Tuesday 5 April 2016

ಬಾಳು ಬರೀ ಪರದಾಟ!

ಬೇಸತ್ತ ಮನಸ್ಸಿಗೆ
ಬೆಂಡೆಕಾಯಿ ಗೊಜ್ಜು
ಬೇವರ್ಸಿ ಹೃದಯಕ್ಕೆ
ಬೆಳ್ಳುಳ್ಳಿ ಜಜ್ಜು
ಕುಲಗೆಟ್ಟ ಕನಸಿಗೆ
ನಾಲ್ಕಾಣೆ ಸೆಂಟು
ಮೂರುಬಿಟ್ಟ ಮುನಿಯನಿಗೆ
ಊರೆಲ್ಲಾ ನೆಂಟು

ಏನೈತೆ ಬದುಕಲ್ಲಿ
ನೀನೇಳೋ ತಮ್ಮ
ಬರೆದಿಟ್ಟು ಹಾಯಾಗಿ
ಮಲಗಿಹನು ಬ್ರಹ್ಮ
ಹುಡುಕಾಡು ಹುಡುಕಾಡು
ಬಾಳೆಲ್ಲಾ ಕಾದಾಡು
ಗೆದ್ದರೆ ಕುಣಿದಾಡು
ಸೋತರೆ ಮತ್ತೆ ಆಡು

ಬಾಳು ಬರೀ ಪರದಾಟ
ಕಲಿಸುವುದು ದಿನವೂ ಪಾಠ
ಬಿಡಬೇಡ ಛಲವನ್ನು
ತುಳಿಬೇಡ ಯಾರನ್ನು
ಮರಿಬೇಡ ನಿನ್ನನ್ನು
ಸಲುಹಿದ ಜನರನ್ನು
ನೀ ಮಾಡಿದ್ದೆ ನಿನಗೆ

ನಗುವಿರಲಿ ಕೊನೆವರೆಗೆ J

No comments:

Post a Comment