Friday, 26 December 2025

ನಿನ್ನ ಪ್ರೇಮಿ ನಾನು

ನಿನ್ನ‌ ಪ್ರೇಮಿ‌ ನಾನು
ಸದಾ ನಿನ್ನೆ ಪ್ರೀತಿಸುವೆನು

ಮೀಸೆ ಚಿಗುರೊಡೆಯುವ ವಸಂತಖುತುವಲ್ಲಿ
ನನಗಾಗಿ ಒಲುಮೆಯ ತಂದವಳು ನೀನು
ಬಡತನದಲ್ಲಿ ಬೇಗಿದ್ದ ಈ ಜೀವಕ್ಕೆ
'ಸಿರಿ' ತುಂಬಿ ಪ್ರೀತಿ ನೀಡಿದ ಹೃದಯವಂತೆ

ನಿನ್ನ‌ ಪ್ರೇಮಿ‌ ನಾನು
ಸದಾ ನಿನ್ನೆ ಪ್ರೀತಿಸುವೆನು

ಬರಡಾಗಿದ್ದ ಈ ಮನದಲ್ಲಿ ಭಾವನೆಗಳ
ಹೊತ್ತಿಸಿದ ಭಾವಕನ್ಯೆ ನೀನು
ಬಣ್ಣದ ಮಾತನ್ನೆ ಬಲವಾಗಿಸಿಕೊಂಡವರ ಮಧ್ಯೆ
ಬಂಧನ ಬೆಸೆದು ಬದುಕಾದವಳು ನೀನು

ನಿನ್ನ‌ ಪ್ರೇಮಿ‌ ನಾನು
ಸದಾ ನಿನ್ನೆ ಪ್ರೀತಿಸುವೆನು

ನನಗಾಗಿ ಹರಕೆಗಳ ಹೊತ್ತವಳು ನೀನು
ನೋವಲ್ಲು ನಗುವ ಕನಗಾಂಗಿ
ಗುಟ್ಟಾಗಿ ಪ್ರೀತಿಯ ಸೆರಗಲ್ಲಿಟ್ಟುಕೊಂಡು
ಅನುದಿನವು ಸಲುಹಿದ ಮಾತಂಗಿ

ನಿನ್ನ‌ ಪ್ರೇಮಿ‌ ನಾನು
ಸದಾ ನಿನ್ನೆ ಪ್ರೀತಿಸುವೆನು

ಕಷ್ಟದಲು, ಇಷ್ಟದಲು ಜೊತೆಯಿದ್ದವಳು ನೀನು
ಕನಸಲ್ಲು ಕಾಡುವ ಮೋಹನಾಂಗಿ
ಬೆಟ್ಟದಷ್ಟು ನೋವನ್ನ ನುಂಗಿದವಳು ನೀನು
ಆದರೂ ಪ್ರೀತಿಯೆ ಬಡಿಸಿದ ಜಗನ್ಮೋಹಿನಿ

ನಿನ್ನ‌ ಪ್ರೇಮಿ‌ ನಾನು
ಸದಾ ನಿನ್ನೆ ಪ್ರೀತಿಸುವೆನು

ನನ್ನ ಪಾಲಿಗೆ ಅದೃಷ್ಟದ ದೇವತೆ ನೀನು
ಕೊನೆಯವರೆಗೂ ಜೊತೆಯಿದ್ದು ಹರಸು ನನ್ನನು
ಕಷ್ಟದಲಿ‌ ಕೊಡು ನನಗೂ ಪಾಲನ್ನು
ನಿಷ್ಠುರವಾಗಿ ದೂರದಿರು ಈ ನಿನ್ನ ಒಲವನ್ನು

ನಿನ್ನ‌ ಪ್ರೇಮಿ‌ ನಾನು
ಸದಾ ನಿನ್ನೆ ಪ್ರೀತಿಸುವೆನು

ಪ್ರೀತಿಯ ವ್ಯಾಖ್ಯಾನ ತಿಳಿಸಿದ ಗುರು ನೀನು
ನಿನ್ನ ಆರಾಧಿಸುವ ಭಕ್ತ ನಾನು
ನನ್ನೆಲ್ಲಾ ಭಾವನೆ ಬೆಸೆದಿರುವುದೇ ನಿನ್ನೊಳಗೆ
ನೀನಿಲ್ಲದೆ ಉಳಿದೀತೆ ನನ್ನೀ ಪ್ರೇಮಕತೆ

ನಿನ್ನ‌ ಪ್ರೇಮಿ‌ ನಾನು
ಸದಾ ನಿನ್ನೆ ಪ್ರೀತಿಸುವೆನು
ನಿನಗಾಗಿ ಮಿಡಿವ ಈ ಹೃದಯವನು
ಒಮ್ಮೆ ಅಪ್ಪಿ ಮುದ್ದಾಡು ನೀನು

ನಿನ್ನ‌ ಪ್ರೇಮಿ‌ ನಾನು
ಸದಾ ನಿನ್ನೆ ಪ್ರೀತಿಸುವೆನು

-ಕವಿಸೋನಿ

No comments:

Post a Comment