ನೀ ಅರಿತಷ್ಟು ನನ್ನ
ಅರಿಯಲಾರರು ಇನ್ನಾರು
ನೀ ಕೊಟ್ಟಷ್ಟು ಪ್ರೀತಿಯಅರಿಯಲಾರರು ಇನ್ನಾರು
ಕೊಡುವರೆ ಇನ್ನೊಬ್ಬರು
ನೀ ಬರಿ ಹೆಸರಲ್ಲ
ನೀ ಉಸಿರೂ ಅಲ್ಲ
ನೀ ನನ್ನೊಳಗಿನ ಭಾವ
ನೀ ನನ್ನದೇ ಜೀವ!!!
ನೀ ನನ್ನದೇ ಜೀವ!!!
ಎಲ್ಲಿ ಹೋದರು ನಾನು
ಅಲ್ಲೂ ಇರುವೆ ನೀನು
ಸುಮ್ಮನೆ ಕೂತರು
ಕಚಗುಳಿ ಕೊಟ್ಟು ಕಾಡುವ ಜಾನು
ಬದುಕಬಲ್ಲನೆ? ನಿನ್ನ ಬಿಟ್ಟು ನಾನು!
ನೀ ನನ್ನ ಬದುಕಿನ ಸಿಹಿಜೇನು!
ನೀ ಬರಿ ಹೆಸರಲ್ಲ
ನೀ ಉಸಿರೂ ಅಲ್ಲ
ನೀ ನನ್ನೊಳಗಿನ ಭಾವ
ನೀ ನನ್ನದೇ ಜೀವ!!!
ನೀ ನನ್ನದೇ ಜೀವ!!! 💙💚
-ಕವಿಸೋನಿ
No comments:
Post a Comment