Friday, 21 June 2019

ಬಿಡು ನೀ ಬೇಸರ!

ಬಿಡು ನೀ ಬೇಸರ
ನೋಡಲಾರ ನೇಸರ
ಯಾಕಿಷ್ಟು ಹುಸಿಕೋಪ
ಮಗುವಂತೆ ಅವನು ಪಾಪ
ಬಿಡು ನೀ ಬೇಸರ
ನೋಡಲಾರ ನೇಸರ
ಆ ಮುದ್ದು ಮುಖಕೆ
ಇನ್ನೆಷ್ಟು ಕಾಟ ಕೊಡುವೆ ನೀನು ದಿನವೂ
ಅದಕೂನು ಆಸೆ
ನಗಬೇಕು ಎಂದು ಪ್ರತಿ ಕ್ಷಣ ಕ್ಷಣವೂ
ಬಿಡು ನೀ ಬೇಸರ
ನೋಡಲಾರ ನೇಸರ
ಕಣ್ಣಿರ ಹರಿಸುತಿರಬೇಡ
ಕಣ್ಣಿಗೂ ಸ್ವಲ್ಪ ಬಿಡುವಿರಲಿ
ಮೌನಕ್ಕೆ ಶರಣಾಗಬೇಡ
ಮಾತಿಗೂ ನಿನ್ನ ಸ್ನೇಹ ಬೆಳೆಯಲಿ
ಬಿಡು ನೀ ಬೇಸರ
ನೋಡಲಾರ ನೇಸರ
ಸುಖವನ್ನೆ ಉಂಡ ಅದೆಷ್ಟೋ ಜನರು
ಖುಷಿಯಾಗಿ‌ ಇಲ್ಲ‌ ಇಂದು
ಕಷ್ಟವನೆ ಎಣಿಸಿ ನಷ್ಟವನು ಪೋಣಿಸಿ
ಗೆದ್ದವರ ಸಂಖ್ಯೆ ಮುಂದು
ಬಿಡು ನೀ ಬೇಸರ
ನೋಡಲಾರ ನೇಸರ!!


No comments:

Post a Comment