Tuesday, 26 February 2013

ಅವ ಮುದ್ದಾಡಿದ

ಅವ ಮುದ್ದಾಡಿದ
ತಣ್ಣನೆ ಗಾಳಿಲಿ ಕಚಗುಳಿಯಿಡುತ
ಅಕ್ಕರೆಯ ಮಾತಿನಲೇ ಕವಿತೆಗಳ ಗೀಚುತ
ಹಾಡುವ ದ್ವನಿಯಲ್ಲಿ ನನ್ನೆಸರ ಕೂಗುತ
ಮೋಡಗಳ ಮರೆಯಲ್ಲಿ ನನ್ನನ್ನು ತಬ್ಬುತ

ಅವ ಮುದ್ದಾಡಿದ
ಪ್ರೇಮದ ಒಳಗಿರೋ ಪುಷ್ಪವ ತೋರಿಸಿ
ಪ್ರೀತಿಯ ಮುಕುಟಕೆ ನನ್ನನೆ ಹೋಲಿಸಿ
ನೋಟವ ಬೆರೆಸಿ,ಭಯವನು ಸರಿಸಿ
ಒಲವಲಿ ಬದುಕುವ ಸೂತ್ರವ ಕಲಿಸಿ

ಅವ ಮುದ್ದಾಡಿದ
ಹೃದಯವು ನಾಚುವ ನರ್ತನ ಮಾಡಿ
ಚಿಲಿಪಿಲಿ ಹಕ್ಕಿಯ ಜೊತೆಯಲಿ ಕೂಡಿ
ತರ ತರ ಹೂಗಳ ಎರಚುತ ಹಾಡಿ
ಈ ಹೃದಯಕೆ ಮಾಡುತ ಪ್ರೀತಿಯ ಮೋಡಿ

ಅವ ಮುದ್ದಾಡಿದ..!!!

-ಸೋಮೇಶ್ ಎನ್ ಗೌಡ

Thursday, 21 February 2013

ಗದ್ದೆ ಪಕ್ಕದ ಹೊಲದಲ್ಲಿ

ಗದ್ದೆ ಪಕ್ಕದ ಹೊಲದಲ್ಲಿ
ಉದ್ದುದ್ದ ನಿಂತಿದ್ದ ಜೋಳದ ನಡುವಲ್ಲಿ
ಮುದ್ದಾಡಿ ಹೋದವನ
ನೆನಪೇಕೋ ಇಂದು
ಈ ಪೆದ್ಡಿ ಮನದಲ್ಲಿ
ಗಿರಗಿಟ್ಲೆ ಹೊಡೆಯುತ್ತಿದೆ

ಮಂಜು ಮಂಜಿನ ಮುಸುಕಲ್ಲಿ
ಅಂಜುತ್ತಾ ನಿಂತಿದ್ದ ನನ್ನಯ ಎದೆಯಲ್ಲಿ
ಮತ್ತೇರಿಸಿ ಹೋದ
ನನ್ನಯ ನಲ್ಲನ
ನೆನಪುಗಳೇಕೋ ಇಂದು
ನನ್ನ ಕಾಡುತ್ತಿವೆ

ಓಡೋಡಿ ಬಂದು ಕೆಸರಲ್ಲಿ
ಮಲ್ಲಿಗೆ ಇಟ್ಟು ಮುಡಿಯಲ್ಲಿ
ಪರಿಮಳವ ಹೀರುತ್ತಾ
ಕಣ್ಣಲ್ಲೇ ಕುಕ್ಕುತ್ತಾ
ನನ್ನ ಮೌನಿ ಮಾಡಿದವನ
ನೆನಪುಗಳಿಂದು
ಎಡೆಬಿಡದೆ ಕೆಣಕುತ್ತಿವೆ..
ಕೇಳು ಏಕೆಂದು??

  ಸೋಮೇಶ್ ಎನ್ ಗೌಡ

Friday, 15 February 2013

ತಬ್ಬಿದೆ ನಿನ್ನ ಮಬ್ಬಿನ ಹೊತ್ತಲಿ

ತಬ್ಬಿದೆ ನಾ ನಿನ್ನ ಮಬ್ಬಿನ ಹೊತ್ತಲಿ
ಎದೆಯೊಳಗೆ ಏನೋ ಪುಳಕ
ಹಬ್ಬದ ಸಡಗರ ಶುರುವಾಯ್ತು ಎದೆಯಲಿ
ನಿನ್ನೊಳಗೇನಿದೆ ಕೇಳೋ ತವಕ

 ಕಂಚಿನ ಸೀರೆ ಉಟ್ಟು ಮಿಂಚುತ್ತಾ ಬರ್ತಿದ್ರೆ ನೀನು
ಅಂಚಿನಲ್ಲಿ ಒಮ್ಮೆ ಹಾದು ಹೋಗಲೇಬೇಕು ನಾನು
ನಿನ್ನ ಮುಡಿಯಲ್ಲಿ ಮಲ್ಲಿಗೆ ಹೂವ ಕಂಡಿದ್ದೆ ಆದ್ರೆ ನಾನು
ಹೀರಲೇಬೇಕು  ಅದರ ಪರಿಮಳವನ್ನು

ನೀನು ನಾಚುತ್ತಾ ನಾಚುತ್ತಾ ರಂಗೋಲಿ ಹಾಕ್ತಿದ್ರೆ
ನವಿಲೆ ರೆಕ್ಕೆ ಬಿಚ್ಚಿ ಕುಣಿದಾಡ್ತಂತೆ ನನಗೆ
ನೀ ಬೆಕ್ಕ ನೋಡಿ ಬೆಚ್ಚಿ ಬಿದ್ದು ಮನೆಯೊಳಗೆ ಓಡ್ತಿದ್ರೆ
ಒಳಗೊಳಗೆ ಯಾರೋ ಕಚಗುಳಿ ಇಟ್ಟ೦ತೆ ಎನಗೆ

                   ಸೋಮೇಶ್ ಎನ್ ಗೌಡ

Thursday, 14 February 2013

ಎತ್ತ ಹೋಗುತ್ತಿದೆಯೋ ಹುಚ್ಚು ಖೊಡಿ ಮನಸ್ಸು

ಹುಚ್ಚು ಖೊಡಿ ಮನಸ್ಸು
ಎತ್ತ ಹೋಗುತ್ತಿದೆಯೋ
ಬೆತ್ತಲಾಗಿದೆ,ಕತ್ತಲಲ್ಲಿದೆ
ಹುತ್ತದ ಒಳಗೂ ಕೈಯ ಹಾಕುತ್ತದೆ

ಹುಚ್ಚು ಖೊಡಿ ಮನಸ್ಸು
ಎತ್ತ ಹೋಗುತ್ತಿದೆಯೋ
ಬೆಚ್ಚಿ ಬೀಳುವ ಸ್ವಭಾವ ವಾದರು
ಮಚ್ಚನು ಹಿಡಿವುದ ಬಿಡುವುದೇ ಇಲ್ಲ
ಕೊಚ್ಚೆಯಲ್ಲೂ ರೂಪಾಯಿ ಕಂಡರೆ
ಎತ್ತಿ ಮಡಿಚುವುದ ಮರೆವುದೇ ಇಲ್ಲ

ಹುಚ್ಚು ಖೊಡಿ ಮನಸ್ಸು
ಎತ್ತ ಹೋಗುತ್ತಿದೆಯೋ
ಮಿಣ ಮಿಣ  ಮಿಂಚುವ ಬಟ್ಟೆಯ ತೊಟ್ಟರು
ತರ ತರ ಆಸೆಗೆ ತಲೆ ಬಗ್ಗುವುದಿದುವೆ
ಲಕ ಲಕ ಹೊಳೆಯುವ ಸುಂದರಿ ಕಂಡರೆ
ತಕ ತಕ ಎಂದು ಕುಣಿವುದು ಇದುವೇ

ಹುಚ್ಚು ಖೊಡಿಮನಸ್ಸು
ಎತ್ತ ಹೋಗುತ್ತಿದೆಯೋ!!!

     -ಸೋಮೇಶ್ ಎನ್ ಗೌಡ

ಮನದರಮನೆಯ ಮಾಂತ್ರಿಕ


ಮನದರಮನೆಯ ಒಳಗಿನಿಂದ
ಬಂದನೊಬ್ಬ ಮಾಂತ್ರಿಕ
ಪಿಸುಮಾತೊಂದ ಹೇಳುವೆನೆಂದು
ಮುತ್ತನು ಕೊಟ್ಟ ರಸಿಕ

ಮಲ್ಲಿಗೆ ಹೂವನು ಮುಡಿಯಲು ಕೊಟ್ಟ
ಮೋಹಕ ಮೋಸವ ಮಾಡಿಯೇ ಬಿಟ್ಟ
ಮೆಲ್ಲಗೆ ಹತ್ತಿರ ಬಂದು ಗಲ್ಲಕೆ
ಇಟ್ಟನು ಕಪ್ಪು ಚುಕ್ಕೆಯನು

ಪ್ರೇಮದ ಮಂತ್ರವ ಜಪಿಸಲು ಹೇಳಿ
ನನ್ನಯ ಮೊಗವನು ನೋಡುತ ನಿಂತನು ಬಾಗಿ
ಆರದ ದೀಪವ ಇಟ್ಟು ಮುಂದೆ
ಕಲ್ಲಾದನು ನನ್ನ ಎದುರು ಅಂದೇ.|

   -ಸೋಮೇಶ್ ಎನ್ ಗೌಡ

Wednesday, 13 February 2013

ಮೋಹಕ ಬಲೆ

ಮೋಹಕ ಬಲೆಯ ಬೀಸಿ ಹಿಡಿದೆ ಬಿಟ್ಟಳು ನನ್ನ
ಪ್ರೇಮದ ಆಸೆ ತೋರಿಸಿ ಸೂರೆ ಮಾಡಿದಳು ನನ್ನ

ಅವಳ ಕವನ, ನಾ ಅವಳೀಗೆ ಮದನ
ಪ್ರೀತಿ ಎಂದರೆ ಹೀಗೇನಾ
ನಾಚುತಿದೆ ನನ್ನ ಈ ಮನ
ಹೇಳಾಲಾಗದೆ ಅವಳ ಹೆಸರನ್ನ  | ಮೋಹಕ!

ದಾರಿ ತುಂಬಾ ಅವಳದೇ ಕೂಗು
ಹೃದಯದಲ್ಲಿ ಅರಳಿದೆ ಪ್ರೀತಿ ಮೊಗ್ಗು
ಕಣ್ಣ ಮುಚ್ಚಿದರು ನಿದ್ದೆಯೇ ಬಾರದು
ಅವಳ ನೆನಪುಗಳು ನನ್ನ ಬಿಟ್ಟು ಹೋಗದು

ಕಾತರ, ನಮ್ಮ ಪ್ರೀತಿ ಮರ
ಬೆಳೆಯುವುದೇ ಬಲು ಗಡಸಾಗಿ
ತರ ತರ ಕನಸುಗಳು
ಬೆಳೆಯುತ್ತಿವೆ ಮನದಲಿ ಹುಲುಸಾಗಿ | ಮೋಹಕ!

                     - ಸೋಮೇಶ್ ಎನ್ ಗೌಡ