ಐದಾರು ಮೈಲಿ ಓಡಿದರು ದಿನ
ಕರಗಲಿಲ್ಲ ಹೊಟ್ಟೆ
ಬೆಳಗಿನ ಉಪಗಾರ ತಿನ್ನುವುದನ್ನೆ ಬಿಟ್ಟೆ
ಕರಗಲಿಲ್ಲ ಹೊಟ್ಟೆ
ವ್ಯಾಯಮ ಯೋಗ ಮಾಡಿದರು
ಕರಗಲಿಲ್ಲ ಹೊಟ್ಟೆ
ತಿಂದೆ ದಿನಕ್ಕೆರಡು ಮೊಟ್ಟೆ
ಆದರೂ ಕರಗಲಿಲ್ಲ ಹೊಟ್ಟೆ
ತುಂಬಿತು ವರ್ಷಗಳಿಂದ ಖಾಲಿ ಇದ್ದ ನಮ್ಮೂರ ಕಟ್ಟೆ
ಸ್ವಲ್ಪವೂ ಕರಗಲಿಲ್ಲ ನನ್ನೊಟ್ಟೆ
ಚಿಕ್ಕದಾದೊ ಎಲ್ಲ ಬಟ್ಟೆ
ಕರಗಲೆ ಇಲ್ಲ ಈ ಡೊಳ್ಳು ಹೊಟ್ಟೆ
ಒಮ್ಮೆ ಬಂದರೆ ಹೋಗಲಾರೆ ಎಂದು
ಶಪಥ ಮಾಡಿಹುದೆ ಈ ಹೊಟ್ಟೆ
ಈಗ ಇದು ಎಲ್ಲರಲ್ಲು ಸಾಮಾನ್ಯವಾಗಿರುವುದ
ನೋಡಿ ಕೇಳಿ ಸುಮ್ಮನಾಗಿಬಿಟ್ಟೆ
ಆದರೂ ಬಿಡುವುದಿಲ್ಲ ಓ ಹೊಟ್ಟೆ
ನಿನ್ನ ಕರಗಿಸಿದಿದ್ದರೆ ನಾ ಕೆಟ್ಟೆ.
(ಬೊಜ್ಜನು ದ್ವೇಷಿಸುವವ ಎಲ್ಲ ಮಿತ್ರವೃಂದದ ಪರವಾಗಿ) 

-SoNi
No comments:
Post a Comment