ಇನಿಯನಲ್ಲದಿದ್ದರೂ
ಗೆಳೆಯನಾಗಿ ಉಳಿಸಿಕೊ
ದೂರ ತಳ್ಳಬೇಡ ನೀ ನನ್ನನು
ಒಲವೇ ಬೇಡಲಾರೆನುಗೆಳೆಯನಾಗಿ ಉಳಿಸಿಕೊ
ದೂರ ತಳ್ಳಬೇಡ ನೀ ನನ್ನನು
ಒಂಟಿತನದಿ ಬದುಕೆನು
ಒಳಿತು ಬಯಸು ಸಾಕು ನೀ ಇನ್ನೂ
ಇನಿಯನಲ್ಲದಿದ್ದರೂ
ಗೆಳೆಯನಾಗಿ ಉಳಿಸಿಕೊ
ದೂರ ತಳ್ಳಬೇಡ ನೀ ನಿನ್ನನು
ನಿನ್ನ ವಿನಹ ನನಗೆ ತಾನೆ
ಯಾರು ಇರುವರು ಹೇಳು?
ತಿದ್ದಿ ತೀಡಿ ಬುದ್ದಿ ನೀಡಿ
ಹಸನಾಗಿಸಿದೆ ನನ್ನ ಬಾಳು!
ಕೋಪದಿಂದ ಕೊಲ್ಲದಿರು
ಹಳೆಯ ಗಳಿಗೆಯೆಲ್ಲಾ
ನಾಳೆಗೂನೂ ಬೇಕು ಅವು
ನೆನಪಿಲ್ಲದೆ ಸುಖವಿಲ್ಲ
ಇನಿಯನಲ್ಲದಿದ್ದರೂ
ಗೆಳೆಯನಾಗಿ ಉಳಿಸಿಕೊ
ದೂರ ತಳ್ಳಬೇಡ ನೀ ನನ್ನನು
ಮೋಸಮಾಡಿ ಕದ್ದು ಓಡೋ
ಕೆಟ್ಟ ಹುಡುಗ ನಾನಲ್ಲ
ಉಗಿದು ಅಗೆದು ಬಗೆದಮೇಲು
ನಾ ಫಸಲು ಕೊಡುವ ನೆಲ
ಕೆಂಡದಂತ ನಿನ್ನ ಮಾತೆ ಹಿತ
ಸಹಿಸಲಾಗುತ್ತಿಲ್ಲ ಈ ಮೌನವ್ರತ
ಕ್ಷಮಿಸು ನನ್ನ ಅನಿಸಿ ಸುತ
ಸಾಗಲಾರದು ನೀನಿರದ ಪಥ
ಇನಿಯನಲ್ಲದಿದ್ದರೂ
ಗೆಳೆಯನಾಗಿ ಉಳಿಸಿಕೊ
ದೂರ ತಳ್ಳಬೇಡ ನೀ ನನ್ನನು
-ಕವಿಸೋನಿ