ನಾ ಬಿಟ್ಟ ಬಾಣ
ಅವನೆದೆಗೆ ತಾಕಿ
ಮೂಡಿಹುದೆ ಪ್ರೀತಿ ಇಂದು
ಒಲವೆಂಬ ಪಯಣ
ಶುರುವಾಗಿ ಅವನ
-ಜೊತೆಯಲ್ಲಿ ಸೇರುವುದೆಂದು?
ನನ್ನವನ ಮೊಗವು
ಹೂ ತುಂಬಿದ ವನವು!
ಸೆಳೆಯುತಿದೆ ದಿನವು ದಿನವೂ
ಪ್ರತಿ ರಾತ್ರಿ ಕನಸ
ಅದುಮಿಟ್ಟು ಮನಸ
ಬೇಯುವುದು ಇನ್ನೆಷ್ಟು ದಿವಸ
ನನ್ನೊಡೆಯಾ ಬಾರೋ
ಹೊಸ ಬೆಳಕ ತೋರೋ
ನೀಡೆನಗೆ ನಿನ್ನ ಹೃದಯ
ಈ ಜೀವ ನಿನ್ನದೆ ಗೆಳೆಯ
ಈ ಜೀವ ನಿನ್ನದೆ ಗೆಳೆಯ
-ಸೋಮೇಶ್ ಎನ್ ಗೌಡ

ಅವನೆದೆಗೆ ತಾಕಿ
ಮೂಡಿಹುದೆ ಪ್ರೀತಿ ಇಂದು
ಒಲವೆಂಬ ಪಯಣ
ಶುರುವಾಗಿ ಅವನ
-ಜೊತೆಯಲ್ಲಿ ಸೇರುವುದೆಂದು?
ನನ್ನವನ ಮೊಗವು
ಹೂ ತುಂಬಿದ ವನವು!
ಸೆಳೆಯುತಿದೆ ದಿನವು ದಿನವೂ
ಪ್ರತಿ ರಾತ್ರಿ ಕನಸ
ಅದುಮಿಟ್ಟು ಮನಸ
ಬೇಯುವುದು ಇನ್ನೆಷ್ಟು ದಿವಸ
ನನ್ನೊಡೆಯಾ ಬಾರೋ
ಹೊಸ ಬೆಳಕ ತೋರೋ
ನೀಡೆನಗೆ ನಿನ್ನ ಹೃದಯ
ಈ ಜೀವ ನಿನ್ನದೆ ಗೆಳೆಯ
ಈ ಜೀವ ನಿನ್ನದೆ ಗೆಳೆಯ
-ಸೋಮೇಶ್ ಎನ್ ಗೌಡ
