ ಈ ಸೃಷ್ಟಿ.


-SoNi

ಕರಗಲಿಲ್ಲ ಹೊಟ್ಟೆ

 ಐದಾರು ಮೈಲಿ ಓಡಿದರು ದಿನ
ಕರಗಲಿಲ್ಲ ಹೊಟ್ಟೆ
ಬೆಳಗಿನ ಉಪಗಾರ ತಿನ್ನುವುದನ್ನೆ ಬಿಟ್ಟೆ
ಕರಗಲಿಲ್ಲ ಹೊಟ್ಟೆ
ವ್ಯಾಯಮ ಯೋಗ ಮಾಡಿದರು
ಕರಗಲಿಲ್ಲ ಹೊಟ್ಟೆ
ತಿಂದೆ ದಿನಕ್ಕೆರಡು ಮೊಟ್ಟೆ
ಆದರೂ ಕರಗಲಿಲ್ಲ ಹೊಟ್ಟೆ
ತುಂಬಿತು ವರ್ಷಗಳಿಂದ ಖಾಲಿ ಇದ್ದ ನಮ್ಮೂರ ಕಟ್ಟೆ
ಸ್ವಲ್ಪವೂ ಕರಗಲಿಲ್ಲ ನನ್ನೊಟ್ಟೆ
ಚಿಕ್ಕದಾದೊ ಎಲ್ಲ ಬಟ್ಟೆ
ಕರಗಲೆ ಇಲ್ಲ ಈ ಡೊಳ್ಳು ಹೊಟ್ಟೆ
ಒಮ್ಮೆ ಬಂದರೆ ಹೋಗಲಾರೆ ಎಂದು
ಶಪಥ ಮಾಡಿಹುದೆ ಈ ಹೊಟ್ಟೆ
ಈಗ ಇದು ಎಲ್ಲರಲ್ಲು ಸಾಮಾನ್ಯವಾಗಿರುವುದ
ನೋಡಿ‌ ಕೇಳಿ ಸುಮ್ಮನಾಗಿಬಿಟ್ಟೆ
ಆದರೂ ಬಿಡುವುದಿಲ್ಲ ಓ ಹೊಟ್ಟೆ
ನಿನ್ನ ಕರಗಿಸಿದಿದ್ದರೆ ನಾ ಕೆಟ್ಟೆ.


(ಬೊಜ್ಜನು ದ್ವೇಷಿಸುವವ ಎಲ್ಲ ಮಿತ್ರವೃಂದದ ಪರವಾಗಿ) 😂😃
-SoNi

ಯಾರಿಗೇಳಲಿ‌ ನೋವ

ಯಾರಿಗೇಳಲಿ‌ ನೋವ
ಕೇಳುವಳೆ ಮುನಿದಿರುವಾಗ
ಹೇಳಿದರು ಕೇಳುವ ಸಹನೆ‌ ಇಲ್ಲ
ಹಠವ ಮುಂದಿಟ್ಟು ಕುಳಿತಿಹಳಲ್ಲ


ಎದುರು ನಿಂತರು ನೋಡುವುದಿಲ್ಲ
ಹೆದರಿ ಅತ್ತರು ತಿರುಗುವುದಿಲ್ಲ
ಎನಗೆ ಅವಳಲ್ಲದೆ ಬೇರಿಲ್ಲ
ಅವಳು ನುಡಿಯದೆ ಖುಷಿಯಿಲ್ಲ


ದೋಷಿಯಂತೆ ಕಾಣುವಳೆನ್ನ
ದೂರು ಹೊರಿಸಿ ಕೆಣಕುವಳು
ರೋಸಿ ಹೋದ‌ ಜೀವಕೆ ಇನ್ನ
ಎಷ್ಟು ನೋವನು ಕೊಡುವಳು


ನಗುವ ಮೊಗದಿ ದೇವತೆ ಅವಳು
ನೋಡಿ ನಲಿದ ಮಗು ನಾನು
ಇಂದು ಬರಿ ದುಗುಡ ಹಗಲು ಇರುಳು
ನೊಯಿಸಿ ನೋಯುವ ಮರ್ಮವೇನು?.


ಕಾವ್ಯವಲ್ಲಭ
SoNi

ಜನಿಸಿದೆ ನೀನು

ಜನಿಸಿದೆ ನೀನು
ನನ್ನ ಹೃದಯದ ತಾಳವ ನುಡಿಸಲು
ಜನಿಸಿದೆ ನೀನು
ನನ್ನ ಒಲವಿನ‌ ರಾಗ ರಂಗೇರಿಸಲು
ನಿನ್ನ ಭಾವದ ಲಹರಿ
ನನ್ನ ಜೀವನ ದಾರಿ
ನಿನ್ನನು ಪಡೆದು ನಾ ಧನ್ಯನಾದೆ ನಾರಿ
ಜನಿಸಿದೆ‌ ನೀನು
ನನ್ನ ಕನಸಿಗೆ ನೀರನು ಎರೆಯಲು
ಜನಿಸಿದೆ ನೀನು
ನನ್ನ ಬದುಕಿಗೆ ಬೆಳಕನು ಹಚ್ಚಲು
ನಿನ್ನ ಮೊಗವನು ಕಂಡರೆ ಸಾಕು
ಮನವು ಗರಿ ಬಿಚ್ಚುವುದು ಹಾರಲು
ನಿನ್ನಲೆ ಇರುವುದು ಜೀವವು
ನೀನೆ ಪ್ರೇಮದ ದೈವವು
ಜನಿಸಿದೆ ನೀನು
ನನ್ನ ತಪ್ಪೆಲ್ಲ ತಿದ್ದಲು
ಜನಿಸಿದೆ ನೀನು
ನನ್ನ ಒಪ್ಪಿ ಮುದ್ದಾಡಲು
ಧನ್ಯನು‌ ನಾನು
ನೀನೆ ಭೂಮಿ ಭಾನು
ಜೀವನವೆಲ್ಲ ನಿನ್ನಲೆ ಶರಣು.

SoNi

ಬದುಕು‌ ಹೀಗೇಕೆ‌ ಕಾಡುವುದು

 ಬದುಕು‌ ಹೀಗೇಕೆ‌ ಕಾಡುವುದು

ಬದುಕು ಹೀಗೇಕೆ‌ ಕಾಡುವುದು
ಎಲ್ಲೊ‌ ಇರುವ ಮನಸುಗಳ ಬೆರೆಸಿ
ಆಡುವುದು ಆಡುವುದು
ದಿನವೆಲ್ಲಾ ಜೊತೆಯಲ್ಲೆ ಇರುವಂತೆ ಮಾಡಿ
ನಗಿಸುವುದು, ನಲಿಸುವುದು
ಮತ್ತೊಮ್ಮೆ ದೂರ ದೂರ ಇರಿಸಿ
ನರಳಿಸುವುದು, ಕೊರಗಿಸುವುದು
ಬದುಕು‌ ಹೀಗೇಕೆ‌ ಕಾಡುವುದು
ಆಸೆನಾ ಅರಳಿಸಿ, ಅರಿವನ್ನು ಛೇಡಿಸಿ
ತಮಾಷೆ ಮಾಡುವುದು, ತಮಾಷೆ ನೋಡುವುದು
ಪ್ರೀತಿನ‌‌ ಮೆರೆಸಿ ಇದ್ದಕ್ಕಿದ್ದಂತೆ ಬಾಡಿಸಿ
ಅವಮಾನಿಸುವುದು, ನೋಯಿಸಿ ನಗುವುದು
ಬದುಕು‌ ಹೀಗೇಕೆ‌ ಕಾಡುವುದು
ಬಾ ಎಂದು ಅಪ್ಪುವುದು
ಹೋಗೆಂದು ದೂಡುವುದು
ನಿತ್ಯವು ತರ ತರ ಬಣ್ಣವ ಬಳಿದು
ಕುಣಿಸುವುದು, ಕುಡಿಸುವುದು
ಬದುಕು‌ ಹೀಗೇಕೆ‌ ಕಾಡುವುದು
ಭರವಸೆಯ ಹರಿಸುವುದು
ಕನಸುಗಳ ಪೋಣಿಸುವುದು
ಎಲ್ಲವ ಸುಟ್ಟು ಇದೆ ನಿನ್ನ ಹುಟ್ಟು
ಎಂದು ಕುಗ್ಗಿಸುವುದು, ತಲೆ ತಗ್ಗಿಸುವುದು
ಬದುಕು‌ ಹೀಗೇಕೆ‌ ಕಾಡುವುದು
ಬದುಕು ಹೀಗೇಕೆ‌ ಕಾಡುವುದು

- SoNi

ನಿನ್ನನ್ನ ನೀನೆ‌ ಸುಡುವೆ ಏಕೆ

ನಿನ್ನನ್ನ ನೀನೆ‌ ಸುಡುವೆ ಏಕೆ
ಕೋಪದಿ ಉರಿದು ಮರುಗುವೆ ಹೀಗೇಕೆ
ಸಂಕಟದಿ ನರಳಿ ನರಳಿ
ಎಲ್ಲಾನು ಅಳೆದು ತೂಗುವೆ
ಮತ್ತೇನೊ‌ ಕಳೆದುಕೊಂಡಂತೆ
ಒಬ್ಬಳೆ ಅಳುವೆ
ನಾನಲ್ಲ ದೋಷಿಯು
ನಾ ನಿನ್ನ ವಿಶ್ವಾಸಿಯು
ನಿನ್ನ ಒಲವ ಬಯಸಿ ಬಯಸಿ
ದಿನವು ಸೋತ ಪ್ರೇಮಿಯು
ನೋವುಣಿಸಿ ನಾನು ನಿನಗೆ
ಏನನ್ನ ಪಡೆಯಲಿ
ನೀ ನೊಂದು ಕೂತರೆ
ನಾ ತಾನೆ ಹೇಗೆ ನಲಿಯಲಿ
ನಿನ್ನ ನೋವೂ ನನ್ನದೆಂಬುದ
ನೀನೆ‌ನೆ ಮರೆತೆಯ..
ನೀ ನನ್ನ ಜರಿದೆಯ...
ನೋವೆ ಆದರೆ ನಾನು
ಸುಳಿಯಲ್ಲ ಹತ್ತಿರ
ದೂರದಿ ನೋಡುತ ಕೂತು
ನುಡಿಸುವೆ ಹಿತ ಸ್ವರ
ನೆಮ್ಮದಿಯ ಬಯಸುವೆ ನಿನಗೆ
ನಾನಗಲಾರೆ ಅಪ ಸ್ವರ
ನಮ್ಮ ಪ್ರೀತಿಗೆ ಎಂದಿಗೂ
ಸಿಗದು ಉತ್ತರ.


-SoNi

ತೊರೆದು‌ ಜೀವಿಸಬಹುದೆ ನಲ್ಲೆ ಈ ಪ್ರೀತಿಯನು

ತೊರೆದು‌ ಜೀವಿಸಬಹುದೆ ನಲ್ಲೆ ಈ ಪ್ರೀತಿಯನು
ತೊರೆದು ಜೀವಿಸಬಹುದೆ ನಲ್ಲೆ ಈ ಪ್ರೀತಿಯನು
ತೊರೆಯುವ ಮನಸು ಮಾಡಿದ್ದಾದರು ಹೇಗೆ??
ತೊರೆಯುವ ಮನಸು ಮಾಡಿದ್ದಾದರು ಹೇಗೆ??
ಸುಮ್ಮನೆ ಕುಳಿತರು‌ ನಿನ್ನ ಧ್ಯಾನವೆ ದಿನವು
ಸುತ್ತ ತಿರುಗಿದರು ನಿನ್ನೆ ಕಾಣುವೆ ಕ್ಷಣವು
ನಿನ್ನಲೆ ಜೀವಿಸುವ ನನ್ನ‌ ನೀ ತೊರೆದರೆ
ಮೆಚ್ಚುವನೆ ಪರಮಾತ್ಮ, ಗೆಲ್ಲುವುದೆ ಪ್ರೀತಿ?
ಮರೆಯಾಗುವುದೆ ನಿನ್ನೆಲ್ಲ ನೋವು
ಹೊರೆಯಾಗದೆ ನನ್ನ ನೆನಪ ಕಾವು
ನನ್ನ ಮರೆತು ನಗಬಲ್ಲೆಯೇನು ನೀ
ನಗಬಲ್ಲೆಯೇನು ನೀ.....
ನಿನ್ನ ಹೊರತು ಗೆಲ್ಲಬಲ್ಲೆನೇನು ನಾ
ಗೆಲ್ಲಬಲ್ಲೆನೇನು ನಾ...
ಒಲವ ಕಂದನ‌ ತಳ್ಳಿ, ಒಳಗೊಳಗೆ ಬೇಯಲು
ಅಣಿಮಾಡಿ ಪಂಜು‌ ಹಿಡಿದು ಅಳುವೆ ಒಬ್ಬಳೆ‌ ಏಕೆ
ಪ್ರೀತಿಯ ಅರ್ಥ ತೊರಿಸಿದ ನೀನೆ
ಸೋತಂತೆ ಸೊರಗಿ ದಿನವು ಕೊರಗುವೆ ಏಕೆ..
ನನ್ನ‌ ಮರೆತುಬಿಟ್ಟರು ನೀ
ಮರೆಯಬಲ್ಲೆಯ ನಮ್ಮ‌ ಪ್ರೀತಿಯ?
ನನ್ನ ನೆನಪೆಲ್ಲ‌ ಸುಟ್ಟರು ನೀ
ಸುಡಬಲ್ಲೆಯ ನಿನ್ನದೆ ಅಸ್ತಿಯ
ನಿನ್ನ‌ ಪ್ರತಿ‌ ಉಸಿರಲ್ಲು ಬೆರೆತಿರುವ ನನ್ನ
ತೊರೆಯಬಲ್ಲೆಯ, ತೊರೆದು ಜೀವಿಸಬಲ್ಲೆಯ?
ತೊರೆಯಬಲ್ಲೆಯ, ತೊರೆದು ಜೀವಿಸಬಲ್ಲೆಯ?


-ಕಾವ್ಯವಲ್ಲಭ
SoNi

(ತೊರೆದು‌ ಜೀವಿಸಬಹುದೆ ಹರಿ‌ ನಿನ್ನ ಚರಣಗಳ ಹಾಡು‌ ಎದೆಯಲ್ಲಿ ಪದೆ ಪದೆ ಗುನುತ್ತಿದ್ದಾಗ‌, ಮೂಡಿದ ಪ್ರೇಮ ಕವಿತೆ)