Saturday 12 September 2020

ಬಾಳು‌ ಒಂತರ ಹಿತ್ತಲಲ್ಲಿ ಬೆಳಿಯೊ ಹಾಗಲಕಾಯಿ

ಬಾಳು‌ ಒಂತರ ಹಿತ್ತಲಲ್ಲಿ ಬೆಳಿಯೊ
ಹಾಗಲಕಾಯಿ
ಉರ್ಕೊಂಡ್ ಬೇಸ್ಕೊಂಡ್ ಹೆಂಗ್ ತಿಂದ್ರು
ಹೊಗಲ್ಲ ಕಹಿ

ಗೋಳು ಅನ್ನೋದು ಇದ್ದಿದ್ದೆ ಮುಂದಕ್ಕೆ ನಡಿ
ಅಳ್ತಾ ಬೈತಾ ಕುತ್ಕೊಂಡು ಹೊಡಿಬೇಡ ಬೀಡಿ
ನಾಳೆ ಅನ್ನೊ ನಗ್ನವಾ
ಇಂದೇ ಹುಡುಕುವ ಮಾನವ
ಇಂದು ಮುಂದು ನೋಡದೇನೆ
ಎಲ್ಲ ಬಿಟ್ಟು ಓಡುವ
ಆಸೆನಾ ಹೆಂಗಪ್ಪ ಅದುಮೋದು?
ದ್ವಾಸೆಲೂ ತೂತನ್ನು ಎಣಿಸಬೌದು!
ಭಾಷೆನ ಮರೆತಂಗೆ‌ ನಟಿಸಬಾರ್ದು
ಕಾಸಿಲ್ದೆ ಕನಸಿಗೂ ಹೊಗ್ಬಾರ್ದು

ಬಾಳು‌ ಒಂತರ ಹಿತ್ತಲಲ್ಲಿ ಬೆಳಿಯೊ
ಹಾಗಲಕಾಯಿ
ಉರ್ಕೊಂಡ್ ಬೇಸ್ಕೊಂಡ್ ಹೆಂಗ್ ತಿಂದ್ರು
ಹೊಗಲ್ಲ ಕಹಿ

ಮೂರು ಬಿಟ್ಟು ಬದುಕಿದ್ರೆ ಊರ್ ತುಂಬಾ ಮರ್ಯಾದೆ
ಬಾರಿನಲ್ಲೆ‌ ಕೂತಿದ್ರೆ ಬಾಯ್ತುಂಬ ಹೊಸಗಾದೆ
ಕಟ್ಟ್ಕೊಂಡ ಹೆಂಡ್ತಿನ ಹೊಡಿಬಾರ್ದು
ಮೆಟ್ಕೊಂಡ ಚಪ್ಲಿನಾ ಕಳಿಬಾರ್ದು
ಜಾತ್ರೆಲಿ ಜ್ವರಬಂದ್ರು‌ ಮಲಗ್ಬಾರ್ದು
ಜಾತಿನೆ ನಂಬ್ಕೊಂಡು ಸಾಯ್ಬಾರ್ದು.
ಬಾಳಲ್ಲಿ ಗೋಳು ಒಂದಲ್ಲ ಕೇಳು
ನೈಂಟಿನ ಹಾಕೋಂಡು ಊರ್ ತುಂಬಾ ಹೇಳು

ಬಾಳು‌ ಒಂತರ ಹಿತ್ತಲಲ್ಲಿ ಬೆಳಿಯೊ
ಹಾಗಲಕಾಯಿ
ಉರ್ಕೊಂಡ್ ಬೇಸ್ಕೊಂಡ್ ಹೆಂಗ್ ತಿಂದ್ರು
ಹೊಗಲ್ಲ ಕಹಿ.

-SoNi