Tuesday, 28 May 2019

ಅಯ್ಯೋ ಅಣಗಿಸಬೇಡಿ ನಮ್ಮ!

ಎಲ್ಲ ಅವಳೇ ಮಾಡ್ತಾಳೆ
ಆದರೂ ನನ್ನೆ ದೂರ್ತಾಳೆ
ಹಸಿವಿಗೆ Horlicks ಕೊಡ್ತಾಳೆ
ಅತ್ತರೆ diaper ಕಟ್ತಾಳೆ
ಅಯ್ಯೋ .. ಅಣಗಿಸಬೇಡಿ ನಮ್ಮ
ಅಯ್ಯಯ್ಯೋ ಅಣಗಿಸಬೇಡಿ ನಮ್ಮ
ಅತ್ತರು ಕಣ್ಣೀರೆ ಬರಲ್ಲ..ನಮ್ಮ ಕರ್ಮ!

ನಾವು....ಪ್ರೀತಿಲಿ ಬಿದ್ದ ಹುಡುಗರು!
ನಮಗೆ ಅವಳು ಏನ್ ಮಾಡಿದ್ರು ಸರಿ ಗುರು
ಅವಳ‌ ಗೆಲುವಲೆ ಒಲವ ಕಾಣುವ
ಅವಳ‌ ನಗುವಿಗೆ ದಿನವೂ ಬೇಡುವ
ನಾವು ಪ್ರೇಮದ ಅಪ್ಪಟ ಭಕ್ತರು !!

ತುಂಬಾ ಸಲುಗೆ ನಿನ್ನ ಮೇಲೆ ಓ ಒಲವೇ!

ತುಂಬಾ ಸಲುಗೆ ನಿನ್ನ ಮೇಲೆ ಓ ಒಲವೇ
ಮತ್ತೆ ಮತ್ತೆ ಕಾಡುವಾಸೆ ನಿನ್ನೆ ಚೆಲುವೆ
ಆತುರದಿ ಏನೋ ನುಡಿದೆ ನಾನು
ಹುಸಿಕೋಪದಿಂದ ಮುನಿದೆ ನೀನು
ಹೊಡೆದುಬಿಡು, ಬೈದುಬಿಡು ಸಹಿಸುವೆನು
ಮೌನದಲೆ ಚುಚ್ಚದಿರು ನಾ ಬದುಕೆನು

ತುಂಬಾ ಸಲುಗೆ ನಿನ್ನ ಮೇಲೆ ಓ ಒಲವೇ
ಮತ್ತೆ ಮತ್ತೆ ಕಾಡುವಾಸೆ ನಿನ್ನೆ ಚೆಲುವೆ

ಅತ್ತಾಗ ಮುದ್ದಿಸಿದವಳು ಬಿದ್ದಾಗ ಉಪಚರಿಸಿದಳು
ಖುದ್ದಾಗಿ ನನ್ನೆಲ್ಲಾ ಆಸೆಯ ಅರಿತವಳು
ಮತ್ತನ್ನು ಏರಿಸಿದವಳು ಒಲವಲ್ಲಿ ಆಡಿಸಿದವಳು
ಒಂದಾಗಿ ಬಾಳನು ನಡೆಸೊ ಕನಸ ಕಂಡವಳು
ನೀನಲ್ಲವೇ?
ನಿನ್ನೆಲ್ಲಾ ಕನಸಿಗೂ ಒಡೆಯ ನಾನಲ್ಲವೆ?
ಹೀಗೆಕೆ ಮೌನದಿ.... ನೀ ಕಾಡುವೆ
ಅಪ್ಪಿಬಿಡು ಒಮ್ಮೆ ಬಂದು ನಾ ಗೆಲ್ಲುವೆ!

ತುಂಬಾ ಸಲುಗೆ ನಿನ್ನ ಮೇಲೆ ಓ ಒಲವೇ
ಮತ್ತೆ ಮತ್ತೆ ಕಾಡುವಾಸೆ ನಿನ್ನೆ ಚೆಲುವೆ

Monday, 20 May 2019

ಜಗವ ಜರಿವ ಮನುಜ ನಿನ್ನ ರೂಪ ನೋಡಿಕೋ!


ಜಗವ ಜರಿವ ಮನುಜ ನಿನ್ನ ರೂಪ ನೋಡಿಕೋ
ಜಗವ ಜರಿವ ಮನುಜ ನಿನ್ನ ರೂಪ ನೋಡಿಕೋ

ನಗುವ ಮೊಗವಿಲ್ಲ
ನಲಿವ ಕ್ಷಣವಿಲ್ಲ
ನಾಳೆ ಗೊತ್ತಿಲ್ಲ
ನಿಂದು ಅಂತ ಏನು ಇಲ್ಲ

ಜಗವ ಜರಿವ ಮನುಜ ನಿನ್ನ ರೂಪನೋಡಿಕೋ

ಕಲಿತದ್ದು ಅರ್ಧ ಎಲ್ಲ
ಉಳಿಸಿದ್ದು ದೇವರೆ ಬಲ್ಲ
ಹುಡುಕಿಕೋ ನಿನ್ನ ಮೂಲ
ಸಾಯೋಕ್ ಮುಂಚೆ ಒಂದ್ಸಲ

ಜಗವ ಜರಿವ ಮನುಜ ನಿನ್ನ ರೂಪನೋಡಿಕೋ

ಸುಳ್ಳಲ್ಲೆ ಸುಖಿಸಿ ಬೆಳೆದೆ
ಸುತ್ತಣ ಜನರ ತುಳಿದೆ
ಸ್ವಾರ್ಥದಿ ನಟಿಸಿಮೆರೆದೆ
ಸಾವನ್ನು ಭ್ರಮಿಸಿ ತೊರೆದೆ!

ಜಗವ ಜರಿವ ಮನುಜ ನಿನ್ನ ರೂಪ ನೋಡಿಕೋ
ಜಗವ ಜರಿವ ಮನುಜ ನಿನ್ನ ರೂಪ ನೋಡಿಕೋ



Sunday, 17 March 2019

ಇದು ಪ್ರಣಯ ರಾಗವು...!

ನಿನ್ನ ಬಾಚಿ ತಬ್ಬಿ ನಾನು ....
ಸರಸ ಆಡಲೇನು
ನಿನ್ನ ಮೋಹಕ ಸ್ಪರ್ಶಕೆ
ಮೈ ಮರೆಯಲೇನು
ನಿನ್ನ ಕಣ್ಣ ನೋಟಕೆ...
ಕರಗಿ ಹೋದೆ ನಾನು
ನಿನ್ನ ತುಟಿಯಲೆ ಇರುವುದು ಜೇನು... ಸಿಹಿ ಜೇನು
ನೀ ಮುತ್ತನಿಡಲು...
ನೀ ಮುತ್ತನಿಡಲು....
ನೀ ಮುತ್ತನಿಡಲು ಅರಿತೆ ಒಲವನು
ಮೈಬಿಸಿಯೇರಿರಲು..
ಮರೆತೆ ಜಗವನು...ಮರೆತೆ ಜಗವನು
ಇದು ಪ್ರಣಯವು.....ಪ್ರಣಯ ರಾಗವು...
ಇದು ಪ್ರಣಯವು.....ಪ್ರಣಯ ರಾಗವು...
ಅವಳ ಸ್ಪರ್ಶದಿಂದ ಹೊಮ್ಮಿದ ಮಧುರ ಸಂಗೀತವು!

-SoNi

ಪ್ರೀತಿ ಪಾರ್ಟ್ ಟೈಮ್ ಜಾಬಲ್ಲ!

ಕಾಟಾಚಾರಕ್ಕೆ ಪ್ರೀತಿಮಾಡಿ
ಆಟ ಆಡ್ಸಿ ಓಡೋಗಕ್ಕೆ
ಗೊಂಬೆನಾ ನಾನು.... ಹೇಳು ನೀನು
ತೂ ಅಂತ ಹೇಳಿ ಮಂತ್ರ ಹಾಕಿ
ಸಿಕ್ ಸಿಕ್ದಂಗೆ ‌‌‌‌ಲಜ್ಜಿ ಹಾಕೋಕೆ
ನಿಂಬೆನಾ.... ನಾನು ಹೇಳು ನೀನು
ಹೃದಯದ ಮಾತು ಅರಿಯದೆ
ಹೊರಟಿಹ ನಿನಗೆ ಕೊಬ್ಬಿದೆ
ಕನಸುನು ನೀನೆ ಎಣೆದಿದೆ
ಹೇಳದೆ ಕೇಳೆದೆ ಮುರಿದಿದೆ
ಹುಡುಗರ ಬಾಳಲ್ಲಿ ಹುತ್ತ ಕಟ್ಟಬೇಡಿ
ಬುಸುಗುಡುವ ಹಾವಾಗಿ ನಮ್ಮ ಮಾಡಬೇಡಿ
ಪ್ರೀತಿ ಪಾರ್ಟ್ ಟೈಮ್ ಜಾಬಲ್ಲ
ಆಸೆ ಹುಟ್ಟೋದೆ ಹುಡುಗ್ರ ಜೇಬಲ್ಲ?

-SoN!


ಕವಿಯಷ್ಟೇ ನಾನು ಕವಿತೇನೆ ನೀನು!

ಕಾಯುತಿರುವ ಮನಕೆ‌ ನೀಡು ಒಮ್ಮೆ ಆಹ್ವಾನ
ಕಾಡಬೇಡ ಇನ್ನು ತಬ್ಬಿ‌ ಮಾಡು ಸಾಂತ್ವನ
ಮೋಹಿತ ನಾನು ನಿನ್ನ ಕಡೆಗೆ
ಮೌನವ ಮುರಿದು ಕರೆಯೆ ಬಳಿಗೆ

ಕನಸಲ್ಲೆ ಇನ್ನು ಹಾಳಾಗಲಾರೆ
ಜೊತೆಯಲ್ಲಿ ನಡೆದು ನೀ ಮಾಡು ಸೂರೆ
ನಿನ್ನಲ್ಲೆ 'ಕಾವ್ಯ'ದ ಸೊಬಗಿದೆ
ಮಾತಲ್ಲೆ ಒಲವಿನ ಸಿರಿಯಿದೆ

ನಿನ್ನೆದುರು ಕೂತು ನನ್ನನೆ ಮರೆತು
ಸೇರಲಿ ನನ್ನುಸಿರು ನಿನ್ನಾತ್ಮಕೆ
ಕವಿಯಷ್ಟೇ ನಾನು ಕವಿತೇನೆ ನೀನು
ಕರಗಿಹನು ಮೂನು ನಿನ್ನ ಅಂದಕೆ

-SoNi

Sunday, 6 January 2019

Do you know Who am I?.

Few months ago, some English lines have been suddenly popped-up in my mind and turned into a poem. No! sorry ...not a poem!  That has to be decided by you whether it is a poem or just lines  You have the full authority to judge, please read the below.

Time does change, but I don't!
Money brings you worries, but I don't!
Love makes you disappointed, but I don't!
Life goes crazy, but I don't!
Do you know who am I?...
Do you know...who am I?
I am......No One...I am NO ONE!
:
:
Education makes you a master
Designation brings you the honor
Power orders you to act as a leader
Goal steals your sleep and peace
'I' give you nothing, because I have nothing!
Do you know who am I?
Do you know...who am I?
I am......No One...I am NO ONE!
:
Be happy Being NO ONE! 




@@@
Is it a poem? Whatever… leave it! My well wisher Lingaraj Managuli Sir had sent first stanza to his friend Brinda Sumithra Who has composed tune for it and sung! It’s very beautiful Ma’am! Thank you so much! _/\_ (The song has also been uploaded here for Nimagaagi 
: