Monday, 28 October 2019

ಅಂದವಾದ ಹೆಣ್ಣಿಗೆ!

ಅಂದವಾದ ಹೆಣ್ಣಿಗೆ
ನೂರು ಕಣ್ಣಿನ ಕಾಟವು
ಎಲ್ಲೆ‌ ಮುಂದೆ ಬಂದರು
ಗಂಡು ಮೃಗಗಳ ಸ್ವಾರ್ಥವು
ಎಲ್ಲ ದಾಟಿ ಗೆಲ್ಲುವ
ಹೆಣ್ಣಿಗಿಹುದು ಛಲವು
ಭಂಡ ಗಂಡಿನ ಎದೆಯನು
ಸೀಳಿ ನಿಲ್ಲುವ ಬಲವು
ಅವಳು ಜಾಣ್ಮೆಯ ಶಾರದೆ
ಅವಳಿಗಿಹುದು ಗಂಡೆದೆ
ಮೋಹ ಪಾಶಕೆ ಸಿಲುಕದೆ
ಬಾಳ ಸವಿಯುವ‌ ತಾಳ್ಮೆಯು!

-SoNi

(ಎಷ್ಟೊ‌ ಹೆಣ್ಣುಗಳು ಹೊರಗೆ ದುಡಿತೀನಿ‌ ಅಂತ‌ ಹೋದಾಗ‌ ಗಂಡು ಮೃಗಗಳು‌ ಅವಳನ್ನು ಅವಳ ಪಾಡಿಗೆ ಕೆಲಸ ಮಾಡಲು ಬಿಡದೆ ಕೆಣಕುವ ಕೆಟ್ಟ ಮನಸುಗಳಿಗೆ, ಅಂತ ಕೆಟ್ಟ ಮನಸುಗಳ‌ ಕಡೆಗೆ ಗಮನ ಕೊಡದೆ ..ತನ್ನ ಗುರಿ ತಲುಪುವ Strong ಹೆಣ್ಣುಗಳಿಗೆ..ಈ‌ ಕವನ)


Sunday, 27 October 2019

ನಿನ್ನ ಕಾಣದೆ ಕಣ್ಣಿಗೆ

ನಿನ್ನ ಕಾಣದೆ ಕಣ್ಣಿಗೆ
ಕಂಡದ್ದೆಲ್ಲ‌ ಮಂಜಾಗಿದೆ
ನೀನು ಬಾರದೆ ಎದುರಿಗೆ
ದೂರ‌ ನಿಂತೆ ಕಾಡಿದೆ
ಕದ್ದು‌ ನಿನ್ನ ಹುಡುಕುವ
ಆಟ ನಿಲ್ಲಿಸಲಾರದೆ
ನಾನು ದಿನವೂ‌ ಸೋತಿದೆ
ಸೋತು ಮತ್ತೂ‌ ಹುಡುಕಿದೆ
ಬೇಗ ಬಂದು ಮೆಲ್ಲಗೆ
ನೀ ಉಪಚರಿಸಬಾರದೆ
ಮಂಜಾದ ಈ ಕಣ್ಣಿಗೆ
ಬೆಳಕೊಂದು‌ ಬೇಕಿದೆ
ನಿನ್ನ ಕಾಣಲು ಕಾದಿದೆ!
ನಿನ್ನೆ ಕಾಣಲು ಕಾದಿದೆ!


Friday, 21 June 2019

ಎಲ್ಲ ಮರೆತು ನಗುತಿರು ಮನವೇ!!

ಎಲ್ಲ ಮರೆತು
ನಗುತಿರು ಮನವೇ
ನಗುವೇ ಜೀವನದ ಗುಟ್ಟು
ನೆಮ್ಮದಿ ಕಲಿತು
ಬಾಳು ಸುಖದಿ
ನಿನ್ನೊಳಗಿನ ಆಸೆಯ ಬಿಟ್ಟು
ಎಲ್ಲಾ ಕ್ಷಣಿಕ!
ಇಲ್ಯಾರು ಪ್ರಮಾಣಿಕ?
ನಲಿವಿಗೆ ನೊಗವನು ಕಟ್ಟು
ನಿನ್ನಲಿ ನೀನು
ಬದುಕಿದರೆ ಸಿಹಿ ಜೇನು
ಬೆಳೆಸು ಕನಸಿನ‌ ಗಿಡ ನೆಟ್ಟು
ಗುರಿಯನು ಹಿಡಿದು
ಗುರು ಹಿರಿಯರ ನೆನೆದು
ಗೆಲುವಿನ ಬಾಗಿಲು ತಟ್ಟು
ಒಲವಿನ ದೋಣಿಲಿ
ಚಲಿಸುವ ನಿನಗೆ
ಪ್ರತಿದಿನವೂ ಹೊಸ ಹುಟ್ಟು!!

ಎಲ್ಲ ಮರೆತು
ನಗುತಿರು ಮನವೇ
ನಗುವೇ ಜೀವನದ ಗುಟ್ಟು!!

ಮುಗಿಯದಂತ ಮಾತಿದೆ ಸಾವಿರ!

ನಿತ್ಯವೂ... ನಿನ್ನ ಜೊತೆ
ಒಂದೆರಡು ಮಾತಾನಾಡೊ ಬಯಕೆಯೂ
ನಿನ್ನಯ... ಧ್ವನಿಯ ಕೇಳಿ
ಮಂದಹಾಸ ಬೀರಿಬಿಡುವ ಆಸೆಯೂ
ತಪ್ಪು ತಿಳಿಯಬೇಡ ನನ್ನ ಪ್ರಾರ್ಥನೆ
ತಂಟೆಮಾಡೊ ಹುಡುಗನಲ್ಲ ಸುಮ್ಮನೆ
ತೋಚಿದೆಲ್ಲ ಹೇಳಲಾರೆ ಪಟ್ಟನೆ
ತೋಡಿಕೊಳ್ಳಬೇಕು ನನ್ನ ಎಲ್ಲ ಯಾತನೆ
ನಿತ್ಯವೂ... ನಿನ್ನ ಜೊತೆ
ಒಂದೆರಡು ಮಾತಾನಾಡೊ ಬಯಕೆಯೂ
ನಿನ್ನಯ... ಧ್ವನಿಯ ಕೇಳಿ
ಮಂದಹಾಸ ಬೀರಿಬಿಡುವ ಆಸೆಯೂ
ಮುಗಿಯದಂತ ಮಾತಿದೆ ಸಾವಿರ
ಮುಪ್ಪಾದರು ತೀರದಷ್ಟು ಕಾತುರ
ಮುನಿಯಬೇಡ ಎಂದು ಕೂಡ ಅಪ್ಸರ
ಮುದ್ದು ಮುಖಕೆ ಪೆದ್ದನಾಗಿಹ ಚಂದಿರ
ನಿತ್ಯವೂ... ನಿನ್ನ ಜೊತೆ
ಒಂದೆರಡು ಮಾತಾನಾಡೊ ಬಯಕೆಯೂ
ನಿನ್ನಯ... ಧ್ವನಿಯ ಕೇಳಿ
ಮಂದಹಾಸ ಬೀರಿಬಿಡುವ ಆಸೆಯೂ
ಗಾಳಿಯಲ್ಲು ನಿನ್ನ ತಬ್ಬಿ ಸೋತಿದೆ
ದಾಳಿ ಮಾಡಿ ನನ್ನ ಮನವ ಕಾಡಿದೆ
ಬಾಳಿನಲ್ಲಿ ನಿನ್ನ ಒಲವೆ ಬೇಡಿದೆ
ಆಳಿನಂತೆ ನಿನಗೆ ದುಡಿಯಬೇಕಿದೆ
ನಿತ್ಯವೂ... ನಿನ್ನ ಜೊತೆ
ಒಂದೆರಡು ಮಾತಾನಾಡೊ ಬಯಕೆಯೂ
ನಿನ್ನಯ... ಧ್ವನಿಯ ಕೇಳಿ
ಮಂದಹಾಸ ಬೀರಿಬಿಡುವ ಆಸೆಯೂೂ

ಬಿಡು ನೀ ಬೇಸರ!

ಬಿಡು ನೀ ಬೇಸರ
ನೋಡಲಾರ ನೇಸರ
ಯಾಕಿಷ್ಟು ಹುಸಿಕೋಪ
ಮಗುವಂತೆ ಅವನು ಪಾಪ
ಬಿಡು ನೀ ಬೇಸರ
ನೋಡಲಾರ ನೇಸರ
ಆ ಮುದ್ದು ಮುಖಕೆ
ಇನ್ನೆಷ್ಟು ಕಾಟ ಕೊಡುವೆ ನೀನು ದಿನವೂ
ಅದಕೂನು ಆಸೆ
ನಗಬೇಕು ಎಂದು ಪ್ರತಿ ಕ್ಷಣ ಕ್ಷಣವೂ
ಬಿಡು ನೀ ಬೇಸರ
ನೋಡಲಾರ ನೇಸರ
ಕಣ್ಣಿರ ಹರಿಸುತಿರಬೇಡ
ಕಣ್ಣಿಗೂ ಸ್ವಲ್ಪ ಬಿಡುವಿರಲಿ
ಮೌನಕ್ಕೆ ಶರಣಾಗಬೇಡ
ಮಾತಿಗೂ ನಿನ್ನ ಸ್ನೇಹ ಬೆಳೆಯಲಿ
ಬಿಡು ನೀ ಬೇಸರ
ನೋಡಲಾರ ನೇಸರ
ಸುಖವನ್ನೆ ಉಂಡ ಅದೆಷ್ಟೋ ಜನರು
ಖುಷಿಯಾಗಿ‌ ಇಲ್ಲ‌ ಇಂದು
ಕಷ್ಟವನೆ ಎಣಿಸಿ ನಷ್ಟವನು ಪೋಣಿಸಿ
ಗೆದ್ದವರ ಸಂಖ್ಯೆ ಮುಂದು
ಬಿಡು ನೀ ಬೇಸರ
ನೋಡಲಾರ ನೇಸರ!!


Thursday, 6 June 2019

ನಾ ರಸಿಕನೂ ನೀ ಚೆಲುವೆಯೂ!


ಆ...ಕೆಂಪು ತುಟಿಯ
ನಾ ಕಚ್ಚಿ ಬಿಡಲೆ
ನಿನ್ನಾ... ಕಣ್ಣಿನಲ್ಲಿ
ನನ್ನ ಕಣ್ಣು ಇಡಲೆ
ಸರಸಕೆ‌ ಇದು ಸಮಯವು
ಸರಿಸು ನೀ ನಾಚಿಕೆ
ವಯಸಲಿ ಇದು ಸಹಜವು
ಮರೆತುಬಿಡು ಅಂಜಿಕೆ

ನಾ....ರಸಿಕನೂ
ರಸವಿದ್ಯೆ ಪರಿಣಿತನು
ಸರಸ ಆಡುತ
ಮೈಯನ್ನೆ ಮರೆಯುವೆನು
ನೀ ಚೆಲುವೆಯೂ
ಚೆಲುವಲ್ಲೆ ಬೆಳೆದವಳು
ಚೆಂದ ಎನ್ನುವ
ಪದವನ್ನೆ ನುಂಗಿಹಳು!

ಸನಿಹ ಇರುಲು ನೀ ಈಗ
ತುಂಬಾ ತುಂಟ ನಾನು
ಸಹಿಸಿಬಿಡು ನನ್ನ ತರಲೆ
ಹರಿದು ಹೋಗಲಿ ಜೇನು
ಆ.....ಕೆಂಪು ತುಟಿಯ
ನಾ ಕಚ್ಚಿ ಬಿಡಲೆ
ಆ ತುಂಟ ನಗೆಯ
ಮೆಚ್ಚಿ ಜಗ ಮರೆಯಲೆ!



Tuesday, 28 May 2019

Remember me! I am your best Friend!

Where do you all go?
Leaving me alone here
Where do you all go?
Have you forgotten all the kiddish thing we did
Dont you think you cannot live without me!
I will always come in your dream and pull your legs!!!
Remember me, remember me,
i am your best friend... I am your best friend!
Hope you will cherish the moment we had
Dont say good bye to me...
don't ever say good bye to me:
We will meet again...
We will meet again and again!
Remember me, I am your best friend!

ಓ ಜೀವ ಏನಾಯ್ತು!

ಹೊಡೆದೋದ ಹೃದಯಕ್ಕೆ
ಹೊಡಿಬೇಡ ಮತ್ತಷ್ಟು
ಹೊರಲಾರೆ ಇನ್ನೂ ಭಾರವ
ಹೊಂಗನಸು ಮರೆತೆ ಹೋದವ

ಓ ಜೀವ
ಏನಾಯ್ತು...
ಹೀಗೇಕೆ.... ಮರುಳಾಯ್ತು
ಒಡಲಾಳ ಹೊತ್ತಿರಲು
ಒಲವೆಲ್ಲ ಸತ್ತಿರಲು
ಮನವಾಯ್ತು ಇನ್ನು ಭಾರ
ಈ ಬದುಕೇ.. ಅಘೋರ!

ಓಒಓಒ...ಹೊಡೆದೋದ ಹೃದಯಕ್ಕೆ
ಹೊಡಿಬೇಡ ಮತ್ತಷ್ಟು..

ಸುಕುಮಾರಿ ಹೆಣ್ಣು ನೀ
ಸುಖವೆಲ್ಲ ಸುರಿದವಳು
ಸುರಪಾನ ಗಂಡು ನಾ
ಸುಖವಾಗಿ ಕುಡಿದವನು
ಸೋಲಲ್ಲು ಗೆಲುವ ಕಂಡೆ ನೀ
ಗೆದ್ದಂತೆ ಬೀಗಿ ಸೋತೆ ನಾ!

ಓಒಓಒ...ಹೊಡೆದೋದ ಹೃದಯಕ್ಕೆ
ಹೊಡಿಬೇಡ ಮತ್ತಷ್ಟು..

ವನವಾಸ ನನಗೇ ಏಕೆ
ಬರುತೈತೆ ಹುಡಿಕೊಂಡು
ವರವಾಗಿ ಬಂದವಳೇನೆ
ಹೊರಟೋದ್ಲು ನೊಂದ್ಕೊಂಡು
ನೆನಪಲ್ಲೆ ನಿತ್ಯವೂ ಕೊರಗಲಾ?
ಕೊರಗುತ್ತಾ ಅವಳನು ಮರೆಯಲಾ.

ಓ ಜೀವ.... ಏನಾಯ್ತು ....
ಕೂತಲ್ಲೆ ಕೊಲೆಯಾಯ್ತು...!!!!

ಅಯ್ಯೋ ಅಣಗಿಸಬೇಡಿ ನಮ್ಮ!

ಎಲ್ಲ ಅವಳೇ ಮಾಡ್ತಾಳೆ
ಆದರೂ ನನ್ನೆ ದೂರ್ತಾಳೆ
ಹಸಿವಿಗೆ Horlicks ಕೊಡ್ತಾಳೆ
ಅತ್ತರೆ diaper ಕಟ್ತಾಳೆ
ಅಯ್ಯೋ .. ಅಣಗಿಸಬೇಡಿ ನಮ್ಮ
ಅಯ್ಯಯ್ಯೋ ಅಣಗಿಸಬೇಡಿ ನಮ್ಮ
ಅತ್ತರು ಕಣ್ಣೀರೆ ಬರಲ್ಲ..ನಮ್ಮ ಕರ್ಮ!

ನಾವು....ಪ್ರೀತಿಲಿ ಬಿದ್ದ ಹುಡುಗರು!
ನಮಗೆ ಅವಳು ಏನ್ ಮಾಡಿದ್ರು ಸರಿ ಗುರು
ಅವಳ‌ ಗೆಲುವಲೆ ಒಲವ ಕಾಣುವ
ಅವಳ‌ ನಗುವಿಗೆ ದಿನವೂ ಬೇಡುವ
ನಾವು ಪ್ರೇಮದ ಅಪ್ಪಟ ಭಕ್ತರು !!

ತುಂಬಾ ಸಲುಗೆ ನಿನ್ನ ಮೇಲೆ ಓ ಒಲವೇ!

ತುಂಬಾ ಸಲುಗೆ ನಿನ್ನ ಮೇಲೆ ಓ ಒಲವೇ
ಮತ್ತೆ ಮತ್ತೆ ಕಾಡುವಾಸೆ ನಿನ್ನೆ ಚೆಲುವೆ
ಆತುರದಿ ಏನೋ ನುಡಿದೆ ನಾನು
ಹುಸಿಕೋಪದಿಂದ ಮುನಿದೆ ನೀನು
ಹೊಡೆದುಬಿಡು, ಬೈದುಬಿಡು ಸಹಿಸುವೆನು
ಮೌನದಲೆ ಚುಚ್ಚದಿರು ನಾ ಬದುಕೆನು

ತುಂಬಾ ಸಲುಗೆ ನಿನ್ನ ಮೇಲೆ ಓ ಒಲವೇ
ಮತ್ತೆ ಮತ್ತೆ ಕಾಡುವಾಸೆ ನಿನ್ನೆ ಚೆಲುವೆ

ಅತ್ತಾಗ ಮುದ್ದಿಸಿದವಳು ಬಿದ್ದಾಗ ಉಪಚರಿಸಿದಳು
ಖುದ್ದಾಗಿ ನನ್ನೆಲ್ಲಾ ಆಸೆಯ ಅರಿತವಳು
ಮತ್ತನ್ನು ಏರಿಸಿದವಳು ಒಲವಲ್ಲಿ ಆಡಿಸಿದವಳು
ಒಂದಾಗಿ ಬಾಳನು ನಡೆಸೊ ಕನಸ ಕಂಡವಳು
ನೀನಲ್ಲವೇ?
ನಿನ್ನೆಲ್ಲಾ ಕನಸಿಗೂ ಒಡೆಯ ನಾನಲ್ಲವೆ?
ಹೀಗೆಕೆ ಮೌನದಿ.... ನೀ ಕಾಡುವೆ
ಅಪ್ಪಿಬಿಡು ಒಮ್ಮೆ ಬಂದು ನಾ ಗೆಲ್ಲುವೆ!

ತುಂಬಾ ಸಲುಗೆ ನಿನ್ನ ಮೇಲೆ ಓ ಒಲವೇ
ಮತ್ತೆ ಮತ್ತೆ ಕಾಡುವಾಸೆ ನಿನ್ನೆ ಚೆಲುವೆ

Monday, 20 May 2019

ಜಗವ ಜರಿವ ಮನುಜ ನಿನ್ನ ರೂಪ ನೋಡಿಕೋ!


ಜಗವ ಜರಿವ ಮನುಜ ನಿನ್ನ ರೂಪ ನೋಡಿಕೋ
ಜಗವ ಜರಿವ ಮನುಜ ನಿನ್ನ ರೂಪ ನೋಡಿಕೋ

ನಗುವ ಮೊಗವಿಲ್ಲ
ನಲಿವ ಕ್ಷಣವಿಲ್ಲ
ನಾಳೆ ಗೊತ್ತಿಲ್ಲ
ನಿಂದು ಅಂತ ಏನು ಇಲ್ಲ

ಜಗವ ಜರಿವ ಮನುಜ ನಿನ್ನ ರೂಪನೋಡಿಕೋ

ಕಲಿತದ್ದು ಅರ್ಧ ಎಲ್ಲ
ಉಳಿಸಿದ್ದು ದೇವರೆ ಬಲ್ಲ
ಹುಡುಕಿಕೋ ನಿನ್ನ ಮೂಲ
ಸಾಯೋಕ್ ಮುಂಚೆ ಒಂದ್ಸಲ

ಜಗವ ಜರಿವ ಮನುಜ ನಿನ್ನ ರೂಪನೋಡಿಕೋ

ಸುಳ್ಳಲ್ಲೆ ಸುಖಿಸಿ ಬೆಳೆದೆ
ಸುತ್ತಣ ಜನರ ತುಳಿದೆ
ಸ್ವಾರ್ಥದಿ ನಟಿಸಿಮೆರೆದೆ
ಸಾವನ್ನು ಭ್ರಮಿಸಿ ತೊರೆದೆ!

ಜಗವ ಜರಿವ ಮನುಜ ನಿನ್ನ ರೂಪ ನೋಡಿಕೋ
ಜಗವ ಜರಿವ ಮನುಜ ನಿನ್ನ ರೂಪ ನೋಡಿಕೋ



Sunday, 17 March 2019

ಇದು ಪ್ರಣಯ ರಾಗವು...!

ನಿನ್ನ ಬಾಚಿ ತಬ್ಬಿ ನಾನು ....
ಸರಸ ಆಡಲೇನು
ನಿನ್ನ ಮೋಹಕ ಸ್ಪರ್ಶಕೆ
ಮೈ ಮರೆಯಲೇನು
ನಿನ್ನ ಕಣ್ಣ ನೋಟಕೆ...
ಕರಗಿ ಹೋದೆ ನಾನು
ನಿನ್ನ ತುಟಿಯಲೆ ಇರುವುದು ಜೇನು... ಸಿಹಿ ಜೇನು
ನೀ ಮುತ್ತನಿಡಲು...
ನೀ ಮುತ್ತನಿಡಲು....
ನೀ ಮುತ್ತನಿಡಲು ಅರಿತೆ ಒಲವನು
ಮೈಬಿಸಿಯೇರಿರಲು..
ಮರೆತೆ ಜಗವನು...ಮರೆತೆ ಜಗವನು
ಇದು ಪ್ರಣಯವು.....ಪ್ರಣಯ ರಾಗವು...
ಇದು ಪ್ರಣಯವು.....ಪ್ರಣಯ ರಾಗವು...
ಅವಳ ಸ್ಪರ್ಶದಿಂದ ಹೊಮ್ಮಿದ ಮಧುರ ಸಂಗೀತವು!

-SoNi

ಪ್ರೀತಿ ಪಾರ್ಟ್ ಟೈಮ್ ಜಾಬಲ್ಲ!

ಕಾಟಾಚಾರಕ್ಕೆ ಪ್ರೀತಿಮಾಡಿ
ಆಟ ಆಡ್ಸಿ ಓಡೋಗಕ್ಕೆ
ಗೊಂಬೆನಾ ನಾನು.... ಹೇಳು ನೀನು
ತೂ ಅಂತ ಹೇಳಿ ಮಂತ್ರ ಹಾಕಿ
ಸಿಕ್ ಸಿಕ್ದಂಗೆ ‌‌‌‌ಲಜ್ಜಿ ಹಾಕೋಕೆ
ನಿಂಬೆನಾ.... ನಾನು ಹೇಳು ನೀನು
ಹೃದಯದ ಮಾತು ಅರಿಯದೆ
ಹೊರಟಿಹ ನಿನಗೆ ಕೊಬ್ಬಿದೆ
ಕನಸುನು ನೀನೆ ಎಣೆದಿದೆ
ಹೇಳದೆ ಕೇಳೆದೆ ಮುರಿದಿದೆ
ಹುಡುಗರ ಬಾಳಲ್ಲಿ ಹುತ್ತ ಕಟ್ಟಬೇಡಿ
ಬುಸುಗುಡುವ ಹಾವಾಗಿ ನಮ್ಮ ಮಾಡಬೇಡಿ
ಪ್ರೀತಿ ಪಾರ್ಟ್ ಟೈಮ್ ಜಾಬಲ್ಲ
ಆಸೆ ಹುಟ್ಟೋದೆ ಹುಡುಗ್ರ ಜೇಬಲ್ಲ?

-SoN!


ಕವಿಯಷ್ಟೇ ನಾನು ಕವಿತೇನೆ ನೀನು!

ಕಾಯುತಿರುವ ಮನಕೆ‌ ನೀಡು ಒಮ್ಮೆ ಆಹ್ವಾನ
ಕಾಡಬೇಡ ಇನ್ನು ತಬ್ಬಿ‌ ಮಾಡು ಸಾಂತ್ವನ
ಮೋಹಿತ ನಾನು ನಿನ್ನ ಕಡೆಗೆ
ಮೌನವ ಮುರಿದು ಕರೆಯೆ ಬಳಿಗೆ

ಕನಸಲ್ಲೆ ಇನ್ನು ಹಾಳಾಗಲಾರೆ
ಜೊತೆಯಲ್ಲಿ ನಡೆದು ನೀ ಮಾಡು ಸೂರೆ
ನಿನ್ನಲ್ಲೆ 'ಕಾವ್ಯ'ದ ಸೊಬಗಿದೆ
ಮಾತಲ್ಲೆ ಒಲವಿನ ಸಿರಿಯಿದೆ

ನಿನ್ನೆದುರು ಕೂತು ನನ್ನನೆ ಮರೆತು
ಸೇರಲಿ ನನ್ನುಸಿರು ನಿನ್ನಾತ್ಮಕೆ
ಕವಿಯಷ್ಟೇ ನಾನು ಕವಿತೇನೆ ನೀನು
ಕರಗಿಹನು ಮೂನು ನಿನ್ನ ಅಂದಕೆ

-SoNi

Sunday, 6 January 2019

Do you know Who am I?.

Few months ago, some English lines have been suddenly popped-up in my mind and turned into a poem. No! sorry ...not a poem!  That has to be decided by you whether it is a poem or just lines  You have the full authority to judge, please read the below.

Time does change, but I don't!
Money brings you worries, but I don't!
Love makes you disappointed, but I don't!
Life goes crazy, but I don't!
Do you know who am I?...
Do you know...who am I?
I am......No One...I am NO ONE!
:
:
Education makes you a master
Designation brings you the honor
Power orders you to act as a leader
Goal steals your sleep and peace
'I' give you nothing, because I have nothing!
Do you know who am I?
Do you know...who am I?
I am......No One...I am NO ONE!
:
Be happy Being NO ONE! 




@@@
Is it a poem? Whatever… leave it! My well wisher Lingaraj Managuli Sir had sent first stanza to his friend Brinda Sumithra Who has composed tune for it and sung! It’s very beautiful Ma’am! Thank you so much! _/\_ (The song has also been uploaded here for Nimagaagi 
: