Monday 19 May 2014

ಬಣ್ಣದ್ ಗೊಂಬೆ!!

ಬಣ್ಣದ್ ಗೊಂಬೆ ಇದ್ದಂಗಿದ್ದಿ
ಬಳುಕ್ತಾ ಬಳುಕ್ತಾ ನಡ್ಕೊಂಡ್ ಬರ್ತಿ
ಖಾಯಂ ಆಗಿ ನನ್ನ ಮನೆ ಸೇರ್ಕೊಂಡ್ ಬಿಡಮ್ಮಿ

ಹಣೆ ಮೇಲೆ ನಿನ್ನ್ ಹೆಸ್ರು ಬಾರ್ಕೊಂಡ್
ಊರೋರ್ಗೆಲ್ಲಾ ತೋರ್ಸ್ಕೊಂಡ್ ಬರ್ತೀನಿ
ನೀನೇ ನನ್ನ ಹೆಂಡ್ತಿ ಅಂತ ಒಪ್ಕೊಂಡ್ ಬಿಡಮ್ಮಿ

ಅರವತ್ತು ಎಕ್ರೆ ಹೊಲ ಬರ್ಕೊಟ್ಟ್
ಹನ್ನೆರಡ್ ಎಕ್ರೆಲಿ ಮನೆ ಕಟ್ತೀನಿ
ಹದಿನಾರ್ ಸಾವ್ರ ಆಳ್ ಗೊಳ್ ಇಡ್ತೀನಿ ನೋಡ್ತಾ ಇರಮ್ಮಿ

ಸ್ವರ್ಗನೇನೆ ಭೂಮಿಗ್ ತಂದು
ನಿನ್ನ ಅದರಾಗ್ ರಾಣಿ ಮಾಡಿ
ಜೀವ್ನ  ಪೂರ್ತಿ ಜಾಲಿ ಮಾಡುವ ನನ್ನೇ ಮದ್ವೆ ಆಗಮ್ಮಿ

ಒಪ್ಕೋಬಿಡಮ್ಮಿ  ಒಪ್ಕೋಬಿಡಮ್ಮಿ
ನಾನೇ ನಿನ್ನ ಗಂಡ ಅಂತ ಒಪ್ಕೋಬಿಡಮ್ಮಿ
ಇಲ್ಲ ಅಂದ್ರೆ ನಾನು ದೇವದಾಸ ಕಣಮ್ಮಿ!!

2 comments:

  1. ಹಂಗೇ ಆಗ್ಲಿ ಇನಿಯಾ
    ಅಂತದ್ಲು ಹುಡ್ಗೀ!

    ಗ್ರಾಮೀಣ ಭಾಷಾ ಸೊಗಡಿನ ವಿಶಿಷ್ಷ ಕವನ.

    ReplyDelete