Wednesday 31 December 2014

ಅಮರವಾಯ್ತು 2014 - ವರವಾಗಲಿ-2015

ಸೋನಿಯಾ ಗಾಂಧಿ ಮಾಡಿ ಮುದ್ದು
ರಾಹುಲ್ ಗಾಂಧಿ ಆದ ಪೆದ್ದು
ಮೋದಿ ಬಂದ ದೇಶಕ್ಕಾಗಿ ಎದ್ದು
ಪಿ ಎಂ ಆದ ಜನರ ಮನಸ ಗೆದ್ದು

ಸಿದ್ರಾಮಣ್ಣನ ನಿದ್ದೆಗೆ ಸಿಕ್ಕಿಲ್ಲ ಮದ್ದು
ಜನ ನಗ್ತಾ ಇದಾರೆ ಬಿದ್ದು ಬಿದ್ದು
ಹೇಗೋ ಸರ್ಕಾರ ನಡೀತಿದೆ ಎದ್ದು ಬಿದ್ದು
ಯಾರಿಗೂ ಕೇಳ್ತಿಲ್ಲ ದೊಡ್ಡಗೌಡರ ಸದ್ದು
ಸದಾನಂದಗೌಡರಿಗೆ ಮಗ ಕೊಟ್ಟ ಸರಿಯಾದ ಗುದ್ದು
-ಇಷ್ಟೆಲ್ಲರ ನಡುವೆ-
ನಮ್ಮ ಕರ್ನಾಟಕ ಕ್ರಿಕೆಟ್ ಟೀಮ್ ಬೀಗುತಿದೆ ಗೆದ್ದು ಗೆದ್ದು

ಬೆಂಗಳೂರಲ್ಲಿ ಬಿತ್ತು ಕೊನೇಲಿ ಒಂದು ಬಾಂಬು
ಪೊಲೀಸ್ ಹೇಳ್ತಾರೆ ನಾವಿದ್ದೀವಿ ನಂಬು
ಅವರ ಕೈಲಿ ಮುರಿಯಕ್ಕಾಗಲಿಲ್ಲ ಉಗ್ರಗಾಮಿಗಳ ಕೊಂಬು
ಜನ ಮಾತ್ರ ಏರ್ತಾ ಇದಾರೆ ಬಿದಿರು ಬೊಂಬು
ಯಾಕೆ ಬೇಕು ಅನಿಷ್ಟ ಬಾಂಬು.|

ಜಾಸ್ತಿ ಆಗೋಯ್ತು ತಲೆಗೆಟ್ಟವರ ಜ್ಯೋತಿಷ್ಯ
ಅಂತಹವರನ್ನೇ ಕರೆದು ಕೂರಿಸಿಕೊಳ್ಳುತ್ತಾರೆ ನಮ್ ಮೀಡೀಯ
ಕೇಳಿ ನಂಬಿದ್ರೆ ಇವರು ಹೇಳೋ ಭವಿಷ್ಯ
ಚಿಂತೆಯಲ್ಲೇ ಮುಗಿದು ಹೋಗುತ್ತೆ ಮನುಷ್ಯನ ಆಯುಷ್ಯ

ಬೆಂಗಳೂರು ಜನರ ಬಾಯಲ್ಲಿ ವಾಟ್ ಯಾ ವಾಟ್ ಯಾ
ಹೀಗೆ ಮುಂದುವರೆದರೆ ಕನ್ನಡ ಮಾಯಾ!
ಹೊಸ ವರುಷದಿಂದಾದರೂ ಬದಲಾಗಲಿ ಜನರ ಅಭಿಪ್ರಾಯ.
ಬೆಳೆಸಿ ನಮ್ಮ ಕನ್ನಡ ಭಾಷೆಯ.|

ಹೊಸ ವರ್ಷದ ಹಾರ್ದಿಕ ಶುಭಾಶಯ

೨೦೧೫ ತರಲಿ ನಿಮ್ಮಲ್ಲಿ ಹೊಸ ಹೊಸ ಐಡಿಯಾ.|


Friday 19 December 2014

ಕನಸಿಗೆ ಮನಸೊಂದಿದ್ದರೆ ಸಾಕು

ಕನಸು ಕಾಣಲು ಕಾಗುಣಿತ ಏಕೆ
ಕೂಲಿಂಗ್ ಗ್ಲಾಸ್ ಕಣ್ಣಿಗಾಕ ಬೇಕೆ

ವೈಟ್ ಹೌಸಲೂ ಕೂತು ಬಂದೆ
ಒಬಾಮಾ ಜೊತೆ ಫೋಟೋಗೂ ನಿಂದೆ
ಮೋದಿ ಜೊತೆ ಮಾತಾಡಲೆಂದೇ
ಮೈಸೂರಿಗೆ ನಾ ಕರೆತಂದೆ

ಏನು ಬೇಕು .... ಏಕೆ ಬೇಕು
ಕನಸಿಗೆ ಮನಸೊಂದಿದ್ದರೆ ಸಾಕು

ಸೂರ್ಯನ ಜೊತೆ ಸುತ್ತಾಡಿ ಬಂದೆ
ಚಂದ್ರನೊಂದಿಗೆ ಚೆಂಡಾಡಿ ಬಂದೆ
ಗುರುವಿಗೆ ಗುಂಡ್ ಹಾಕ್ಸಿ ಬಂದೆ
ಮಂಗಳನ ಮಂಗ ಮಾಡಿ ಬಂದೆ

ಏನು ಬೇಕು .... ಏಕೆ ಬೇಕು
ಕನಸಿಗೆ ಮನಸೊಂದಿದ್ದರೆ ಸಾಕು

ಉಗ್ರಗಾಮಿಗೆ ಉರುಳು ಬಿಗಿದು
ಅತ್ಯಾಚಾರಿಯ ಅಟ್ಟಾಡಿಸಿ ಹೊಡೆದು
ಭ್ರಷ್ಟರಿಗೆ ಬೂಟಲ್ಲಿ ಬಡಿದು
ಕಳ್ಳರ, ಸುಳ್ಳರ ತಿದ್ದಿ ತೀಡಿ
ಉತ್ತಮ ಸಮಾಜ ಕಟ್ಟಿ ಗೆಲ್ಲಲು
ನಾ ಭುವಿಗೆ ಅವತಾರವ ಎತ್ತಿ ಬಂದೆ

ಏನು ಬೇಕು .... ಏಕೆ ಬೇಕು
ಕನಸಿಗೆ ಮನಸೊಂದಿದ್ದರೆ ಸಾಕು.|

******************


(ಇಷ್ಟೆಲ್ಲಾ ನಾ ಮಾಡಿರುವಾಗ ನೀವು ಒಳ್ಳೊಳ್ಳೆ ಕನಸು ಕಾಣ್ರಪ್ಪ
ಒಂದಾದ್ರು ನನಸು ಮಾಡಿ ಅಷ್ಟೇ ಸಾಕಪ್ಪ :P )

Thursday 3 July 2014

ಇದ್ದರೆ ಸಾಕು ಫೇಸ್ ಬುಕ್ಕು!



ಬೇರೆ ಎಲ್ಲ ಯಾಕ್ ಬೇಕು
ಇದ್ದರೆ ಸಾಕು ಫೇಸ್ ಬುಕ್ಕು

ವೀಡಿಯೋನು ನೋಡಬಹುದು
ಗೇಮನ್ನು ಆಡಬಹುದು
ಚಾಟನ್ನು ಮಾಡುತ್ತಾ ಕಾಲನೂ ಕಳಿಯಬಹುದು
ಫೋಟಾನ ನೋಡುತ್ತಾ ಕಣ್ಣು ಅರಳಿಸಬಹುದು

ಬೇರೆ ಎಲ್ಲ ಯಾಕ್ ಬೇಕು
ಇದ್ದರೆ ಸಾಕು ಫೇಸ್ ಬುಕ್ಕು

ಪೇಜ್ ಅನ್ನು ಕ್ರಿಯೇಟ್ ಮಾಡಿ
ಪಬ್ಲಿಸಿಟೀ ತಗೋಬೌದು
ಗ್ರೂಪು ಗೀಪು ಅಂತ ಮಾಡ್ಕೊಂಡ್
ತಲೆಹರಟೆ ಮಾಡಬೌದು

ಬೇರೆ ಎಲ್ಲ ಯಾಕ್ ಬೇಕು
ಇದ್ದರೆ ಸಾಕು ಫೇಸ್ ಬುಕ್ಕು

ಲೈಕ್ ಕಾಮೆಂಟ್ ಹಾಕ್ಕೊಂಡ್
ಇದೀವ್ ಅಂತ ತೋರ್ಸ್ಕೊಂಡ್
ಇರೋ ಬಾರೋ ಟೈಮ್ ನೆಲ್ಲಾ ಇದ್ರಲ್ಲೇ ಕಳ್ಕೊಂಡ್
ಸೋಮಾರಿ ಸಂಘದ ಸದಸ್ಯ ಆಗ್ ಬೌದು

ಬೇರೆ ಎಲ್ಲ ಯಾಕ್ ಬೇಕು
ಇದ್ದರೆ ಸಾಕು ಫೇಸ್ ಬುಕ್ಕು

ಹುಡ್ಗೀರು ಸಿಗ್ತಾರೆ, ಹುಡುಗ್ರು ಸಿಗ್ತಾರೆ
ಸೆಲೆಬ್ರಿಟಿಗಳು ಹುಡಿಕೊಂಡ್ ಬರ್ತಾರೆ
ಫೇಸ್ಬುಕ್ ಅಂದ್ರೆ ಎಲ್ಲಾರ್ಗೂ ಇಷ್ಟಾನೇ
ಜಾಸ್ತಿ ಅಚ್ಕೊಂಡ್ರೆ ಸ್ವಲ್ಪ ಕಷ್ಟಾನೆ!.... :)


Monday 19 May 2014

ನಾ ನಿನ್ನೊಳಗೆ ಇರಲು

ನೀ ನನ್ನ ಹುಡುಕಾಡಿ
ಕೊರಗದಿರು ಗೆಳತಿ
ನಾ ನಿನ್ನಲ್ಲೇ ಹಾಯಾಗಿ ಮಲಗಿರಲು

ಬರೀ ಕನಸನ್ನೇ ಕಟ್ಟುತ್ತಾ
ಕಳೆಯದಿರು ಸಮಯ
ಒಲವ ಜ್ಯೋತಿ ಎಂದೆಂದೂ ಜೊತೆಗಿರಲು

ದಿನವೂ ನಗುವಿರಲಿ ಮೊಗದಿ
ಮನವು ನಲಿಯುತಲಿ ಸುಖದಿ
ನಾಚಲಿ ಸ್ವರ್ಗ ನಿನ್ನಂಗಳದಿ
ನೀನಾಗು ಖುಷಿಗೆ ಸಾರಥಿ

ಹುಡುಕದಿರು ಗೆಳತಿ
ನಾ ನಿನ್ನೊಳಗೆ ಇರಲು
ಹುಡುಕು ನೆಮ್ಮದಿಯ
ನಿನ್ನದಾಗಲಿ ಎಲ್ಲಾ ಕ್ಷಣಗಳು!

ಬಣ್ಣದ್ ಗೊಂಬೆ!!

ಬಣ್ಣದ್ ಗೊಂಬೆ ಇದ್ದಂಗಿದ್ದಿ
ಬಳುಕ್ತಾ ಬಳುಕ್ತಾ ನಡ್ಕೊಂಡ್ ಬರ್ತಿ
ಖಾಯಂ ಆಗಿ ನನ್ನ ಮನೆ ಸೇರ್ಕೊಂಡ್ ಬಿಡಮ್ಮಿ

ಹಣೆ ಮೇಲೆ ನಿನ್ನ್ ಹೆಸ್ರು ಬಾರ್ಕೊಂಡ್
ಊರೋರ್ಗೆಲ್ಲಾ ತೋರ್ಸ್ಕೊಂಡ್ ಬರ್ತೀನಿ
ನೀನೇ ನನ್ನ ಹೆಂಡ್ತಿ ಅಂತ ಒಪ್ಕೊಂಡ್ ಬಿಡಮ್ಮಿ

ಅರವತ್ತು ಎಕ್ರೆ ಹೊಲ ಬರ್ಕೊಟ್ಟ್
ಹನ್ನೆರಡ್ ಎಕ್ರೆಲಿ ಮನೆ ಕಟ್ತೀನಿ
ಹದಿನಾರ್ ಸಾವ್ರ ಆಳ್ ಗೊಳ್ ಇಡ್ತೀನಿ ನೋಡ್ತಾ ಇರಮ್ಮಿ

ಸ್ವರ್ಗನೇನೆ ಭೂಮಿಗ್ ತಂದು
ನಿನ್ನ ಅದರಾಗ್ ರಾಣಿ ಮಾಡಿ
ಜೀವ್ನ  ಪೂರ್ತಿ ಜಾಲಿ ಮಾಡುವ ನನ್ನೇ ಮದ್ವೆ ಆಗಮ್ಮಿ

ಒಪ್ಕೋಬಿಡಮ್ಮಿ  ಒಪ್ಕೋಬಿಡಮ್ಮಿ
ನಾನೇ ನಿನ್ನ ಗಂಡ ಅಂತ ಒಪ್ಕೋಬಿಡಮ್ಮಿ
ಇಲ್ಲ ಅಂದ್ರೆ ನಾನು ದೇವದಾಸ ಕಣಮ್ಮಿ!!

Wednesday 12 March 2014

ವುಮೆನ್ಸ್ ಹಬ್ಬ!!!


ಕಲರ್ ಪುಲ್ ಕಾಂತೆಯರು ಮಿಂಚುತಿರುವರು
ಕಲರ್ ಕಲರ್ ಉಡುಪು ತೊಟ್ಟು ನಲಿಯುತಿರುವರು

ಕ್ಯಾಂಡಿ ಕ್ರಸ್ಸಿನಂತೆ ಇವರ ಕಣ್ಣ ನೋಟವು
ನಾಚಿ ಕ್ಯಾಮರಾಗೆ ಲುಕ್ಕು ಕೊಡುವ ಮದುರ ಆಟವು
ಡೌಟೇ ಇಲ್ಲ ಇವರದಾಯ್ತು ಈ ಪೂರ್ತಿ ದಿನವೂ
ಯಶಸ್ವಿಯಾಗಲಿ ಇವರ ವುಮೆನ್ಸ್ ಹಬ್ಬವೂ!!!

ಕಲರ್ ಕಲರ್………... :)




Friday 21 February 2014

ಅಭಿನಂದನೆ!!!

ಒಂದೊಳ್ಳೆ ಬೆಲೆ ಸಿಗುತ್ತದೆ ಎಂದು ಗೊತ್ತಿತ್ತು
ಉತ್ತಮ ಶ್ರಮ ಹಾಕುತ್ತಿದ್ದೆ
ವಿಶ್ವಾಸವೂ ಇತ್ತು ನನ್ನಲ್ಲಿ
ಗೆದ್ದೆ,!
ಎಲ್ಲರೂ ಚಪ್ಪಾಳೆ ಹೊಡೆದರು
ಅಭಿನಂದಿಸಿದರು
ನಾನೂ ಖುಷಿಯಿಂದ ಸ್ವೀಕರಿಸಿದೆ..
ಅಭಿನಂದಿಸಿದೆ, ಗೌರವಿಸಿದೆ
ನನ್ನನ್ನಲ್ಲ!
ಈ ಸಮಯವನ್ನು
ಮತ್ತು
ಆ ಸಮಯದ ಮಹತ್ವವನ್ನು!

ಸೋಮೇಶ್ ಎನ್ ಗೌಡ


Thursday 16 January 2014

ಇರಕ್ ಆಗ್ದೆ ಇರುವೆ ಬಿಟ್ಕೊಂಡ್!



ಪಡ್ಡೆಗಳ ಜೊತೆ ಸೇರ್ಕೊಂಡ್
ಉಲ್ಟಾ ಪಲ್ಟಾ ಕನಸು ಕಾಣ್ಕೊನ್ಡ್
ಹುಡ್ಗೀರ್ ನೋಡಿ ಹಲ್ಲು ಗಿಂಚ್ಕೊಂಡ್
ಪ್ರೀತಿ ಗೀತಿ ಅಂತ ಸುತ್ಕೊಂಡ್

Feel ಮಾಡ್ಕೋ Feel ಮಾಡ್ಕೋ
‘LOL’ ಅಂದ್ರೆ  ಗೋಲಿ ಆಡ್ಕೋ!

ಇರೋ ಬಾರೋ ಆಸ್ತಿ ಮಾರ್ಕೊಂಡ್
ಊರಲ್ ಎಲ್ಲಾ ಸಾಲ ಮಾಡ್ಕೊಂಡ್
ಕಣ್ಣೀರಲ್ಲಿ ಕೈಯ ತೊಳ್ಕೊಂಡ್
ಬೀದೀಲಿ ನಿಂತ್ಕೊಂಡ್ ರಂಪ ಮಾಡ್ಕೊಂಡ್

Feel ಮಾಡ್ಕೋ Feel ಮಾಡ್ಕೋ
‘LOL’ ಅಂದ್ರೆ  ಗೋಲಿ ಆಡ್ಕೋ

ಬದ್ಕೋರ್ ನೋಡಿ ಬಾಯಿ ಬಡ್ಕೊಂಡ್
ಬಾರಲ್  ಕುತ್ಕೊಂಡ್  ಎಣ್ಣೆ ಹೊಡ್ಕೊಂಡ್
ಬಣ್ಣದ್ ಮಾತಲ್ ಕಾಗೆ ಹಾರ್ಸ್ಕೊಂಡ್
ಇರಕ್ ಆಗ್ದೆ ಇರುವೆ ಬಿಟ್ಕೊಂಡ್

Feel ಮಾಡ್ಕೋ Feel ಮಾಡ್ಕೋ
‘LOL’ ಅಂದ್ರೆ  ಗೋಲಿ ಆಡ್ಕೋ

-ಸೋಮೇಶ್ ಎನ್ ಗೌಡ

Monday 6 January 2014

ಸಂಭ್ರಮ

ಖುಷಿಯಾಗಿದೆ ಇಂದು ವಿಪರೀತ
ಈ ಖುಷಿಯಲು ಕಾಡಿತು ಹಿತವಾಗಿ ಶೀತ
ನನ್ನನೆ ನಾನು ಮರೆತ್ತಿದ್ದೆ
ನಗಿಸುತಾ ಎಲ್ಲರ ಮನ ಗೆದ್ದಿದ್ದೆ

ಕಣ್ಣಲಿ ಕಾಂತಿಯ ಹೊಳಪುಗಳು
ಮಿಂಚಿದೊ ಮನಸ್ಸಿನ ಆಸೆಗಳು
ನನ್ನಂಚಲಿ ಬಣ್ಣದ ಚಿಟ್ಟೆಗಳು
ಹಾರಾಡಿದೊ ನಲಿಯುತ, ಕ್ಷಣ ಸಿಹಿ ಹೊನಲು!

ಬಾಡಿದ ಹೂವು ನಕ್ಕಿತು ಇಂದು
ಬಾಳುವ ಆಸೆಯ ಮತ್ತೆ ಮನಸಲಿ ತಂದು
ಹಾಡುತ ಕುಣಿದರು ಗೆಳೆಯರು, ಬಂಧು
ಈ ಸಂಭ್ರಮ ನಮ್ಮದಾಗಲಿ ಎಂದೆಂದೂ

- ಸೋಮೇಶ್ ಎನ್ ಗೌಡ

ಹೊಸ ವರುಷ! ತಂದಿತು ಹೊಸ ಉಲ್ಲಾಸ


ಮನ ಮುದುಡಿ ಮಲಗಿತ್ತು
ಆಯಾಸ ತರಿಸಿತ್ತು
ಮೊದಮೊದಲು ಬದುಕಲ್ಲಿ ಬಳಲಿತ್ತು ಗೆಳತಿ
ನೀ ತೊರೆದ ದಿನದಿಂದ ಕೊರಗಿತ್ತು ಗೆಳತಿ

ಮನೆ ದೀಪ ನಂದಿತ್ತು
ಕತ್ತಲೆಯು ಕುಣಿದಿತ್ತು
ಕನಸಲ್ಲಿ ನಿನ್ನೊಲವು ಕಾಡಿತ್ತು ಗೆಳತಿ
ಸುಟ್ಟ ಈ ಹೃದಯಕ್ಕೆ ಇನ್ಯಾರು ಗತಿ?

ಹೊಸ ಹುರುಪು ತಂದಿತ್ತು
ಹೊಸ ಕನಸ ಕಟ್ಟಿತ್ತು
ಮನಸಂದು ಹುಚ್ಚೆಂದು ಕುಣಿದಿತ್ತು ಗೆಳತಿ
ನಿನ್ನ ಓಲೆ ಮತ್ತೆ ಈ ಮನೆಯ ಹೊಕ್ಕಾಗ ಗೆಳತಿ!

ಚಿಗುರೊಡೆದ ಮರದಂತೆ ಸಂಭ್ರಮವು ಎನಗಿಂದು
ಚಲಿಸುವ ಮೋಡಗಳ ತಡೆದು ಮಳೆ ಸುರಿಸು ಬಂದು
ನಲಿಯುವ, ಕುಣಿಯುವ, ಸದಾ ನಗುನಗುತಾ ಬಾಳುವ
ಹಳೆಯ ಕಷ್ಟಗಳನ್ನೆಲ್ಲಾ ಮರೆತು
ಈ ಹೊಸ ವರುಷದಿಂದ !!

(2014 ಎಲ್ಲಾ ಪ್ರೇಮಿಗಳನ್ನು ಒಂದುಗೂಡಿಸಲಿ)

-ಸೋಮೇಶ್ ಎನ್ ಗೌಡ