Friday, 21 June 2019

ಎಲ್ಲ ಮರೆತು ನಗುತಿರು ಮನವೇ!!

ಎಲ್ಲ ಮರೆತು
ನಗುತಿರು ಮನವೇ
ನಗುವೇ ಜೀವನದ ಗುಟ್ಟು
ನೆಮ್ಮದಿ ಕಲಿತು
ಬಾಳು ಸುಖದಿ
ನಿನ್ನೊಳಗಿನ ಆಸೆಯ ಬಿಟ್ಟು
ಎಲ್ಲಾ ಕ್ಷಣಿಕ!
ಇಲ್ಯಾರು ಪ್ರಮಾಣಿಕ?
ನಲಿವಿಗೆ ನೊಗವನು ಕಟ್ಟು
ನಿನ್ನಲಿ ನೀನು
ಬದುಕಿದರೆ ಸಿಹಿ ಜೇನು
ಬೆಳೆಸು ಕನಸಿನ‌ ಗಿಡ ನೆಟ್ಟು
ಗುರಿಯನು ಹಿಡಿದು
ಗುರು ಹಿರಿಯರ ನೆನೆದು
ಗೆಲುವಿನ ಬಾಗಿಲು ತಟ್ಟು
ಒಲವಿನ ದೋಣಿಲಿ
ಚಲಿಸುವ ನಿನಗೆ
ಪ್ರತಿದಿನವೂ ಹೊಸ ಹುಟ್ಟು!!

ಎಲ್ಲ ಮರೆತು
ನಗುತಿರು ಮನವೇ
ನಗುವೇ ಜೀವನದ ಗುಟ್ಟು!!

No comments:

Post a Comment