Tuesday 1 October 2013

ನನ್ನವರೆಂದು ನನಗ್ಯಾರು ಇಲ್ಲ!

ನೆತ್ತರದಿ ಉರಿಬಿಸಿಲು
ಕಂಕುಳಲಿ ಹಸಿ ಕೂಸು
ಸುತ್ತ ನೆರೆದಿದ್ದ ಜನರ ಮದ್ಯೆ
ಕೈ ಚಾಚಿ ಬೇಡುತಿಹಳು
ಒಂದೇ ಸಮನೆ
ಅಮ್ಮಾ ಅಮ್ಮಾ
ಎನಗೆ ಏನಾದರೂ ನೀಡಿರಮ್ಮ

ಮೂರು ದಿನದಿಂದ
ಹಸಿವಲ್ಲಿ ಬಳಲಿರುವೆ
ಹಸಿ ಕೂಸ ಹೊತ್ತು
ಬೀದಿ ಬೀದಿ ತಿರುಗಿರುವೆ
ಎನ್ನ ನೋಡಿ ಯಾರಿಗೂ
ಕರುಣೆಯೇ ಬರಲಿಲ್ಲ
ದುಡಿದು ತಿನ್ನುವ ಶಕ್ತಿ
ಆ ದೇವ ಕೊಡಲಿಲ್ಲ

ಪ್ರೀತಿಯಲಿ ಪಾಲಿಲ್ಲ ಜಾತಿಯಲಿ ಮೇಲಿಲ್ಲ
ನನ್ನವರೆಂದು ನನಗ್ಯಾರು ಇಲ್ಲ
ನಾನೆಂದರೇಕೆ ಎಲ್ಲಾ ತಿರಸ್ಕರಿಸುವರಲ್ಲ
ನಾನೆಂದರೇಕೆ ಎಲ್ಲಾ ತಿರಸ್ಕರಿಸುವರಲ್ಲ? :(
 
 -ಸೋಮೇಶ್ ಎನ್ ಗೌಡ


6 comments:

  1. Super! Somesh Nice Poem. Keep going

    ReplyDelete
    Replies
    1. Thank you! comment nalli nim hesru mention madilla... next time comment kelage nimma hesaru haaki
      Please..

      Delete
  2. ಕರುಳು ಹಿಂಡುವ ಇಂತಹ ದೃಶ್ಯಗಳು ನಮ್ಮೊಳಗಿನ ಅಹಂಕಾರವ ಅಳಿಸಲಿ.

    ReplyDelete
    Replies
    1. ನಿಜ Badarinath Palavalli ಸರ್ ನಮ್ಮೊಳಗಿನ ಅಹಂಕಾರ ಅಳಿದಾಗಲೇ ಇಂತಹ ದೃಶ್ಯಗಳು ಕಣ್ಮರೆಯಾಗಲು ಸಾದ್ಯ! ಧನ್ಯವಾದಗಳು ಸರ್

      Delete
  3. ಮನತಟ್ಟುವ ಕವಿತೆ ಸೋಮೇಶ್, ಚೆನ್ನಾಗಿದೆ

    Uday

    ReplyDelete