Wednesday 27 November 2013

ನಯನ

ಒಂಟಿಯಾಗಿ ಸಾಗಿದೆ ಪಯಣ
ದಾರಿಯುದ್ದಕ್ಕೂ ನೀನಿಲ್ಲದ ಮೌನ
ಮೋಡಿ ಮಾಡಿ ಸೆಳೆದಿದೆ ನನ್ನ
ಅದುವೇ ನಿನ್ನ ಸುಂದರ "ನಯನ"
ನಾ ಮುಳುಗಿ ಹೋಗಿರುವೆ ಮಾಡುತ್ತಾ ಅದರ ದ್ಯಾನ
ನಿನ್ನ ನಯನ,  ನನಗೆ ಪ್ರಾಣ
ನಿನಗೆ  ಆಕರ್ಷಕ ನಯನ ಕರುಣಿಸಿದ  ದೇವಗೆ ಎನ್ನ ನಮನ

ಓ ಗೆಳತಿ
ಆ ಸುಂದರ ನಯನಗಳಲ್ಲಿ ಬಚ್ಚಿಟ್ಟು ನನ್ನ
ಸಾರ್ಥಕಗೊಳಿಸು ಈ ಪಯಣಿಗನ ಪಯಣ! 

-ಸೋಮೇಶ್ ಎನ್  ಗೌಡ