Monday, 20 May 2019

ಜಗವ ಜರಿವ ಮನುಜ ನಿನ್ನ ರೂಪ ನೋಡಿಕೋ!


ಜಗವ ಜರಿವ ಮನುಜ ನಿನ್ನ ರೂಪ ನೋಡಿಕೋ
ಜಗವ ಜರಿವ ಮನುಜ ನಿನ್ನ ರೂಪ ನೋಡಿಕೋ

ನಗುವ ಮೊಗವಿಲ್ಲ
ನಲಿವ ಕ್ಷಣವಿಲ್ಲ
ನಾಳೆ ಗೊತ್ತಿಲ್ಲ
ನಿಂದು ಅಂತ ಏನು ಇಲ್ಲ

ಜಗವ ಜರಿವ ಮನುಜ ನಿನ್ನ ರೂಪನೋಡಿಕೋ

ಕಲಿತದ್ದು ಅರ್ಧ ಎಲ್ಲ
ಉಳಿಸಿದ್ದು ದೇವರೆ ಬಲ್ಲ
ಹುಡುಕಿಕೋ ನಿನ್ನ ಮೂಲ
ಸಾಯೋಕ್ ಮುಂಚೆ ಒಂದ್ಸಲ

ಜಗವ ಜರಿವ ಮನುಜ ನಿನ್ನ ರೂಪನೋಡಿಕೋ

ಸುಳ್ಳಲ್ಲೆ ಸುಖಿಸಿ ಬೆಳೆದೆ
ಸುತ್ತಣ ಜನರ ತುಳಿದೆ
ಸ್ವಾರ್ಥದಿ ನಟಿಸಿಮೆರೆದೆ
ಸಾವನ್ನು ಭ್ರಮಿಸಿ ತೊರೆದೆ!

ಜಗವ ಜರಿವ ಮನುಜ ನಿನ್ನ ರೂಪ ನೋಡಿಕೋ
ಜಗವ ಜರಿವ ಮನುಜ ನಿನ್ನ ರೂಪ ನೋಡಿಕೋ



No comments:

Post a Comment