Tuesday 10 September 2013

ನೀ ಎಂದೆದಿಗೂ ನನ್ನವಳಾಗ ಬೇಕಿದೆ

ನನ್ನೆದೆಯಲಿ ನೂರಾರು ಕನಸುಗಳ ಮಿಲನ
ಕಣ್ಮುಚ್ಚಿದರೆ ಎದುರಾಗುವ ಕನಸೆಂದರೆ ನೀನೇ ಚಿನ್ನ

ಬಿಸಿಗಾಳಿಯು ತಂಪಾಗಿದೆ, ಹೊಸ ಚೇತನಾ ನಂದಾಗಿದೆ
ಉಸಿರುಸಿರಲು ನಿನ್ನೆಸರನು ಬರೆದಿಡುವ ಕ್ಷಣ ಬಂದಿದೆ
ನಿನ್ನ ನೆನೆದರೆ ಮನದಲ್ಲಿಯೇ ಸುಖ ಸ್ಪರ್ಶದ ಅರಿವಾಗಿದೆ
ನೋವೆಲ್ಲವೂ ಮರೆಯಾಗಿದೆ,  ನಿನ್ನೊಂದಿಗೆ ಬೆರೆತಾಗಿದೆ

ಕಣ್ಣ್ ಬಿಟ್ಟರು ನೀ ಜೊತೆಗಿದ್ದ ಆ ಕ್ಷಣಗಳೇ ಎದುರಾಗಿದೆ
ನಿನ್ನೊಲವಿನ ಆ ಪರಿಯನು ಬಣ್ಣಿಸಲಾಗದೆ  ತಡಕಾಡಿದೆ
ಇತಿಹಾಸದ ಪ್ರೇಮ ಪುಟಕ್ಕೆ ನಿನ್ನೆಸರನು ಸೇರಿಸಬೇಕಿದೆ
ಈ ಪುಟ್ಟ ಹೃದಯದ ಬಯಕೆ -
ನೀ ಎಂದೆದಿಗೂ ನನ್ನವಳಾಗ ಬೇಕಿದೆ

-ಸೋಮೇಶ್ ಎನ್ ಗೌಡ

No comments:

Post a Comment