Friday, 26 December 2025

ಹೇಗೆ ತಾನೆ ಪೀಡಿಸಲಿ ನನ್ನೆ ಪ್ರೀತಿಸು ಎಂದು

 ಹೇಗೆ ತಾನೆ ಪೀಡಿಸಲಿ‌ ನನ್ನೇ ಪ್ರೀತಿಸು ಎಂದು
ನಿನ್ನೆಲ್ಲಾ ಭಾವಗಳು ಪರರ ಸುತ್ತಿರುವಾಗ
ಏನು ಅಂತ ತೋರಿಕೊಳ್ಳಲಿ‌ ಎದುರು ಬಂದು
ನಿನ್ನ ಬಂಧುಗಳ ಪಟ್ಟಿಯಲ್ಲಿ‌ ನಾನಿಲ್ಲದಿರುವಾಗ

ಒಲವೆಂಬ ಕೆರೆಯಲ್ಲಿ ಜೊತೆಯಾಗಿ ಈಜಾಡಿ
ದಡ ಸೇರುವ ಆಸೆಯಲಿ ಬಹುದೂರ ಬಂದೆ ನಾ
ನಂಬುಗೆಯ ಅಸ್ತವನು ಬಿಗಿಯಾಗಿ ಹಿಡಿದು ಸುಳಿಗಳಿಂದ ಪಾರು ಮಾಡಿದವಳು ನೀನಲ್ಲವೇನಾ?

ಈಗೇಕೆ ನನ್ನನು ನಡುಮದ್ಯ ಬಿಟ್ಟೋದೆ
ಭಾರದ‌ ಮನಸಿನಲಿ ಬಹುದೂರ ನೀನೋದೆ?
ಹೀಗೇಕೆ ನನ್ನೀಗ ಒಂಟಿಯಾಗಿಸಿದೆ
ನೀನಿಲ್ಲದೆಯು ಬದುಕುವ ಪರಿ ಕಲಿಸದೆ!

ಸರಿಯೇನು? ಸರಿಯೇನು ನಿನ್ನ‌ ಈ ನಡೆಯು
ಖುಷಿಕೊಡುವುದೇ ನಿನಗೆ ಪರರ ಸಂಗದ ಕತೆಯು
ಭಲವಂತದಿಂದ ನಾ ಕರೆಯಲಾರೆ, ಭಗವಂತನಲ್ಲು ನಾ ಬೇಡಲಾರೆ
ಹೋಗಿಬಿಡು ನಿನಗೆ ಸುಖವಿರುವ ಕಡೆಗೆ
ಹರಸುವೆನು ನಾನೆಂದು ಗೆಲುವನ್ನೆ ನಿನಗೆ
ಹರಸುವೆನು ನಾನೆಂದು ಗೆಲುವನ್ನೆ ನಿನಗೆ

ಹೇಗೆ ತಾನೆ ಪೀಡಿಸಲಿ‌ ನನ್ನೇ ಪ್ರೀತಿಸು ಎಂದು
ನಿನ್ನೆಲ್ಲಾ ಭಾವಗಳು ಪರರ ಸುತ್ತಿರುವಾಗ

-ಕವಿಸೋನಿ

No comments:

Post a Comment