ನಿನ್ನ ಕಾಣದೆ ಕಣ್ಣಿಗೆ
ಕಂಡದ್ದೆಲ್ಲ ಮಂಜಾಗಿದೆ
ನೀನು ಬಾರದೆ ಎದುರಿಗೆ
ದೂರ ನಿಂತೆ ಕಾಡಿದೆ
ಕದ್ದು ನಿನ್ನ ಹುಡುಕುವ
ಆಟ ನಿಲ್ಲಿಸಲಾರದೆ
ನಾನು ದಿನವೂ ಸೋತಿದೆ
ಸೋತು ಮತ್ತೂ ಹುಡುಕಿದೆ
ಬೇಗ ಬಂದು ಮೆಲ್ಲಗೆ
ನೀ ಉಪಚರಿಸಬಾರದೆ
ಮಂಜಾದ ಈ ಕಣ್ಣಿಗೆ
ಬೆಳಕೊಂದು ಬೇಕಿದೆ
ನಿನ್ನ ಕಾಣಲು ಕಾದಿದೆ!
ನಿನ್ನೆ ಕಾಣಲು ಕಾದಿದೆ!
🤗😊
ReplyDelete