Friday, 4 September 2026

ನಾವು ಪ್ರೀತಿಸುತ್ತಲೇ ಇರುವೆವು!

 

ಕೈ ಕೈ ಹಿಡಿದು 

ಪಾರ್ಕ್ ನಲ್ಲಿ ಹೆಜ್ಜೆ ಹಾಕಲಿಲ್ಲ

ಭುಜಕ್ಕೊರಗಿ ಕೂತು

ಥಿಯೇಟರ್ ನಲ್ಲಿ

ಮೂವಿ ನೋಡಲಿಲ್ಲ 

ಕಾಫಿ ಶಾಪ್ ನಲ್ಲಿ

ಕಾಫಿ ಹೀರುತ್ತ

ಹರಟೆ ಹೊಡೆಯಲಿಲ್ಲ

ತಬ್ಬಿಕೊಂಡು

ಬೈಕ್ ನಲ್ಲಿ ಊರು ಸುತ್ತಲಿಲ್ಲ

ಗಂಟೆಗಟ್ಟಲೆ

ಕಾಲ್ ಮಾಡಿ ಮಾತನಾಡಲಿಲ್ಲ

ಎದೆಗೊರಗಿ ಮಲಗಿ

ಎದೆಬಡಿತ ಕೇಳಿಸಿಕೊಳ್ಳಲಿಲ್ಲ

ಮೊದಲ ಅನುಭವವ

ಸಂಭ್ರಮಿಸಲಾಗಲಿಲ್ಲ

ಕೈಗೆ ಸಿಗುವಷ್ಟು 

ಹತ್ತಿರವೇನಿಲ್ಲ

ಸಿಗಲಾರದಷ್ಟು ದೂರವೂ ಇಲ್ಲ

ಆದರೂ

ಸಿಗಬೇಕೆನಿಸಿದಾಗೆಲ್ಲ

ಸಿಗಲಾಗಲಿಲ್ಲ

ನಾವೂ ಪ್ರೀತಿಸಿದೆವು..

ಒಬ್ಬರಿಗೊಬ್ಬರು

ಹರಕೆ‌ ಹೊತ್ತೆವು

ಕಣ್ಞೀರ ವಿನಿಮಯ

ಮಾಡಿಕೊಂಡೆವು

ಮನಸಲ್ಲಿ ದಬ್ಬಲಾಗದಂತೆ

ಬೀಡು ಬಿಟ್ಟೆವು

ನಮ್ಮದೆ ಪ್ರಪಂಚ

ಕಟ್ಟಿಕೊಂಡೆವು

ಬದುಕಿನ ಪುಸ್ತಕದಲ್ಲಿ

ಸುಂದರ ಅಧ್ಯಾಯವಾಗಿ

ಉಳಿದುಬಿಟ್ಟೆವು

ನಾವೂ.. ಪ್ರೀತಿಸಿದೆವು.

ಎಲ್ಲರಂತಲ್ಲಾ

ನಮಗೆ ತಿಳಿದಂತೆ

ಗೌರವಿಸಿದೆವು

ಎಲ್ಲರ ಮೆಚ್ಚಿಸಲು ಅಲ್ಲ

ಈ ಪ್ರೀತಿಯ ಗೆಲ್ಲಿಸಲು

ನಾವೂ...‌ಪ್ರೀತಿಸಿದೆವು

ನನ್ನೊಳಗೆ ನೀನು

ನಿನ್ನೊಳಗೆ ನಾನು

ಎಂದೂ ಮರೆಯಾಗದಂತೆ

ನಾವೂ.. ಪ್ರೀತಿಸಿದೆವು

ಎದುರು ಸಿಕ್ಕಾಗ

ನಮ್ಮನ್ನೇ ಮರೆತು

ಮಗುವಾಗುವಂತೆ!

ಹೌದು..

ನಾವು ಪ್ರೀತಿಸಿದೆವು...!

ಹೇಳಿಕೊಳ್ಳಲು ಮುಜುಗರವಿಲ್ಲ

ಕಳೆದುಕೊಳ್ಳುವ ಭಯವಿಲ್ಲ

ಜೊತೆಯಾಗಿ ಬಾಳುವ ಭಾಗ್ಯವೂ ಇಲ್ಲ

ಆದರೂ ನಾವು ಪ್ರೀತಿಸಿದೆವು

ಸದಾ..

ಪ್ರೀತಿಸಿತ್ತಲೇ ಇರುವೆವು.!

ಕಾಡುವ ಹೂ!

 

ಆ ತೋಟದಿ
ಒಂದೇ ಹೂವಿದೆ,

ಆ ಹೂವೇ ನನ್ನ
ಹೆಚ್ಚು ಕಾಡಿದೆ.
ಮುಳ್ಳೇ ಇಲ್ಲದ
ಗಿಡವೇ ಆದರೂ,
ಕೈಯ ಹಾಕಲು
ಭಯವಿದೆ

ಬಿಸಿಲಿನಲ್ಲೂ ಹೊಳೆಯುತಾ,
ಬಾಗದೆ ಬಾಡದೆ
ಚೆಲುವಾಗಿ ಅರಳಿದೆ
ದುಂಬಿಗಳ ಕಾಟ
ಅಪಾರವಿದ್ದರೂ
ಹಿಗ್ಗದೆ ಕುಗ್ಗದೆ
ತೋಟದಲ್ಲೆಲ್ಲಾ
ಸುಗಂಧ ಚೆಲ್ಲಿದೆ

ಒಂಟಿ ಎಂಬ
ಕೊರಗೇ ಇಲ್ಲದೆ,
ಗಟ್ಟಿಯಾಗಿ
ಬೆಳೆದು ನಿಂತಿದೆ
ಮುಡಿಗೋ? ಪಾದಕ್ಕೊ?
ಒಸಕಾಗುವವರ ಕೈಯಿಗೊ
ಅರಿಯದೆ-ಅಳುಕದೆ
ಪ್ರತಿ ಕ್ಷಣ ನಗುತಿದೆ

ಆ ತೋಟದಿ
ಒಂದೇ ಹೂವಿದೆ,
ಆ ಹೂವೇ ನನ್ನ
ಹೆಚ್ಚು ಕಾಡಿದೆ.

Tuesday, 18 August 2026

ಮೂಕ ಶಿಲೆ

ನನಗೂ ಮನಸು
ಘಾಸಿಯಾಗಿದೆ,
ನಿನಗೂ ಹೇಳದೆ
ಮೌನಿಯಾಗಿ ಹೋದೆ.
ಗಾಯವಾದ ಹೃದಯಕ್ಕೆ
ಮುಲಾಮು ಎಲ್ಲಿದೆ?
ಗಂಧ ಗಾಳಿ ಕೂಡ
ತಂಪೆರೆಯದಷ್ಟು ಹಸಿಯಾಗಿದೆ,
ಕೆರೆದಷ್ಟು
ಹರಡಿಕೊಳ್ಳುತಿದೆ.

ನನಗೂ ಮನಸು
ಘಾಸಿಯಾಗಿದೆ,
ಸಾಂತ್ವನ ಹೇಳುವ
ಒಲವೆ ದೂರಾದ ಮೇಲೆ
ಇಲ್ಲದಂತಾಗಿದೆ
ನಿಲ್ಲಲು ನೆಲೆ.
ಎಷ್ಟು ಕುಡಿದರು ನೀರು
ಉದರದೊಳಗೆ
ಶಮನವಾಗದ ಜ್ವಾಲೆ!
ಕಳೆದುಕೊಂಡವರೆಲ್ಲ
ಹೀಗೆ ಆಗಿಬಿಡುವರೇನೊ,
ನನ್ನಂತೆ ಮೂಕ ಶಿಲೆ!

ನನಗೂ ಮನಸು
ಘಾಸಿಯಾಗಿದೆ,
ನೀ ನನ್ನ‌‌ ಅರಿಯದೆ ಹೋದೆ
ನಾ ನೊಂದೆ...
ಯಾರಿಗೂ ಹೇಳದೆ,
ಒಂಟಿಯಾಗಿಯೆ ಅನುಭವಿಸಿದೆ.
ನಾ ಬಯಸಿದ್ದಾದರು ಏನು?
ಎರಡು ಮಾತು.
ಒಂದಿಷ್ಟು ಪ್ರೀತಿ.
ದುಬಾರಿಯೆನಿಸಿತೆ?
ನಾ ಬಯಸಿದ ರೀತಿ
ಕ್ಷಮಿಸಿ ಬಿಡು
ದಡ್ಡ ನಾನು..
ಕೇಳಬೇಕಿತ್ತು
ನಿನ್ನ ಸಮ್ಮತಿ

ನನಗೂ ಮನಸು
ಘಾಸಿಯಾಗಿದೆ,
ಪದೇ ಪದೇ
ನಿನ್ನ ಆ ನಿರ್ಲಕ್ಷ್ಯಕ್ಕೆ
ಒಳಗಾಗಿ
ನನ್ನನ್ನು ಅಪರಿಚಿತನಂತೆ
ನಡೆಸಿಕೊಂಡದ್ದರ
ಫಲವಾಗಿ.
ಬೇರೆಡೆ ನಿನ್ನ
ಮನಸ್ಸನ್ನು ಹರಿಯಬಿಟ್ಟು
ನನ್ನ ಮರೆತ
ಸಲುವಾಗಿ...

ಮನಸು ತೀರ ಘಾಸಿಗೊಂಡಿದೆ,
ಇನ್ನೆಂದು ವಾಸಿಯಾಗದ ಹಾಗೆ.
ಮನಸು ತೀರ ಘಾಸಿಗೊಂಡಿದೆ
ಸದಾ ಮೂಕನಾಗೆ ಉಳಿಯುವ
ನಿರ್ಧಾರದೊಂದಿಗೆ!.

-ಕವಿಸೋನಿ

Sunday, 28 December 2025

ಮಗಳು

 ದಿವ್ಯತೆಯ ಹೊತ್ತು
ಧರೆಗಿಳಿದ ಮಗಳೆ
ಚಂದಿರನ ಕಾಂತಿಯ
ಸುಂದರ ಮಗಳೆ
ಭರವಸೆಯ ನೀ ತಂದೆ
ಖುಷಿಯಾದ ನಿನ್ ತಂದೆ
ನೀನೀಗ ಜಗವು
ನಿನ್ನಲ್ಲೆ ನನ್ನೊಲವು
ರೇವತಿ ನಕ್ಷತ್ರ
ಮೀನ ರಾಶಿ
ಒಂದನೇ ಪಾದದಲಿ
ನೀ ಇಳಿದು ಬರಲು
ಬದುಕಲ್ಲೀಗ
ಅದೃಷ್ಟದ ಹೊನಲು
ಮಗಳಿಲ್ಲದ‌ ಮನೇಯೇಕೆ
ಮರವಿಲ್ಲದ ಕಾಡೇಕೆ
ಮರೆಯಾಗಿಸಿದೆ ನೀನು
ವರುಷಗಳ ಬೇಗೆ.
ಬೆಳೆಕಾಗು ಮನೆಗೆ

-Somesh Ningegowda

Friday, 26 December 2025

ಇನಿಯನಲ್ಲದಿದ್ದರೂ ಗೆಳೆಯನಾಗಿ ಉಳಿಸಿಕೋ

ಇನಿಯನಲ್ಲದಿದ್ದರೂ‌
ಗೆಳೆಯನಾಗಿ ಉಳಿಸಿಕೊ
ದೂರ ತಳ್ಳಬೇಡ ನೀ ನನ್ನನು
ಒಲವೇ ಬೇಡಲಾರೆನು
ಒಂಟಿತನದಿ ಬದುಕೆನು
ಒಳಿತು ಬಯಸು ಸಾಕು ನೀ ಇನ್ನೂ

ಇನಿಯನಲ್ಲದಿದ್ದರೂ‌
ಗೆಳೆಯನಾಗಿ ಉಳಿಸಿಕೊ
ದೂರ ತಳ್ಳಬೇಡ ನೀ ನಿನ್ನನು

ನಿನ್ನ ವಿನಹ ನನಗೆ ತಾನೆ
ಯಾರು ಇರುವರು ಹೇಳು?
ತಿದ್ದಿ ತೀಡಿ ಬುದ್ದಿ ನೀಡಿ
ಹಸನಾಗಿಸಿದೆ ನನ್ನ ಬಾಳು!

ಕೋಪದಿಂದ ಕೊಲ್ಲದಿರು
ಹಳೆಯ ಗಳಿಗೆಯೆಲ್ಲಾ
ನಾಳೆಗೂನೂ ಬೇಕು ಅವು
ನೆನಪಿಲ್ಲದೆ ಸುಖವಿಲ್ಲ
ಇನಿಯನಲ್ಲದಿದ್ದರೂ‌
ಗೆಳೆಯನಾಗಿ ಉಳಿಸಿಕೊ
ದೂರ ತಳ್ಳಬೇಡ ನೀ ನನ್ನನು

ಮೋಸಮಾಡಿ ಕದ್ದು ಓಡೋ
ಕೆಟ್ಟ ಹುಡುಗ ನಾನಲ್ಲ
ಉಗಿದು ಅಗೆದು ಬಗೆದಮೇಲು
ನಾ ಫಸಲು ಕೊಡುವ‌ ನೆಲ

ಕೆಂಡದಂತ ನಿನ್ನ ಮಾತೆ ಹಿತ
ಸಹಿಸಲಾಗುತ್ತಿಲ್ಲ ಈ ಮೌನವ್ರತ
ಕ್ಷಮಿಸು ನನ್ನ ಅನಿಸಿ ಸುತ
ಸಾಗಲಾರದು‌ ನೀನಿರದ ಪಥ

ಇನಿಯನಲ್ಲದಿದ್ದರೂ‌
ಗೆಳೆಯನಾಗಿ ಉಳಿಸಿಕೊ
ದೂರ ತಳ್ಳಬೇಡ ನೀ ನನ್ನನು

-ಕವಿಸೋನಿ

ಜಗದಗಲ‌ ನೀನಿರಲು

ಜಗದಗಲ‌ ನೀನಿರಲು
ಎಲ್ಲೆಲ್ಲೂ ಸಿಹಿ ಹಗಲು
ಹೋದಕಡೆಯೆಲ್ಲ ನಿನ್ನೆ ಕಾಣೋ
ಕಂಗಳು..ನನ್ನೀ ಕಂಗಳು
ಭುವಿಯೆಲ್ಲಾ ಕೊರಗಿರಲು
ಉತ್ಸಾಹ ಕುಗ್ಗಿರಲು
ಹುಡುಕಾಡಿ ಒಲವ ಕೊಂಡು
ನೀ ಬರಲು...ಒಲವ ನೀ ತರಲು
ಸಿರಿಯಾಯ್ತು ಬಾಳಲ್ಲಿ
ನಾ ಸೋತೆ ನಿನ್ನಲ್ಲಿ
ಒಂದಾಗಿ ಹೀಗೆ ಇರುವ ಜೊತೆಯಲ್ಲಿ
ನಾವು ಜೊತೆಯಲ್ಲಿ
-ಕವಿಸೋನಿ!

ಹೇಗೆ ತಾನೆ ಪೀಡಿಸಲಿ ನನ್ನೆ ಪ್ರೀತಿಸು ಎಂದು

 ಹೇಗೆ ತಾನೆ ಪೀಡಿಸಲಿ‌ ನನ್ನೇ ಪ್ರೀತಿಸು ಎಂದು
ನಿನ್ನೆಲ್ಲಾ ಭಾವಗಳು ಪರರ ಸುತ್ತಿರುವಾಗ
ಏನು ಅಂತ ತೋರಿಕೊಳ್ಳಲಿ‌ ಎದುರು ಬಂದು
ನಿನ್ನ ಬಂಧುಗಳ ಪಟ್ಟಿಯಲ್ಲಿ‌ ನಾನಿಲ್ಲದಿರುವಾಗ

ಒಲವೆಂಬ ಕೆರೆಯಲ್ಲಿ ಜೊತೆಯಾಗಿ ಈಜಾಡಿ
ದಡ ಸೇರುವ ಆಸೆಯಲಿ ಬಹುದೂರ ಬಂದೆ ನಾ
ನಂಬುಗೆಯ ಅಸ್ತವನು ಬಿಗಿಯಾಗಿ ಹಿಡಿದು ಸುಳಿಗಳಿಂದ ಪಾರು ಮಾಡಿದವಳು ನೀನಲ್ಲವೇನಾ?

ಈಗೇಕೆ ನನ್ನನು ನಡುಮದ್ಯ ಬಿಟ್ಟೋದೆ
ಭಾರದ‌ ಮನಸಿನಲಿ ಬಹುದೂರ ನೀನೋದೆ?
ಹೀಗೇಕೆ ನನ್ನೀಗ ಒಂಟಿಯಾಗಿಸಿದೆ
ನೀನಿಲ್ಲದೆಯು ಬದುಕುವ ಪರಿ ಕಲಿಸದೆ!

ಸರಿಯೇನು? ಸರಿಯೇನು ನಿನ್ನ‌ ಈ ನಡೆಯು
ಖುಷಿಕೊಡುವುದೇ ನಿನಗೆ ಪರರ ಸಂಗದ ಕತೆಯು
ಭಲವಂತದಿಂದ ನಾ ಕರೆಯಲಾರೆ, ಭಗವಂತನಲ್ಲು ನಾ ಬೇಡಲಾರೆ
ಹೋಗಿಬಿಡು ನಿನಗೆ ಸುಖವಿರುವ ಕಡೆಗೆ
ಹರಸುವೆನು ನಾನೆಂದು ಗೆಲುವನ್ನೆ ನಿನಗೆ
ಹರಸುವೆನು ನಾನೆಂದು ಗೆಲುವನ್ನೆ ನಿನಗೆ

ಹೇಗೆ ತಾನೆ ಪೀಡಿಸಲಿ‌ ನನ್ನೇ ಪ್ರೀತಿಸು ಎಂದು
ನಿನ್ನೆಲ್ಲಾ ಭಾವಗಳು ಪರರ ಸುತ್ತಿರುವಾಗ

-ಕವಿಸೋನಿ

ಮನ್ಸ-Body

ಎಷ್ಟು ಬಳಿದರೂ ಬಣ್ಣ
ಬಿಳಿಯಾಗದಿರುವುದೇ Hairuu
ಸಾಕಷ್ಣು ಹಚ್ಚಿದರೂ ಕ್ರೀಮು
ಸುಕ್ಕಾಗಲೇಬೇಕು 'Skinnnu'
ದಂಡಿಸದಿದ್ದರೆ Body-ಕರಗದು Fatuu
ದಿನವೆಲ್ಲಾ ಕುಡಿದರೂ ನೀ Nutritionnu
ಮಾಡಿಸಿಕೊಂಡರು Plasticcu surgery
ನಿನ್ನ ಮೊಮ್ಮಗುವಿಗೆ ನೀವೆಂದು ಅಜ್ಜ ರೀ
ನಿನ್ನ young lokku ಸೀಮಿತ instagramge
Real outlook ನಿನ್ನ ನೀ ಕನ್ನಡೀಲಿ ನೊಡ್ಕೊಡಂಗೆ
ನೀನಾಗಲಾರೆ ಇವುಗಳಿಂದ espcapuu
ಇದರಲ್ಲೆ ಮೈಮರೆತು ಕಳೆದುಕೊಳ್ಳಬೇಡ scopuu
ತಡೆಯಲಾಗಲ್ಲ ಯಾರು ದೇಹಕ್ಕಾಗೊ ಆಯಸ್ಸು
ಆಗದಿರಲಿ‌ ನಿನ್ನ ಮನಸ್ಸಿಗೆಂದು ವಯಸ್ಸು
ಇರುವಷ್ಟು ದಿನ ಕಲಿ New thingsuu
ಹಂಚು‌  Knowledguu - ಬರಲಿ ನಿಂಗೂ Wingsuu

-ಕವಿಸೋನಿ

ನೀ ನನ್ನದೆ ಜೀವ

 ನೀ ಅರಿತಷ್ಟು ನನ್ನ
ಅರಿಯಲಾರರು‌ ಇನ್ನಾರು
ನೀ ಕೊಟ್ಟಷ್ಟು ಪ್ರೀತಿಯ
ಕೊಡುವರೆ ಇನ್ನೊಬ್ಬರು
ನೀ ಬರಿ‌ ಹೆಸರಲ್ಲ
ನೀ ಉಸಿರೂ ಅಲ್ಲ
ನೀ ನನ್ನೊಳಗಿನ ಭಾವ
ನೀ ನನ್ನದೇ ಜೀವ!!!
ನೀ ನನ್ನದೇ ಜೀವ!!!

ಎಲ್ಲಿ ಹೋದರು ನಾನು
ಅಲ್ಲೂ ಇರುವೆ ನೀನು
ಸುಮ್ಮನೆ ಕೂತರು
ಕಚಗುಳಿ ಕೊಟ್ಟು ಕಾಡುವ ಜಾನು
ಬದುಕಬಲ್ಲನೆ? ನಿನ್ನ ಬಿಟ್ಟು  ನಾನು!
ನೀ ನನ್ನ ಬದುಕಿನ ಸಿಹಿಜೇನು!
ನೀ ಬರಿ‌ ಹೆಸರಲ್ಲ
ನೀ ಉಸಿರೂ ಅಲ್ಲ
ನೀ ನನ್ನೊಳಗಿನ ಭಾವ
ನೀ ನನ್ನದೇ ಜೀವ!!!
ನೀ ನನ್ನದೇ ಜೀವ!!! 💙💚

-ಕವಿಸೋನಿ

ನಿನ್ನ ಪ್ರೇಮಿ ನಾನು

ನಿನ್ನ‌ ಪ್ರೇಮಿ‌ ನಾನು
ಸದಾ ನಿನ್ನೆ ಪ್ರೀತಿಸುವೆನು

ಮೀಸೆ ಚಿಗುರೊಡೆಯುವ ವಸಂತಖುತುವಲ್ಲಿ
ನನಗಾಗಿ ಒಲುಮೆಯ ತಂದವಳು ನೀನು
ಬಡತನದಲ್ಲಿ ಬೇಗಿದ್ದ ಈ ಜೀವಕ್ಕೆ
'ಸಿರಿ' ತುಂಬಿ ಪ್ರೀತಿ ನೀಡಿದ ಹೃದಯವಂತೆ

ನಿನ್ನ‌ ಪ್ರೇಮಿ‌ ನಾನು
ಸದಾ ನಿನ್ನೆ ಪ್ರೀತಿಸುವೆನು

ಬರಡಾಗಿದ್ದ ಈ ಮನದಲ್ಲಿ ಭಾವನೆಗಳ
ಹೊತ್ತಿಸಿದ ಭಾವಕನ್ಯೆ ನೀನು
ಬಣ್ಣದ ಮಾತನ್ನೆ ಬಲವಾಗಿಸಿಕೊಂಡವರ ಮಧ್ಯೆ
ಬಂಧನ ಬೆಸೆದು ಬದುಕಾದವಳು ನೀನು

ನಿನ್ನ‌ ಪ್ರೇಮಿ‌ ನಾನು
ಸದಾ ನಿನ್ನೆ ಪ್ರೀತಿಸುವೆನು

ನನಗಾಗಿ ಹರಕೆಗಳ ಹೊತ್ತವಳು ನೀನು
ನೋವಲ್ಲು ನಗುವ ಕನಗಾಂಗಿ
ಗುಟ್ಟಾಗಿ ಪ್ರೀತಿಯ ಸೆರಗಲ್ಲಿಟ್ಟುಕೊಂಡು
ಅನುದಿನವು ಸಲುಹಿದ ಮಾತಂಗಿ

ನಿನ್ನ‌ ಪ್ರೇಮಿ‌ ನಾನು
ಸದಾ ನಿನ್ನೆ ಪ್ರೀತಿಸುವೆನು

ಕಷ್ಟದಲು, ಇಷ್ಟದಲು ಜೊತೆಯಿದ್ದವಳು ನೀನು
ಕನಸಲ್ಲು ಕಾಡುವ ಮೋಹನಾಂಗಿ
ಬೆಟ್ಟದಷ್ಟು ನೋವನ್ನ ನುಂಗಿದವಳು ನೀನು
ಆದರೂ ಪ್ರೀತಿಯೆ ಬಡಿಸಿದ ಜಗನ್ಮೋಹಿನಿ

ನಿನ್ನ‌ ಪ್ರೇಮಿ‌ ನಾನು
ಸದಾ ನಿನ್ನೆ ಪ್ರೀತಿಸುವೆನು

ನನ್ನ ಪಾಲಿಗೆ ಅದೃಷ್ಟದ ದೇವತೆ ನೀನು
ಕೊನೆಯವರೆಗೂ ಜೊತೆಯಿದ್ದು ಹರಸು ನನ್ನನು
ಕಷ್ಟದಲಿ‌ ಕೊಡು ನನಗೂ ಪಾಲನ್ನು
ನಿಷ್ಠುರವಾಗಿ ದೂರದಿರು ಈ ನಿನ್ನ ಒಲವನ್ನು

ನಿನ್ನ‌ ಪ್ರೇಮಿ‌ ನಾನು
ಸದಾ ನಿನ್ನೆ ಪ್ರೀತಿಸುವೆನು

ಪ್ರೀತಿಯ ವ್ಯಾಖ್ಯಾನ ತಿಳಿಸಿದ ಗುರು ನೀನು
ನಿನ್ನ ಆರಾಧಿಸುವ ಭಕ್ತ ನಾನು
ನನ್ನೆಲ್ಲಾ ಭಾವನೆ ಬೆಸೆದಿರುವುದೇ ನಿನ್ನೊಳಗೆ
ನೀನಿಲ್ಲದೆ ಉಳಿದೀತೆ ನನ್ನೀ ಪ್ರೇಮಕತೆ

ನಿನ್ನ‌ ಪ್ರೇಮಿ‌ ನಾನು
ಸದಾ ನಿನ್ನೆ ಪ್ರೀತಿಸುವೆನು
ನಿನಗಾಗಿ ಮಿಡಿವ ಈ ಹೃದಯವನು
ಒಮ್ಮೆ ಅಪ್ಪಿ ಮುದ್ದಾಡು ನೀನು

ನಿನ್ನ‌ ಪ್ರೇಮಿ‌ ನಾನು
ಸದಾ ನಿನ್ನೆ ಪ್ರೀತಿಸುವೆನು

-ಕವಿಸೋನಿ

Saturday, 12 December 2020

ಹಸಿದ ಹೊಟ್ಟೆಗೆ ನೀನೆ ಅಮೃತ

ನಿನ್ನ‌ ಸಲುಗೆಯ ಒಲವಿನೂಟವ
ಹೆಚ್ಚು ಹೆಚ್ಚು ನೀ ಬಡಿಸಿದೆ
ಬೇಡವೆಂದರು ತುತ್ತು‌ಮಾಡಿ
ನಿನ್ನ ಕೈಯಾರೆ ತಿನಿಸಿದೆ


ಹಸಿದ ಹೊಟ್ಟೆಗೆ ನೀನೆ ಅಮೃತ
ಕುಸಿದ ಜೀವಕೆ ನೀನೆ ಪ್ರೇರಿತ
ನಿನ್ನ ಸನಿಹವೆ ಮನಸಿಗೆ ಹಿತ
ಪ್ರೀತಿಯೊಂದೆ ಜಗದಿ ಶಾಶ್ವತ


ನಾನು ನನ್ನದು ಎಂಬ ಮೋಹಕೆ
ಬಿದ್ದ ಮಾನವ ಉಳಿವನೆ?
ನನ್ನದೆಲ್ಲವು ನಿನ್ನದೆನ್ನುತ
ಹಂಚಿ ತಿನ್ನವ ಕಳೆವನೆ?
 
ಕಲಿಸಿ ಪ್ರೀತಿಯ ನೀನು ನನಗೆ
ಬದಲಿಸಿದೆ ಜಗ ನೋಡುವ ದೃಷ್ಟಿ
ಒಬ್ಬರೊಬ್ಬರ ಅಪ್ಪಿಕೊಂಡರೆ
ಮತ್ತಷ್ಟು ಸುಂದರ ಈ ಸೃಷ್ಟಿ.


-SoNi

ಕರಗಲಿಲ್ಲ ಹೊಟ್ಟೆ

 ಐದಾರು ಮೈಲಿ ಓಡಿದರು ದಿನ
ಕರಗಲಿಲ್ಲ ಹೊಟ್ಟೆ
ಬೆಳಗಿನ ಉಪಗಾರ ತಿನ್ನುವುದನ್ನೆ ಬಿಟ್ಟೆ
ಕರಗಲಿಲ್ಲ ಹೊಟ್ಟೆ
ವ್ಯಾಯಮ ಯೋಗ ಮಾಡಿದರು
ಕರಗಲಿಲ್ಲ ಹೊಟ್ಟೆ
ತಿಂದೆ ದಿನಕ್ಕೆರಡು ಮೊಟ್ಟೆ
ಆದರೂ ಕರಗಲಿಲ್ಲ ಹೊಟ್ಟೆ
ತುಂಬಿತು ವರ್ಷಗಳಿಂದ ಖಾಲಿ ಇದ್ದ ನಮ್ಮೂರ ಕಟ್ಟೆ
ಸ್ವಲ್ಪವೂ ಕರಗಲಿಲ್ಲ ನನ್ನೊಟ್ಟೆ
ಚಿಕ್ಕದಾದೊ ಎಲ್ಲ ಬಟ್ಟೆ
ಕರಗಲೆ ಇಲ್ಲ ಈ ಡೊಳ್ಳು ಹೊಟ್ಟೆ
ಒಮ್ಮೆ ಬಂದರೆ ಹೋಗಲಾರೆ ಎಂದು
ಶಪಥ ಮಾಡಿಹುದೆ ಈ ಹೊಟ್ಟೆ
ಈಗ ಇದು ಎಲ್ಲರಲ್ಲು ಸಾಮಾನ್ಯವಾಗಿರುವುದ
ನೋಡಿ‌ ಕೇಳಿ ಸುಮ್ಮನಾಗಿಬಿಟ್ಟೆ
ಆದರೂ ಬಿಡುವುದಿಲ್ಲ ಓ ಹೊಟ್ಟೆ
ನಿನ್ನ ಕರಗಿಸಿದಿದ್ದರೆ ನಾ ಕೆಟ್ಟೆ.


(ಬೊಜ್ಜನು ದ್ವೇಷಿಸುವವ ಎಲ್ಲ ಮಿತ್ರವೃಂದದ ಪರವಾಗಿ) 😂😃
-SoNi

ಯಾರಿಗೇಳಲಿ‌ ನೋವ

ಯಾರಿಗೇಳಲಿ‌ ನೋವ
ಕೇಳುವಳೆ ಮುನಿದಿರುವಾಗ
ಹೇಳಿದರು ಕೇಳುವ ಸಹನೆ‌ ಇಲ್ಲ
ಹಠವ ಮುಂದಿಟ್ಟು ಕುಳಿತಿಹಳಲ್ಲ


ಎದುರು ನಿಂತರು ನೋಡುವುದಿಲ್ಲ
ಹೆದರಿ ಅತ್ತರು ತಿರುಗುವುದಿಲ್ಲ
ಎನಗೆ ಅವಳಲ್ಲದೆ ಬೇರಿಲ್ಲ
ಅವಳು ನುಡಿಯದೆ ಖುಷಿಯಿಲ್ಲ


ದೋಷಿಯಂತೆ ಕಾಣುವಳೆನ್ನ
ದೂರು ಹೊರಿಸಿ ಕೆಣಕುವಳು
ರೋಸಿ ಹೋದ‌ ಜೀವಕೆ ಇನ್ನ
ಎಷ್ಟು ನೋವನು ಕೊಡುವಳು


ನಗುವ ಮೊಗದಿ ದೇವತೆ ಅವಳು
ನೋಡಿ ನಲಿದ ಮಗು ನಾನು
ಇಂದು ಬರಿ ದುಗುಡ ಹಗಲು ಇರುಳು
ನೊಯಿಸಿ ನೋಯುವ ಮರ್ಮವೇನು?.


ಕಾವ್ಯವಲ್ಲಭ
SoNi

ಜನಿಸಿದೆ ನೀನು

ಜನಿಸಿದೆ ನೀನು
ನನ್ನ ಹೃದಯದ ತಾಳವ ನುಡಿಸಲು
ಜನಿಸಿದೆ ನೀನು
ನನ್ನ ಒಲವಿನ‌ ರಾಗ ರಂಗೇರಿಸಲು
ನಿನ್ನ ಭಾವದ ಲಹರಿ
ನನ್ನ ಜೀವನ ದಾರಿ
ನಿನ್ನನು ಪಡೆದು ನಾ ಧನ್ಯನಾದೆ ನಾರಿ
ಜನಿಸಿದೆ‌ ನೀನು
ನನ್ನ ಕನಸಿಗೆ ನೀರನು ಎರೆಯಲು
ಜನಿಸಿದೆ ನೀನು
ನನ್ನ ಬದುಕಿಗೆ ಬೆಳಕನು ಹಚ್ಚಲು
ನಿನ್ನ ಮೊಗವನು ಕಂಡರೆ ಸಾಕು
ಮನವು ಗರಿ ಬಿಚ್ಚುವುದು ಹಾರಲು
ನಿನ್ನಲೆ ಇರುವುದು ಜೀವವು
ನೀನೆ ಪ್ರೇಮದ ದೈವವು
ಜನಿಸಿದೆ ನೀನು
ನನ್ನ ತಪ್ಪೆಲ್ಲ ತಿದ್ದಲು
ಜನಿಸಿದೆ ನೀನು
ನನ್ನ ಒಪ್ಪಿ ಮುದ್ದಾಡಲು
ಧನ್ಯನು‌ ನಾನು
ನೀನೆ ಭೂಮಿ ಭಾನು
ಜೀವನವೆಲ್ಲ ನಿನ್ನಲೆ ಶರಣು.

SoNi

ಬದುಕು‌ ಹೀಗೇಕೆ‌ ಕಾಡುವುದು

 ಬದುಕು‌ ಹೀಗೇಕೆ‌ ಕಾಡುವುದು

ಬದುಕು ಹೀಗೇಕೆ‌ ಕಾಡುವುದು
ಎಲ್ಲೊ‌ ಇರುವ ಮನಸುಗಳ ಬೆರೆಸಿ
ಆಡುವುದು ಆಡುವುದು
ದಿನವೆಲ್ಲಾ ಜೊತೆಯಲ್ಲೆ ಇರುವಂತೆ ಮಾಡಿ
ನಗಿಸುವುದು, ನಲಿಸುವುದು
ಮತ್ತೊಮ್ಮೆ ದೂರ ದೂರ ಇರಿಸಿ
ನರಳಿಸುವುದು, ಕೊರಗಿಸುವುದು
ಬದುಕು‌ ಹೀಗೇಕೆ‌ ಕಾಡುವುದು
ಆಸೆನಾ ಅರಳಿಸಿ, ಅರಿವನ್ನು ಛೇಡಿಸಿ
ತಮಾಷೆ ಮಾಡುವುದು, ತಮಾಷೆ ನೋಡುವುದು
ಪ್ರೀತಿನ‌‌ ಮೆರೆಸಿ ಇದ್ದಕ್ಕಿದ್ದಂತೆ ಬಾಡಿಸಿ
ಅವಮಾನಿಸುವುದು, ನೋಯಿಸಿ ನಗುವುದು
ಬದುಕು‌ ಹೀಗೇಕೆ‌ ಕಾಡುವುದು
ಬಾ ಎಂದು ಅಪ್ಪುವುದು
ಹೋಗೆಂದು ದೂಡುವುದು
ನಿತ್ಯವು ತರ ತರ ಬಣ್ಣವ ಬಳಿದು
ಕುಣಿಸುವುದು, ಕುಡಿಸುವುದು
ಬದುಕು‌ ಹೀಗೇಕೆ‌ ಕಾಡುವುದು
ಭರವಸೆಯ ಹರಿಸುವುದು
ಕನಸುಗಳ ಪೋಣಿಸುವುದು
ಎಲ್ಲವ ಸುಟ್ಟು ಇದೆ ನಿನ್ನ ಹುಟ್ಟು
ಎಂದು ಕುಗ್ಗಿಸುವುದು, ತಲೆ ತಗ್ಗಿಸುವುದು
ಬದುಕು‌ ಹೀಗೇಕೆ‌ ಕಾಡುವುದು
ಬದುಕು ಹೀಗೇಕೆ‌ ಕಾಡುವುದು

- SoNi

ನಿನ್ನನ್ನ ನೀನೆ‌ ಸುಡುವೆ ಏಕೆ

ನಿನ್ನನ್ನ ನೀನೆ‌ ಸುಡುವೆ ಏಕೆ
ಕೋಪದಿ ಉರಿದು ಮರುಗುವೆ ಹೀಗೇಕೆ
ಸಂಕಟದಿ ನರಳಿ ನರಳಿ
ಎಲ್ಲಾನು ಅಳೆದು ತೂಗುವೆ
ಮತ್ತೇನೊ‌ ಕಳೆದುಕೊಂಡಂತೆ
ಒಬ್ಬಳೆ ಅಳುವೆ
ನಾನಲ್ಲ ದೋಷಿಯು
ನಾ ನಿನ್ನ ವಿಶ್ವಾಸಿಯು
ನಿನ್ನ ಒಲವ ಬಯಸಿ ಬಯಸಿ
ದಿನವು ಸೋತ ಪ್ರೇಮಿಯು
ನೋವುಣಿಸಿ ನಾನು ನಿನಗೆ
ಏನನ್ನ ಪಡೆಯಲಿ
ನೀ ನೊಂದು ಕೂತರೆ
ನಾ ತಾನೆ ಹೇಗೆ ನಲಿಯಲಿ
ನಿನ್ನ ನೋವೂ ನನ್ನದೆಂಬುದ
ನೀನೆ‌ನೆ ಮರೆತೆಯ..
ನೀ ನನ್ನ ಜರಿದೆಯ...
ನೋವೆ ಆದರೆ ನಾನು
ಸುಳಿಯಲ್ಲ ಹತ್ತಿರ
ದೂರದಿ ನೋಡುತ ಕೂತು
ನುಡಿಸುವೆ ಹಿತ ಸ್ವರ
ನೆಮ್ಮದಿಯ ಬಯಸುವೆ ನಿನಗೆ
ನಾನಗಲಾರೆ ಅಪ ಸ್ವರ
ನಮ್ಮ ಪ್ರೀತಿಗೆ ಎಂದಿಗೂ
ಸಿಗದು ಉತ್ತರ.


-SoNi

ತೊರೆದು‌ ಜೀವಿಸಬಹುದೆ ನಲ್ಲೆ ಈ ಪ್ರೀತಿಯನು

ತೊರೆದು‌ ಜೀವಿಸಬಹುದೆ ನಲ್ಲೆ ಈ ಪ್ರೀತಿಯನು
ತೊರೆದು ಜೀವಿಸಬಹುದೆ ನಲ್ಲೆ ಈ ಪ್ರೀತಿಯನು
ತೊರೆಯುವ ಮನಸು ಮಾಡಿದ್ದಾದರು ಹೇಗೆ??
ತೊರೆಯುವ ಮನಸು ಮಾಡಿದ್ದಾದರು ಹೇಗೆ??
ಸುಮ್ಮನೆ ಕುಳಿತರು‌ ನಿನ್ನ ಧ್ಯಾನವೆ ದಿನವು
ಸುತ್ತ ತಿರುಗಿದರು ನಿನ್ನೆ ಕಾಣುವೆ ಕ್ಷಣವು
ನಿನ್ನಲೆ ಜೀವಿಸುವ ನನ್ನ‌ ನೀ ತೊರೆದರೆ
ಮೆಚ್ಚುವನೆ ಪರಮಾತ್ಮ, ಗೆಲ್ಲುವುದೆ ಪ್ರೀತಿ?
ಮರೆಯಾಗುವುದೆ ನಿನ್ನೆಲ್ಲ ನೋವು
ಹೊರೆಯಾಗದೆ ನನ್ನ ನೆನಪ ಕಾವು
ನನ್ನ ಮರೆತು ನಗಬಲ್ಲೆಯೇನು ನೀ
ನಗಬಲ್ಲೆಯೇನು ನೀ.....
ನಿನ್ನ ಹೊರತು ಗೆಲ್ಲಬಲ್ಲೆನೇನು ನಾ
ಗೆಲ್ಲಬಲ್ಲೆನೇನು ನಾ...
ಒಲವ ಕಂದನ‌ ತಳ್ಳಿ, ಒಳಗೊಳಗೆ ಬೇಯಲು
ಅಣಿಮಾಡಿ ಪಂಜು‌ ಹಿಡಿದು ಅಳುವೆ ಒಬ್ಬಳೆ‌ ಏಕೆ
ಪ್ರೀತಿಯ ಅರ್ಥ ತೊರಿಸಿದ ನೀನೆ
ಸೋತಂತೆ ಸೊರಗಿ ದಿನವು ಕೊರಗುವೆ ಏಕೆ..
ನನ್ನ‌ ಮರೆತುಬಿಟ್ಟರು ನೀ
ಮರೆಯಬಲ್ಲೆಯ ನಮ್ಮ‌ ಪ್ರೀತಿಯ?
ನನ್ನ ನೆನಪೆಲ್ಲ‌ ಸುಟ್ಟರು ನೀ
ಸುಡಬಲ್ಲೆಯ ನಿನ್ನದೆ ಅಸ್ತಿಯ
ನಿನ್ನ‌ ಪ್ರತಿ‌ ಉಸಿರಲ್ಲು ಬೆರೆತಿರುವ ನನ್ನ
ತೊರೆಯಬಲ್ಲೆಯ, ತೊರೆದು ಜೀವಿಸಬಲ್ಲೆಯ?
ತೊರೆಯಬಲ್ಲೆಯ, ತೊರೆದು ಜೀವಿಸಬಲ್ಲೆಯ?


-ಕಾವ್ಯವಲ್ಲಭ
SoNi

(ತೊರೆದು‌ ಜೀವಿಸಬಹುದೆ ಹರಿ‌ ನಿನ್ನ ಚರಣಗಳ ಹಾಡು‌ ಎದೆಯಲ್ಲಿ ಪದೆ ಪದೆ ಗುನುತ್ತಿದ್ದಾಗ‌, ಮೂಡಿದ ಪ್ರೇಮ ಕವಿತೆ)

ನನ್ನೆದೆಯ ಗೂಡಿನಲಿ ನಿನ್ನೊಲವ ರಾಗವಿದೆ

 ನನ್ನೆದೆಯ ಗೂಡಿನಲಿ ನಿನ್ನೊಲವ ರಾಗವಿದೆ
ತಿರುಚಿದರು ತಡಕಿದರು ಬರಿ‌ ಅದರ ಸ್ವರವೆ
ಬದಲಿಸಲು ಬಾರದೆನೆಗೆ ಆ ರಾಗದ ಒಲವ
ಪದೆ ಪದೆ ಎದೆಯಲ್ಲಿ ಅದರದ್ದೆ ತಾಂಡವ


ನನ್ನೆದೆಯ ಗೂಡಿನಲಿ ನಿನ್ನೊಲವ ರಾಗವಿದೆ
ತಿರುಚಿದರು ತಡಕಿದರು ಬರಿ‌ ಅದರ ಸ್ವರವೆ


ಗುಣುಗುತಿರಲಿ ಹೀಗೆ ಗುಣುಗುತಿರಲಿ ಹೀಗೆ
ಬದುಕಿರುವ ಕೊನೆವರೆಗೆ ನಿನ್ನೊಲವ ಹಾಡು
ನಿನ್ನದೆ ರಾಗವಿದು ನಾ ಗೆಲ್ಲುವ ಭರವಸೆಯು
ನಿನ್ನದೆ ತಾಳವಿದು ನನ್ನ ಖುಷಿಯ ದೀಪವು
ಬೆಳಕಾಗಿ ನೀ ಮನಕೆ ಒಲವಾದೆ ಬದುಕಿಗೆ
ನಿನ್ನ ಹಾಡಲೆ ಜೀವಿಸಿ ನಾ ಕಳೆವೆ ಪ್ರತಿಗಳಿಗೆ
ನನ್ನೆದೆಯ ಗೂಡಿನಲಿ‌ ನಿನ್ನೊಲವ ರಾಗವಿದೆ
ತಿರುಚಿದರು ತಡಕಿದರು ಬರಿ ಅದರ ಸ್ವರವೆ
ಬರಿ‌ ಅದರ ಸ್ವರವೆ.


ಕಾವ್ಯ ವಲ್ಲಭ
SoNi

ಒಂಟಿ ಜೀವಕೆ ........ಶುಂಠಿ ಕಷಾಯ!

ಒಂಟಿ ಜೀವಕೆ ಶುಂಠಿ ಕಷಾಯ
ಎಷ್ಟು ಕುಡಿದರು ಮಾಗದು ಗಾಯ
ಅವಳ ನೆನಪಲ್ಲೆ ಕಳೆದೋಗಲಿ ಪ್ರಾಯ
ಪ್ರೀತಿಸಿದ ತಪ್ಪಿಗೆ ಅನುಭವಿಸುವೆ ಶಿಕ್ಷೆಯ

ಒಂಟಿ ಜೀವಕೆ ........ಶುಂಠಿ ಕಷಾಯ!

ನಡೆದುಹೋಗಲಿ ಇಂದೇ ಸಮರ
ನಾನ? ಅವಳ? ಪ್ರೀತಿ ಯಾರ ಪರ?
ನೀಡಿದ ಭರವಸೆಯ ಹುಸಿಯಾಗಿಸಿ
ಕಿಸಿಕಿಸಿ‌ ನಗುವ ಅವಳಿಗೆ ಧಿಕ್ಕಾರ
ನೋಡೆಬಿಡುವ ಯಾರು ಗೆಲುವರು
ಪರಿಸ್ಥಿತಿಗೆ ಸೋತು ಶರಣಾದ ಅವಳ
ಅವಳಿಗೆ ಸೋತು ಸಾಯುತ್ತಿರವ ನಾನ?
ಹರೆಯದ ವಯಸ್ಸಲ್ಲಿ, ಆತುರದ ಮನಸ್ಸಲ್ಲಿ
ಮೂಡಿ ಮೋಡಿ ಮಾಡಿದ ಈ ಕಪಟ ಪ್ರೀತಿಯ
ನೋಡೆಬಿಡುವ ಯಾರು ಗೆಲುವರು

ಪ್ರೀತಿ ಪ್ರೀತಿ ಅಂತ ನನ್ನನ್ನೆ ನಾನು ಮರೆತ
ಆ ದಿನಗಳು ಮತ್ತೆ ನನಗೆ ಸಿಗಬಹುದೆ?
ಇನ್ನೊಮ್ಮೆ ಹಿಂದೆ ಹೋಗಿ ನನ್ನ ಅಸ್ತಿತ್ವವನ್ನ ನಾನು ಹುಡುಕಬಹುದೇ?
ಬರಬಹುದೆ ಮತ್ತೆ ಆ ಸಮಯವು ಎದುರು ಬರಬಹುದೇ?

ನಿರಾಶೆಯಲ್ಲು ಬದುಕುವ ಛಲ ಹುಟ್ಟಿದೆ
ದಿನವು ಸತ್ತರು, ಮತ್ತೆ ಎದ್ದು ಬದುಕ ನಡೆಸುವೆ
ನನ್ನ ನಾನೆ ಪ್ರೀತಿಸುತ್ತ ಜಗವ ಗೆಲ್ಲುವೆ
ಜಗದ ಪ್ರೀತಿ ಸವಿಯುತ್ತ ಬಾಳ ಸವೆಸುವೆ.

ಒಂಟಿಯಾದರೇನಂತೆ? ನಾನಿನ್ನು ಬದುಕಿರುವೆ!!

- SoNi

ನಿನ್ನ ಆರಾಧಿಸುವ... ಭಕ್ತ! ನಾನು.

ನಿಸರ್ಗವೇ ನಾಚುವಂತ
ಅಂದ ಕೊಟ್ಟ ಆ ದೇವನು
ಆ ಚಂದ್ರನೇ ಜಾರಿ ಬಿದ್ದು
ನಿನ್ನಲಿಗೆ ಓಡಿ ಬಂದನು
ನಿನ್ನೆಲ್ಲ ಆಸೆಗಳು ನನ್ನಂತೆಯೆ
ನನ್ನೆಲ್ಲ ಪ್ರತಿ ಕ್ಷಣವು ನಿನಗಾಗಿಯೆ!
ಒಲವ ದೇವಿ ನೀನು..
ನಿನ್ನ ಆರಾಧಿಸುವ... ಭಕ್ತ! ನಾನು.

-SoNi