Sunday 3 July 2016

ಅವಳೆಂಬುದೇ ಭ್ರಮೆ

ಒಲವಿರದೆ ಕಳೆದ ಸಮಯ
ಅವಳ ನೆನೆದು ನೊಂದ ಹೃದಯ
ಏನೋ ಹೇಳಿದೆ ನನ್ನನ್ನು ಕಾಡಿದೆ

ಬದುಕಲ್ಲಿ ನೋವು ಸಹಜ
ಅನುಭವಿಸಬೇಕು ಮನುಜ
ಯಾಕೀ ಯಾತನೆ ತಂದಿದೆ ನನ್ನಲ್ಲಿ ಚಿಂತನೆ

ಕನಸುಗಳ ಗೋಪುರ ಕಟ್ಟಿ
ಒಲವಿಗೆ ಅವಳ ಹೆಸರಿಟ್ಟಿ
ಎಲ್ಲ ಗೆದ್ದವನಂತೆ ಬೀಗಿದೆ
ಮಾಯವಾದಳು, ಕಾರಣವ ಹೇಳದೆ

ಪ್ರೀತಿ ಕೊಂದ ಪಾತಕಿ ಅವಳು
ಸುಳ್ಳು ಹೇಳಿದೊ ಅವಳ ಕಂಗಳು
ಅವಳೆಂಬುದೇ ಭ್ರಮೆ
ಮೋಸಕ್ಕಿಲ್ಲ ಎಂದೂ ಕ್ಷಮೆ!

Tuesday 5 April 2016

ಬಾಳು ಬರೀ ಪರದಾಟ!

ಬೇಸತ್ತ ಮನಸ್ಸಿಗೆ
ಬೆಂಡೆಕಾಯಿ ಗೊಜ್ಜು
ಬೇವರ್ಸಿ ಹೃದಯಕ್ಕೆ
ಬೆಳ್ಳುಳ್ಳಿ ಜಜ್ಜು
ಕುಲಗೆಟ್ಟ ಕನಸಿಗೆ
ನಾಲ್ಕಾಣೆ ಸೆಂಟು
ಮೂರುಬಿಟ್ಟ ಮುನಿಯನಿಗೆ
ಊರೆಲ್ಲಾ ನೆಂಟು

ಏನೈತೆ ಬದುಕಲ್ಲಿ
ನೀನೇಳೋ ತಮ್ಮ
ಬರೆದಿಟ್ಟು ಹಾಯಾಗಿ
ಮಲಗಿಹನು ಬ್ರಹ್ಮ
ಹುಡುಕಾಡು ಹುಡುಕಾಡು
ಬಾಳೆಲ್ಲಾ ಕಾದಾಡು
ಗೆದ್ದರೆ ಕುಣಿದಾಡು
ಸೋತರೆ ಮತ್ತೆ ಆಡು

ಬಾಳು ಬರೀ ಪರದಾಟ
ಕಲಿಸುವುದು ದಿನವೂ ಪಾಠ
ಬಿಡಬೇಡ ಛಲವನ್ನು
ತುಳಿಬೇಡ ಯಾರನ್ನು
ಮರಿಬೇಡ ನಿನ್ನನ್ನು
ಸಲುಹಿದ ಜನರನ್ನು
ನೀ ಮಾಡಿದ್ದೆ ನಿನಗೆ

ನಗುವಿರಲಿ ಕೊನೆವರೆಗೆ J

Saturday 6 February 2016

ವರಿಸು ನನ್ನ ಸ್ವೀಕರಿಸು ನನ್ನ!

ತಂದೆಯಂತೆ ಸಲಹುವೆ
ತಾಯಿ ಮಮತೆನೀಡುವೆ
ಅಣ್ಣನಂತೆ ಕಾಯುವೆ
ಮಗುವಿನಂತೆ ಮುದ್ದಾಡುವೆ
ಜಗತ್ತಿನ ಶ್ರೇಷ್ಟ ಪತಿ ನಾನೇ ಆಗುವೆ
ವರಿಸು ನನ್ನ ಸ್ವೀಕರಿಸು ನನ್ನ

ಪ್ರೇಮಲೋಕ ಕಟ್ಟುವೆ
ಪ್ರೀತಿಗೆ ಒಡೆಯನಾಗುವೆ
ನಿನ್ನ ನಗುವಿಗಾಗಿ
ಪ್ರತಿ ನಿಮಿಷ ಶ್ರಮಿಸಿ ಬಾಳುವೆ
ಸ್ವರ್ಗದಲ್ಲಿನ ಇಂದ್ರಪದವಿ ನಾನೇ ಪಡೆಯುವೆ
ವರಿಸು ನನ್ನ ಸ್ವೀಕರಿಸು ನನ್ನ

ಕಾವ್ಯಧಾರೆ ಹರಿಸುವೆ
ಕನ್ನಡ ನುಡಿ ಮೆರೆಸುವೆ
ಸಂಗೀತ ಲೋಕಕ್ಕೆ
ನಿನ್ನ ಕರೆದೊಯ್ಯುವೆ
ಎಲ್ಲ ಗೆದ್ದ ಮಲ್ಲನಂತೆ ನಾನು ಕುಣಿಯುವೆ
ವರಿಸು ನನ್ನ ಸ್ವೀಕರಿಸು ನನ್ನ

ವರಿಸು ನನ್ನ ಸ್ವೀಕರಿಸು ನನ್ನ :)


smile emoticon

Friday 1 January 2016

ಶುರುವಾಯ್ತು ಹೊಸ ವರುಷ

ಶುರುವಾಯ್ತು ಹೊಸ ವರುಷ
ಜಗದಲ್ಲೆಲ್ಲಾ ಸಂಭ್ರಮ
ನಗುತಿರಿ ಪ್ರತಿ ನಿಮಿಷ
ಬಾಳಲ್ಲಿರಲಿ ನಿತ್ಯ ಚಂದ್ರಮ

ಗುರಿಯೆಡೆಗೆ ಸಾಗಲಿ
ಇಡುವ ಪ್ರತಿ ಹೆಜ್ಜೆ
ಗೆಲುವು ನಿಮ್ಮದಾಗಲಿ
ತೀರ್ಪು ದೇವರಿಚ್ಚೆ 

ಕನಸೆಂಬ ಭೂಮಿಗೆ
ಬಿತ್ತಿ ಶ್ರಮದ ಬೀಜ
ನೀವಿರುವ ನಾಡಿಗೆ
ನೀವೇ ಆಗ ಮಹಾರಾಜ! J J J