Friday, 26 December 2025

ಇನಿಯನಲ್ಲದಿದ್ದರೂ ಗೆಳೆಯನಾಗಿ ಉಳಿಸಿಕೋ

ಇನಿಯನಲ್ಲದಿದ್ದರೂ‌
ಗೆಳೆಯನಾಗಿ ಉಳಿಸಿಕೊ
ದೂರ ತಳ್ಳಬೇಡ ನೀ ನನ್ನನು
ಒಲವೇ ಬೇಡಲಾರೆನು
ಒಂಟಿತನದಿ ಬದುಕೆನು
ಒಳಿತು ಬಯಸು ಸಾಕು ನೀ ಇನ್ನೂ

ಇನಿಯನಲ್ಲದಿದ್ದರೂ‌
ಗೆಳೆಯನಾಗಿ ಉಳಿಸಿಕೊ
ದೂರ ತಳ್ಳಬೇಡ ನೀ ನಿನ್ನನು

ನಿನ್ನ ವಿನಹ ನನಗೆ ತಾನೆ
ಯಾರು ಇರುವರು ಹೇಳು?
ತಿದ್ದಿ ತೀಡಿ ಬುದ್ದಿ ನೀಡಿ
ಹಸನಾಗಿಸಿದೆ ನನ್ನ ಬಾಳು!

ಕೋಪದಿಂದ ಕೊಲ್ಲದಿರು
ಹಳೆಯ ಗಳಿಗೆಯೆಲ್ಲಾ
ನಾಳೆಗೂನೂ ಬೇಕು ಅವು
ನೆನಪಿಲ್ಲದೆ ಸುಖವಿಲ್ಲ
ಇನಿಯನಲ್ಲದಿದ್ದರೂ‌
ಗೆಳೆಯನಾಗಿ ಉಳಿಸಿಕೊ
ದೂರ ತಳ್ಳಬೇಡ ನೀ ನನ್ನನು

ಮೋಸಮಾಡಿ ಕದ್ದು ಓಡೋ
ಕೆಟ್ಟ ಹುಡುಗ ನಾನಲ್ಲ
ಉಗಿದು ಅಗೆದು ಬಗೆದಮೇಲು
ನಾ ಫಸಲು ಕೊಡುವ‌ ನೆಲ

ಕೆಂಡದಂತ ನಿನ್ನ ಮಾತೆ ಹಿತ
ಸಹಿಸಲಾಗುತ್ತಿಲ್ಲ ಈ ಮೌನವ್ರತ
ಕ್ಷಮಿಸು ನನ್ನ ಅನಿಸಿ ಸುತ
ಸಾಗಲಾರದು‌ ನೀನಿರದ ಪಥ

ಇನಿಯನಲ್ಲದಿದ್ದರೂ‌
ಗೆಳೆಯನಾಗಿ ಉಳಿಸಿಕೊ
ದೂರ ತಳ್ಳಬೇಡ ನೀ ನನ್ನನು

-ಕವಿಸೋನಿ

ಜಗದಗಲ‌ ನೀನಿರಲು

ಜಗದಗಲ‌ ನೀನಿರಲು
ಎಲ್ಲೆಲ್ಲೂ ಸಿಹಿ ಹಗಲು
ಹೋದಕಡೆಯೆಲ್ಲ ನಿನ್ನೆ ಕಾಣೋ
ಕಂಗಳು..ನನ್ನೀ ಕಂಗಳು
ಭುವಿಯೆಲ್ಲಾ ಕೊರಗಿರಲು
ಉತ್ಸಾಹ ಕುಗ್ಗಿರಲು
ಹುಡುಕಾಡಿ ಒಲವ ಕೊಂಡು
ನೀ ಬರಲು...ಒಲವ ನೀ ತರಲು
ಸಿರಿಯಾಯ್ತು ಬಾಳಲ್ಲಿ
ನಾ ಸೋತೆ ನಿನ್ನಲ್ಲಿ
ಒಂದಾಗಿ ಹೀಗೆ ಇರುವ ಜೊತೆಯಲ್ಲಿ
ನಾವು ಜೊತೆಯಲ್ಲಿ
-ಕವಿಸೋನಿ!

ಹೇಗೆ ತಾನೆ ಪೀಡಿಸಲಿ ನನ್ನೆ ಪ್ರೀತಿಸು ಎಂದು

 ಹೇಗೆ ತಾನೆ ಪೀಡಿಸಲಿ‌ ನನ್ನೇ ಪ್ರೀತಿಸು ಎಂದು
ನಿನ್ನೆಲ್ಲಾ ಭಾವಗಳು ಪರರ ಸುತ್ತಿರುವಾಗ
ಏನು ಅಂತ ತೋರಿಕೊಳ್ಳಲಿ‌ ಎದುರು ಬಂದು
ನಿನ್ನ ಬಂಧುಗಳ ಪಟ್ಟಿಯಲ್ಲಿ‌ ನಾನಿಲ್ಲದಿರುವಾಗ

ಒಲವೆಂಬ ಕೆರೆಯಲ್ಲಿ ಜೊತೆಯಾಗಿ ಈಜಾಡಿ
ದಡ ಸೇರುವ ಆಸೆಯಲಿ ಬಹುದೂರ ಬಂದೆ ನಾ
ನಂಬುಗೆಯ ಅಸ್ತವನು ಬಿಗಿಯಾಗಿ ಹಿಡಿದು ಸುಳಿಗಳಿಂದ ಪಾರು ಮಾಡಿದವಳು ನೀನಲ್ಲವೇನಾ?

ಈಗೇಕೆ ನನ್ನನು ನಡುಮದ್ಯ ಬಿಟ್ಟೋದೆ
ಭಾರದ‌ ಮನಸಿನಲಿ ಬಹುದೂರ ನೀನೋದೆ?
ಹೀಗೇಕೆ ನನ್ನೀಗ ಒಂಟಿಯಾಗಿಸಿದೆ
ನೀನಿಲ್ಲದೆಯು ಬದುಕುವ ಪರಿ ಕಲಿಸದೆ!

ಸರಿಯೇನು? ಸರಿಯೇನು ನಿನ್ನ‌ ಈ ನಡೆಯು
ಖುಷಿಕೊಡುವುದೇ ನಿನಗೆ ಪರರ ಸಂಗದ ಕತೆಯು
ಭಲವಂತದಿಂದ ನಾ ಕರೆಯಲಾರೆ, ಭಗವಂತನಲ್ಲು ನಾ ಬೇಡಲಾರೆ
ಹೋಗಿಬಿಡು ನಿನಗೆ ಸುಖವಿರುವ ಕಡೆಗೆ
ಹರಸುವೆನು ನಾನೆಂದು ಗೆಲುವನ್ನೆ ನಿನಗೆ
ಹರಸುವೆನು ನಾನೆಂದು ಗೆಲುವನ್ನೆ ನಿನಗೆ

ಹೇಗೆ ತಾನೆ ಪೀಡಿಸಲಿ‌ ನನ್ನೇ ಪ್ರೀತಿಸು ಎಂದು
ನಿನ್ನೆಲ್ಲಾ ಭಾವಗಳು ಪರರ ಸುತ್ತಿರುವಾಗ

-ಕವಿಸೋನಿ

ಮನ್ಸ-Body

ಎಷ್ಟು ಬಳಿದರೂ ಬಣ್ಣ
ಬಿಳಿಯಾಗದಿರುವುದೇ Hairuu
ಸಾಕಷ್ಣು ಹಚ್ಚಿದರೂ ಕ್ರೀಮು
ಸುಕ್ಕಾಗಲೇಬೇಕು 'Skinnnu'
ದಂಡಿಸದಿದ್ದರೆ Body-ಕರಗದು Fatuu
ದಿನವೆಲ್ಲಾ ಕುಡಿದರೂ ನೀ Nutritionnu
ಮಾಡಿಸಿಕೊಂಡರು Plasticcu surgery
ನಿನ್ನ ಮೊಮ್ಮಗುವಿಗೆ ನೀವೆಂದು ಅಜ್ಜ ರೀ
ನಿನ್ನ young lokku ಸೀಮಿತ instagramge
Real outlook ನಿನ್ನ ನೀ ಕನ್ನಡೀಲಿ ನೊಡ್ಕೊಡಂಗೆ
ನೀನಾಗಲಾರೆ ಇವುಗಳಿಂದ espcapuu
ಇದರಲ್ಲೆ ಮೈಮರೆತು ಕಳೆದುಕೊಳ್ಳಬೇಡ scopuu
ತಡೆಯಲಾಗಲ್ಲ ಯಾರು ದೇಹಕ್ಕಾಗೊ ಆಯಸ್ಸು
ಆಗದಿರಲಿ‌ ನಿನ್ನ ಮನಸ್ಸಿಗೆಂದು ವಯಸ್ಸು
ಇರುವಷ್ಟು ದಿನ ಕಲಿ New thingsuu
ಹಂಚು‌  Knowledguu - ಬರಲಿ ನಿಂಗೂ Wingsuu

-ಕವಿಸೋನಿ

ನೀ ನನ್ನದೆ ಜೀವ

 ನೀ ಅರಿತಷ್ಟು ನನ್ನ
ಅರಿಯಲಾರರು‌ ಇನ್ನಾರು
ನೀ ಕೊಟ್ಟಷ್ಟು ಪ್ರೀತಿಯ
ಕೊಡುವರೆ ಇನ್ನೊಬ್ಬರು
ನೀ ಬರಿ‌ ಹೆಸರಲ್ಲ
ನೀ ಉಸಿರೂ ಅಲ್ಲ
ನೀ ನನ್ನೊಳಗಿನ ಭಾವ
ನೀ ನನ್ನದೇ ಜೀವ!!!
ನೀ ನನ್ನದೇ ಜೀವ!!!

ಎಲ್ಲಿ ಹೋದರು ನಾನು
ಅಲ್ಲೂ ಇರುವೆ ನೀನು
ಸುಮ್ಮನೆ ಕೂತರು
ಕಚಗುಳಿ ಕೊಟ್ಟು ಕಾಡುವ ಜಾನು
ಬದುಕಬಲ್ಲನೆ? ನಿನ್ನ ಬಿಟ್ಟು  ನಾನು!
ನೀ ನನ್ನ ಬದುಕಿನ ಸಿಹಿಜೇನು!
ನೀ ಬರಿ‌ ಹೆಸರಲ್ಲ
ನೀ ಉಸಿರೂ ಅಲ್ಲ
ನೀ ನನ್ನೊಳಗಿನ ಭಾವ
ನೀ ನನ್ನದೇ ಜೀವ!!!
ನೀ ನನ್ನದೇ ಜೀವ!!! 💙💚

-ಕವಿಸೋನಿ

ನಿನ್ನ ಪ್ರೇಮಿ ನಾನು

ನಿನ್ನ‌ ಪ್ರೇಮಿ‌ ನಾನು
ಸದಾ ನಿನ್ನೆ ಪ್ರೀತಿಸುವೆನು

ಮೀಸೆ ಚಿಗುರೊಡೆಯುವ ವಸಂತಖುತುವಲ್ಲಿ
ನನಗಾಗಿ ಒಲುಮೆಯ ತಂದವಳು ನೀನು
ಬಡತನದಲ್ಲಿ ಬೇಗಿದ್ದ ಈ ಜೀವಕ್ಕೆ
'ಸಿರಿ' ತುಂಬಿ ಪ್ರೀತಿ ನೀಡಿದ ಹೃದಯವಂತೆ

ನಿನ್ನ‌ ಪ್ರೇಮಿ‌ ನಾನು
ಸದಾ ನಿನ್ನೆ ಪ್ರೀತಿಸುವೆನು

ಬರಡಾಗಿದ್ದ ಈ ಮನದಲ್ಲಿ ಭಾವನೆಗಳ
ಹೊತ್ತಿಸಿದ ಭಾವಕನ್ಯೆ ನೀನು
ಬಣ್ಣದ ಮಾತನ್ನೆ ಬಲವಾಗಿಸಿಕೊಂಡವರ ಮಧ್ಯೆ
ಬಂಧನ ಬೆಸೆದು ಬದುಕಾದವಳು ನೀನು

ನಿನ್ನ‌ ಪ್ರೇಮಿ‌ ನಾನು
ಸದಾ ನಿನ್ನೆ ಪ್ರೀತಿಸುವೆನು

ನನಗಾಗಿ ಹರಕೆಗಳ ಹೊತ್ತವಳು ನೀನು
ನೋವಲ್ಲು ನಗುವ ಕನಗಾಂಗಿ
ಗುಟ್ಟಾಗಿ ಪ್ರೀತಿಯ ಸೆರಗಲ್ಲಿಟ್ಟುಕೊಂಡು
ಅನುದಿನವು ಸಲುಹಿದ ಮಾತಂಗಿ

ನಿನ್ನ‌ ಪ್ರೇಮಿ‌ ನಾನು
ಸದಾ ನಿನ್ನೆ ಪ್ರೀತಿಸುವೆನು

ಕಷ್ಟದಲು, ಇಷ್ಟದಲು ಜೊತೆಯಿದ್ದವಳು ನೀನು
ಕನಸಲ್ಲು ಕಾಡುವ ಮೋಹನಾಂಗಿ
ಬೆಟ್ಟದಷ್ಟು ನೋವನ್ನ ನುಂಗಿದವಳು ನೀನು
ಆದರೂ ಪ್ರೀತಿಯೆ ಬಡಿಸಿದ ಜಗನ್ಮೋಹಿನಿ

ನಿನ್ನ‌ ಪ್ರೇಮಿ‌ ನಾನು
ಸದಾ ನಿನ್ನೆ ಪ್ರೀತಿಸುವೆನು

ನನ್ನ ಪಾಲಿಗೆ ಅದೃಷ್ಟದ ದೇವತೆ ನೀನು
ಕೊನೆಯವರೆಗೂ ಜೊತೆಯಿದ್ದು ಹರಸು ನನ್ನನು
ಕಷ್ಟದಲಿ‌ ಕೊಡು ನನಗೂ ಪಾಲನ್ನು
ನಿಷ್ಠುರವಾಗಿ ದೂರದಿರು ಈ ನಿನ್ನ ಒಲವನ್ನು

ನಿನ್ನ‌ ಪ್ರೇಮಿ‌ ನಾನು
ಸದಾ ನಿನ್ನೆ ಪ್ರೀತಿಸುವೆನು

ಪ್ರೀತಿಯ ವ್ಯಾಖ್ಯಾನ ತಿಳಿಸಿದ ಗುರು ನೀನು
ನಿನ್ನ ಆರಾಧಿಸುವ ಭಕ್ತ ನಾನು
ನನ್ನೆಲ್ಲಾ ಭಾವನೆ ಬೆಸೆದಿರುವುದೇ ನಿನ್ನೊಳಗೆ
ನೀನಿಲ್ಲದೆ ಉಳಿದೀತೆ ನನ್ನೀ ಪ್ರೇಮಕತೆ

ನಿನ್ನ‌ ಪ್ರೇಮಿ‌ ನಾನು
ಸದಾ ನಿನ್ನೆ ಪ್ರೀತಿಸುವೆನು
ನಿನಗಾಗಿ ಮಿಡಿವ ಈ ಹೃದಯವನು
ಒಮ್ಮೆ ಅಪ್ಪಿ ಮುದ್ದಾಡು ನೀನು

ನಿನ್ನ‌ ಪ್ರೇಮಿ‌ ನಾನು
ಸದಾ ನಿನ್ನೆ ಪ್ರೀತಿಸುವೆನು

-ಕವಿಸೋನಿ