ಬೇರೆ ಎಲ್ಲ ಯಾಕ್ ಬೇಕು
ಇದ್ದರೆ ಸಾಕು ಫೇಸ್
ಬುಕ್ಕು
ವೀಡಿಯೋನು ನೋಡಬಹುದು
ಗೇಮನ್ನು ಆಡಬಹುದು
ಚಾಟನ್ನು ಮಾಡುತ್ತಾ
ಕಾಲನೂ ಕಳಿಯಬಹುದು
ಫೋಟಾನ ನೋಡುತ್ತಾ ಕಣ್ಣು
ಅರಳಿಸಬಹುದು
ಬೇರೆ ಎಲ್ಲ ಯಾಕ್ ಬೇಕು
ಇದ್ದರೆ ಸಾಕು ಫೇಸ್
ಬುಕ್ಕು
ಪೇಜ್ ಅನ್ನು ಕ್ರಿಯೇಟ್
ಮಾಡಿ
ಪಬ್ಲಿಸಿಟೀ ತಗೋಬೌದು
ಗ್ರೂಪು ಗೀಪು ಅಂತ ಮಾಡ್ಕೊಂಡ್
ತಲೆಹರಟೆ ಮಾಡಬೌದು
ಬೇರೆ ಎಲ್ಲ ಯಾಕ್ ಬೇಕು
ಇದ್ದರೆ ಸಾಕು ಫೇಸ್
ಬುಕ್ಕು
ಲೈಕ್ ಕಾಮೆಂಟ್ ಹಾಕ್ಕೊಂಡ್
ಇದೀವ್ ಅಂತ ತೋರ್ಸ್ಕೊಂಡ್
ಇರೋ ಬಾರೋ ಟೈಮ್ ನೆಲ್ಲಾ
ಇದ್ರಲ್ಲೇ ಕಳ್ಕೊಂಡ್
ಸೋಮಾರಿ ಸಂಘದ ಸದಸ್ಯ
ಆಗ್ ಬೌದು
ಬೇರೆ ಎಲ್ಲ ಯಾಕ್ ಬೇಕು
ಇದ್ದರೆ ಸಾಕು ಫೇಸ್
ಬುಕ್ಕು
ಹುಡ್ಗೀರು ಸಿಗ್ತಾರೆ,
ಹುಡುಗ್ರು ಸಿಗ್ತಾರೆ
ಸೆಲೆಬ್ರಿಟಿಗಳು ಹುಡಿಕೊಂಡ್
ಬರ್ತಾರೆ
ಫೇಸ್ಬುಕ್ ಅಂದ್ರೆ ಎಲ್ಲಾರ್ಗೂ
ಇಷ್ಟಾನೇ
ಜಾಸ್ತಿ ಅಚ್ಕೊಂಡ್ರೆ
ಸ್ವಲ್ಪ ಕಷ್ಟಾನೆ!.... :)
"ಸೋಮಾರಿ ಸಂಘದ ಸದಸ್ಯ ಆಗ್ ಬೌದು" ಹ್ಹಹ್ಹಹ್ಹ..
ReplyDeleteಚೆನ್ನಾಗಿ ನಿವಾಳಿಸಿದ್ದೀರಿ ಮುಖಪುಟಕ್ಕೆ...
ನಿಮ್ಮ ಕವನವನ್ನು ಇಲ್ಲಿ share ಮಾಡಿದ್ದೇನೆ ಗೆಳೆಯ:
https://www.facebook.com/groups/kannada3K/permalink/435285689889320/
ಧನ್ಯವಾದಗಳು ಬದರಿ ಸರ್
Delete