Tuesday, 22 October 2013

ಕಾಡುವ ನಿನ್ನ ಕತೆಯಲ್ಲೇನಿದೆ?


ಎಲ್ಲಿರುವೆ
ಎಲ್ಲಿರುವೆ….?
ಯಾರಿಗೆ ಕಾದು ಕುಳಿತಿರುವೆ
ಎಲ್ಲಿರುವೆ ನಲ್ಲೆ
ಎಲ್ಲಿರುವೆ..?
ಯಾರ ಹಾದಿಯ ಕಾದಿರುವೆ

ನಿನ್ನ ಹುಡುಕುತಾ ಮನ ಬೆಂದಿದೆ
ಕಾಣದೆ ನಿನ್ನ ಕಸಿವಿಸಿಕೊಂಡಿದೆ
ಕನಸಲೂ ಬಾರದೆ ಹೃದಯವ ಚುಚ್ಚಿದೆ
ಕಾಡುವ ನಿನ್ನ ಕತೆಯಲ್ಲೇನಿದೆ?
ಎಲ್ಲಿರುವೆ
ಎಲ್ಲಿರುವೆ…?
ಕಾಣದೆ ಏಕೆ ಕಾಡುತ್ತಿರುವೆ

ನನ್ನಲಿ ಎಂತ ಬಿಗುಮಾನ
ನಾ ಮಾಡಿದ ತಪ್ಪಾದರೂ ಏನಾ?

ಕತ್ತಲೂ ಕವಿದರು ಬರುವಿಕೆ ಇಲ್ಲ
ಕಾಣದೆ ನಿನ್ನ ನೆಮ್ಮದಿ ಇಲ್ಲ

ಬಾ ಗೆಳತಿ ಬಾ ಗೆಳತಿ
ಬಣ್ಣದ ಸೀರೆ ಕಾಯುತಿದೆ
ಬಂದೊಡನೇ  ಅಪ್ಪಲೂ..
ಅಪ್ಪಿ.. ನಿನ್ನ ಮುದ್ದಾಡಲು
ಬಾ ಗೆಳತಿ ಬಾ ಗೆಳತಿ
ಬಡವನ ಉಡುಗೊರೆ ಕರೆಯುತಿದೆ
ನಿನ್ನೊಲವ ಸೇರಲು ಪರಿತಪಿಸುತಿದೆ
ಎಲ್ಲಿರುವೆ ನಲ್ಲೆ
ಎಲ್ಲಿರುವೆ
ಯಾರ ಹಾದಿಯ ಕಾದಿರುವೆ
ಯಾರ ಹಾದಿಯ ಕಾದಿರುವೆ?

ಸಾಕು ನಿಲ್ಲಿಸು ಈ ಕಾಣದ ಹುಡುಕಾಟ
ಮುಗಿಯಲಿ ಇಂದೇ ಕಾಯುವ ಆಟ
ಎಲ್ಲಿರುವೆ
ಎಲ್ಲಿರುವೆ….?
ಎಂದು ಮನ ಸೇರಲು ಬರುವೆ????

 -ಸೋಮೇಶ್ ಎನ್ ಗೌಡ 

Tuesday, 1 October 2013

ನನ್ನವರೆಂದು ನನಗ್ಯಾರು ಇಲ್ಲ!

ನೆತ್ತರದಿ ಉರಿಬಿಸಿಲು
ಕಂಕುಳಲಿ ಹಸಿ ಕೂಸು
ಸುತ್ತ ನೆರೆದಿದ್ದ ಜನರ ಮದ್ಯೆ
ಕೈ ಚಾಚಿ ಬೇಡುತಿಹಳು
ಒಂದೇ ಸಮನೆ
ಅಮ್ಮಾ ಅಮ್ಮಾ
ಎನಗೆ ಏನಾದರೂ ನೀಡಿರಮ್ಮ

ಮೂರು ದಿನದಿಂದ
ಹಸಿವಲ್ಲಿ ಬಳಲಿರುವೆ
ಹಸಿ ಕೂಸ ಹೊತ್ತು
ಬೀದಿ ಬೀದಿ ತಿರುಗಿರುವೆ
ಎನ್ನ ನೋಡಿ ಯಾರಿಗೂ
ಕರುಣೆಯೇ ಬರಲಿಲ್ಲ
ದುಡಿದು ತಿನ್ನುವ ಶಕ್ತಿ
ಆ ದೇವ ಕೊಡಲಿಲ್ಲ

ಪ್ರೀತಿಯಲಿ ಪಾಲಿಲ್ಲ ಜಾತಿಯಲಿ ಮೇಲಿಲ್ಲ
ನನ್ನವರೆಂದು ನನಗ್ಯಾರು ಇಲ್ಲ
ನಾನೆಂದರೇಕೆ ಎಲ್ಲಾ ತಿರಸ್ಕರಿಸುವರಲ್ಲ
ನಾನೆಂದರೇಕೆ ಎಲ್ಲಾ ತಿರಸ್ಕರಿಸುವರಲ್ಲ? :(
 
 -ಸೋಮೇಶ್ ಎನ್ ಗೌಡ