Friday, 19 December 2014

ಕನಸಿಗೆ ಮನಸೊಂದಿದ್ದರೆ ಸಾಕು

ಕನಸು ಕಾಣಲು ಕಾಗುಣಿತ ಏಕೆ
ಕೂಲಿಂಗ್ ಗ್ಲಾಸ್ ಕಣ್ಣಿಗಾಕ ಬೇಕೆ

ವೈಟ್ ಹೌಸಲೂ ಕೂತು ಬಂದೆ
ಒಬಾಮಾ ಜೊತೆ ಫೋಟೋಗೂ ನಿಂದೆ
ಮೋದಿ ಜೊತೆ ಮಾತಾಡಲೆಂದೇ
ಮೈಸೂರಿಗೆ ನಾ ಕರೆತಂದೆ

ಏನು ಬೇಕು .... ಏಕೆ ಬೇಕು
ಕನಸಿಗೆ ಮನಸೊಂದಿದ್ದರೆ ಸಾಕು

ಸೂರ್ಯನ ಜೊತೆ ಸುತ್ತಾಡಿ ಬಂದೆ
ಚಂದ್ರನೊಂದಿಗೆ ಚೆಂಡಾಡಿ ಬಂದೆ
ಗುರುವಿಗೆ ಗುಂಡ್ ಹಾಕ್ಸಿ ಬಂದೆ
ಮಂಗಳನ ಮಂಗ ಮಾಡಿ ಬಂದೆ

ಏನು ಬೇಕು .... ಏಕೆ ಬೇಕು
ಕನಸಿಗೆ ಮನಸೊಂದಿದ್ದರೆ ಸಾಕು

ಉಗ್ರಗಾಮಿಗೆ ಉರುಳು ಬಿಗಿದು
ಅತ್ಯಾಚಾರಿಯ ಅಟ್ಟಾಡಿಸಿ ಹೊಡೆದು
ಭ್ರಷ್ಟರಿಗೆ ಬೂಟಲ್ಲಿ ಬಡಿದು
ಕಳ್ಳರ, ಸುಳ್ಳರ ತಿದ್ದಿ ತೀಡಿ
ಉತ್ತಮ ಸಮಾಜ ಕಟ್ಟಿ ಗೆಲ್ಲಲು
ನಾ ಭುವಿಗೆ ಅವತಾರವ ಎತ್ತಿ ಬಂದೆ

ಏನು ಬೇಕು .... ಏಕೆ ಬೇಕು
ಕನಸಿಗೆ ಮನಸೊಂದಿದ್ದರೆ ಸಾಕು.|

******************


(ಇಷ್ಟೆಲ್ಲಾ ನಾ ಮಾಡಿರುವಾಗ ನೀವು ಒಳ್ಳೊಳ್ಳೆ ಕನಸು ಕಾಣ್ರಪ್ಪ
ಒಂದಾದ್ರು ನನಸು ಮಾಡಿ ಅಷ್ಟೇ ಸಾಕಪ್ಪ :P )

1 comment:

  1. ಶಹಬಾಷ್ ಕವಿಯೇ... ಚಪ್ಪಾಳೆ...
    'ಉತ್ತಮ ಸಮಾಜ ಕಟ್ಟಿ ಗೆಲ್ಲಲು
    ನಾ ಈ ಭುವಿಗೆ ಅವತಾರವ ಎತ್ತಿ ಬಂದೆ'
    ಹೀಗೆ ಪ್ರತಿಯೊಬ್ಬರೂ ಆಲೋಚಿಸಲಿ ಮತ್ತು ಆಚರಣೆಗೆ ತರಲಿ...

    ReplyDelete