Saturday, 12 December 2020

ಬದುಕು‌ ಹೀಗೇಕೆ‌ ಕಾಡುವುದು

 ಬದುಕು‌ ಹೀಗೇಕೆ‌ ಕಾಡುವುದು

ಬದುಕು ಹೀಗೇಕೆ‌ ಕಾಡುವುದು
ಎಲ್ಲೊ‌ ಇರುವ ಮನಸುಗಳ ಬೆರೆಸಿ
ಆಡುವುದು ಆಡುವುದು
ದಿನವೆಲ್ಲಾ ಜೊತೆಯಲ್ಲೆ ಇರುವಂತೆ ಮಾಡಿ
ನಗಿಸುವುದು, ನಲಿಸುವುದು
ಮತ್ತೊಮ್ಮೆ ದೂರ ದೂರ ಇರಿಸಿ
ನರಳಿಸುವುದು, ಕೊರಗಿಸುವುದು
ಬದುಕು‌ ಹೀಗೇಕೆ‌ ಕಾಡುವುದು
ಆಸೆನಾ ಅರಳಿಸಿ, ಅರಿವನ್ನು ಛೇಡಿಸಿ
ತಮಾಷೆ ಮಾಡುವುದು, ತಮಾಷೆ ನೋಡುವುದು
ಪ್ರೀತಿನ‌‌ ಮೆರೆಸಿ ಇದ್ದಕ್ಕಿದ್ದಂತೆ ಬಾಡಿಸಿ
ಅವಮಾನಿಸುವುದು, ನೋಯಿಸಿ ನಗುವುದು
ಬದುಕು‌ ಹೀಗೇಕೆ‌ ಕಾಡುವುದು
ಬಾ ಎಂದು ಅಪ್ಪುವುದು
ಹೋಗೆಂದು ದೂಡುವುದು
ನಿತ್ಯವು ತರ ತರ ಬಣ್ಣವ ಬಳಿದು
ಕುಣಿಸುವುದು, ಕುಡಿಸುವುದು
ಬದುಕು‌ ಹೀಗೇಕೆ‌ ಕಾಡುವುದು
ಭರವಸೆಯ ಹರಿಸುವುದು
ಕನಸುಗಳ ಪೋಣಿಸುವುದು
ಎಲ್ಲವ ಸುಟ್ಟು ಇದೆ ನಿನ್ನ ಹುಟ್ಟು
ಎಂದು ಕುಗ್ಗಿಸುವುದು, ತಲೆ ತಗ್ಗಿಸುವುದು
ಬದುಕು‌ ಹೀಗೇಕೆ‌ ಕಾಡುವುದು
ಬದುಕು ಹೀಗೇಕೆ‌ ಕಾಡುವುದು

- SoNi

No comments:

Post a Comment